You are currently viewing ತನ್ನ ಕಾರನ್ನ ಬಚ್ಚಿಟ್ಟು ಕಳ್ಳತನ ಆಗಿದೆ ಎಂದು ದೂರು ಕೊಟ್ಟ. ಕಾರಣ ಏನು ಗೊತ್ತ..?

ತನ್ನ ಕಾರನ್ನ ಬಚ್ಚಿಟ್ಟು ಕಳ್ಳತನ ಆಗಿದೆ ಎಂದು ದೂರು ಕೊಟ್ಟ. ಕಾರಣ ಏನು ಗೊತ್ತ..?

ವಿಜಯನಗರ..ವಾಹನಗಳಿಗೆ ಇನ್ಶುರೆನ್ಸ್ ಮಾಡಿಸುವ ಉದ್ದೇಶ ಏನೆಂದರೆ, ಯಾವುದೇ ರೀತಿಯ ಅಪಘಾತ ಅಥವಾ ಇನ್ನಾವುದೇ ನಷ್ಟ ಎದುರಾದಾಗ, ಆ ನಷ್ಟವನ್ನ ಆ ವಾಹನ ಮಾಲೀಕ ಆ ಕ್ಷಣಕ್ಕೆ ಭರಿಸಲು ಸಾಧ್ಯವಿಲ್ಲ. ಅದರ ಬದಲಾಗಿ ಇನ್ಸುರೆನ್ಸ್ ಕಂಪನಿಗೆ ಆ ಜವಾಬ್ದಾರಿ ಕೊಟ್ಟರೆ ಆ ಎಲ್ಲಾ ಕಷ್ಟ ನಷ್ಟಗಳನ್ನ ಸಂಭಂದಪಟ್ಟ ಇನ್ಸುರೆನ್ಸ್ ಕಂಪನಿಯೇ ಕಟ್ಟಿಕೊಡುತ್ತದೆ. ಇದರಿಂದ ಆ ವಾಹನದ ಮಾಲೀಕನಿಗೆ ಆಗುವ ಕಷ್ಟ ನಷ್ಟದಿಂದ ಪರಿಹಾರ ಸಿಕ್ಕಂತಾಗುತ್ತದೆ.

ಹಾಗಾಗಿಯೇ ಪ್ರತಿಯೊಂದು ವಾಹನಗಳಿಗೂ ಇನ್ಶುರೆನ್ಸ್ ಮಾಡಿಯೇ ರಸ್ತೆಯ ಮೇಲೆ ಬಿಡಲಾಗುತ್ತೆ,ಇದು ಕಾನೂನು ಕೂಡ ಹೌದು. ಯಾಕೆಂದ್ರೆ ಅಪಘಾತ ಅಥವಾ ಕಷ್ಟ ನಷ್ಟಗಳು ಯಾವ ಸಂದರ್ಭ ಸಮಯದಲ್ಲಾದರೂ ಎದುರಾಗಬಹುದು. ಆದರೆ ಈ ಕಾರಣದಿಂದ ತನ್ನ ವಾಹನಕ್ಕೆ ಇನ್ಸುರೆನ್ಸ್ ಮಾಡಿಸಿದ ಆಸಾಮಿಯೊಬ್ಬ, ಕಾರು ಕಳ್ಳತನವಾಗದೆ  ಇನ್ಸುರೆನ್ಸ್ ಕಂಪನಿಯಿಂದ ಹಣ ಪೀಕಲು ಹೋಗಿ ಸಿಗೆ ಬಿದ್ದಿದ್ದಾನೆ.

