ಶಿಕ್ಷಕಿ ದುಂಡಾವರ್ತನೆ..

ವಿಜಯನಗರ..ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿಯ ದುರ್ವರ್ತನೆಗೆ ಬೇಸತ್ತ ಮಕ್ಕಳು ಮತ್ತು ಪೊಷಕರು ಶಿಕ್ಷಕಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಸೂಲಮ್ಮ ಗುಡಿ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಶಾಲೆಯ ಮುಖ್ಯ ಶಿಕ್ಷಕಿ ಜನಾಬಿ ವಿನಾಕಾರಣ ಮಕ್ಕಳಿಗೆ ತೊಂದರೆ ನೀಡುತಿದ್ದಾರೆ, ಬಡ ಮಕ್ಕಳು ಓದುವ ಈ ಸರ್ಕಾರಿ ಶಾಲೆಯಲ್ಲಿ ಮಕ್ಕಳು ಸಮವಸ್ತ್ರ ಧರಿಸದೆ ಇದ್ರೆ, ಮಕ್ಕಳನ್ನ ಶಾಲೆಯಿಂದ ಹೊರಗಡೆ ನಿಲ್ಲಿಸಿ ಶಿಕ್ಷಿಸುತ್ತಾರೆ. ಇದು ಸರಿ ಅಲ್ಲ ಅಂದು ಆರೋಪಿಸಿದ ಪೊಷಕರು ಶಾಲೆಯ ಕೊಠಡಿಯಲ್ಲಿ ಸೇರಿ ತಮ್ಮ ಆಕ್ರೋಶ ಹೊರ ಹಾಕಿದರು.

ಅದಲ್ಲದೆ ಇದನ್ನ ಪ್ರಶ್ನಿಸುವ ಪೊಷಕರಿಗೂ ಸರಿಯಾಗಿ ಸ್ಪಂದಿಸದೆ ದುಂಡಾವರ್ತನೆ ತೋರುತ್ತಾರೆ ಎಂದು ಆರೋಪಿಸಿದ ಪೊಷಕರು, ರಾಜಕೀಯ ಗಣ್ಯ ವ್ಯಕ್ತಿಗಳ ಕುಮ್ಮಕ್ಕಿನಿಂದ ಹೀಗೆ ವರ್ತಿಸುತಿದ್ದಾರೆ ಎಂದು ಕೂಡ ಆರೋಪಿಸಿದರು. ಶಿಕ್ಷಕಿಐ ಈ ವರ್ತನೆಗೆ ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳು ಖಡಿವಾಣ ಹಾಕಬೇಕೆಂದು ಒತ್ತಾಯಿಸಿದ್ದಾರೆ.