ಆದರೆ ಕಾನೂನಿನ ಕೈ ಕೊಂಚ ಉದ್ದನೇ ಇರುತ್ತೆ, ಹಾಗಾಗಿ ತನಿಖೆಯಲ್ಲಿ ಈತನ ನರಿ ಬುದ್ದಿ ಬಯಲಾಗಿ ಕಂಬಿ ಹಿಂದೆ ಸೇರಿದ್ದಾನೆ.ಹೌದು ಈ ಪೊಟೊದಲ್ಲಿ ಕಾಣುವ ವ್ಯಕ್ತಿಯೇ ನರಿ ಬುದ್ದಿ ತೋರಿಸಲು ಹೋಗಿ ಪೊಲೀಸರ ಅಥಿತಿಯಾಗಿರುವುದು,ಹೌದು ಸೈಯದ್ ಜಾಫರ್ ಎನ್ನುವ ನಲವತ್ತರ ಆಸುಪಾಸಿ ಈ ವ್ಯಕ್ತಿ ನಮ್ಮ ವಿಜಯನಗರ ಪೊಲೀಸರಿಗೆ ಚಳ್ಳೆಹಣ್ಣು ತಿನಿಸಲು ಹೋಗಿ ಇದೀಗ ತಾನೆ ಮಣ್ಣು ತಿನ್ನುವ ಕೆಲಸ ಮಾಡಿಕೊಂಡಿದ್ದಾನೆ. ಇದೇ ತಿಂಗಳು 17ನೆ ತಾರೀಕಿನಂದು ರಾತ್ತಿ ಹತ್ತು ಗಂಟೆಯ ಸುಮಾರಿಗೆ ಹೊಸಪೇಟೆ ತಾಲೂಕಿನ ಗುಂಡಾ ಫಾರೆಷ್ಟ್ ಬಳಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಕೆ.ಎ.01 ಎಂ.ಪಿ. 7333 ನಂಬರಿನ ತನ್ನ ಇನೋವಾ ಕಾರನ್ನ ತಡೆದ ಕಳ್ಳರು, ನಮ್ಮ ಚಾಲಕನನ್ನ ಹಿಗ್ಗಾ ಮುಗ್ಗ ಬಡಿದು, ಕಾರನ್ನ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ ಎಂದು  ಮರಿಯಮ್ಮನಹಳ್ಳಿ ಪೊಲೀಸರಿಗೆ ದೂರು ನೀಡಿ ಕಾರನ್ನ ಪತ್ತೆಮಾಡಲು ಮನವಿಮಾಡಿಕೊಂಡಿದ್ದ.

ಈತನ ದೂರನ್ನ ಪಡೆದ ಮರಿಯಮ್ಮನಹಳ್ಳಿ ಪೊಲೀಸರು ತನಿಖೆಯ ಜಾಡು ಹಿಡಿದು ಸೀದ ಹೋಗಿದ್ದು ಈತ ವಾಸವಿದ್ದ ಮನೆಗೇನೆ. ಹೌದು ಹಗರಿಬೊಮ್ಮನಹಳ್ಳಿಯ ಸಿ.ಪಿ.ಐ.ಟಿ.ಮಂಜಣ್ಣ ನೇತೃತ್ವದಲ್ಲಿ ನಡೆದ ಈ ತನಿಖೆ ಪ್ರಕರಣದ ಸತ್ಯಾಂಶವನ್ನ ಹೊರ ಹಾಕಿದೆ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಹಿರೇಖೇಡ್ ಗ್ರಾಮದ ಜಮೀನಿನಲ್ಲಿ ಕಾರನ್ನ ಬಚ್ಚಿ ಇಟ್ಟು ಯಾರೊ ಕಳ್ಳತನ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದ ಈ ಆರೋಪಿಯ ವಿರುದ್ದವೇ ವಂಚನೆಯ ಪ್ರಕರಣವನ್ನ ದಾಖಲಿಸಿದ್ದಾರೆ ಮರಿಯಮ್ಮನಹಳ್ಳಿ ಪೊಲೀಸರು.

ಹೌದು ಕಾರನ್ನ ಬಚ್ಚಿಟ್ಟು ಕಳ್ಳತನದ ದೂರು ದಾಖಲುಮಾಡಿ, ಇನ್ಸುರೆನ್ಸ್ ಹಣ ಕಬಳಿಸುವ ಹುನ್ನಾರವನ್ನ ಸೈಯದ್ ಜಾಫರ್ ಮತ್ತು ಆತನ ಗೆಳೆಯ ಮುಸ್ತಾಕ್ ಅಹಮದ್ ಸೇರಿದಂತೆ ಇನ್ನೊಬ್ಬ ವ್ಯಕ್ತಿಯ ಪ್ಲಾನ್ ಆಗಿತ್ತು. ಇದೇ ಪ್ಲಾನ್ ಇಟ್ಟುಕೊಂಡೇ ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲುಮಾಡಿದ್ದರು, ಆದರೆ ಅವರ ಪ್ಲಾನ್ ಉಲ್ಟಾ ಹೊಡೆದು ಜೈಲಿಗೆ ಹೋಗುವಂತಾಗಿದೆ, ಸದ್ಯಕ್ಕೆ ಸೈಯದ್ ಜಾಫರ್ ಪೊಲೀಸರ ವಶದಲ್ಲಿದ್ದು, ಮುಸ್ತಾಕ್ ಆಹಮದ್ ಮತ್ತು ಇನ್ನೊರ್ವ ವ್ಯಕ್ತಿಯ ಹುಡುಕಾಟಕ್ಕೆ ಪೊಲೀಸರು ಮುಂದಾಗಿದ್ದಾರೆ. ತಮ್ಮ ಶಿಬ್ಬಂದಿಗಳ ಕಾರ್ಯವೈಖರಿಯನ್ನ ವಿಜಯನಗರ ಎಸ್ಪಿ.ಅರುಣ್ ಅವರು ಶ್ಲಾಗಿಸಿದ್ದಾರೆ.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.