You are currently viewing ಪಡಿತರ ಚೀಟಿ ಅನುಮೋದಿಸಿ ವಿತರಿಸುವ ಪ್ರಕ್ರಿಯೆ ಸಂಪೂರ್ಣ ಉಚಿತ ಶುಲ್ಕ ಪಾವತಿಗೆ ಬೇಡಿಕೆ ಇಟ್ಟಲ್ಲಿ ಡಿಸಿ ಕಚೇರಿ ಸಹಾಯವಾಣಿಗೆ ಮಾಹಿತಿ ನೀಡಿ: ಡಿಸಿ ಅನಿರುದ್ಧ್ ಶ್ರವಣ್

ಪಡಿತರ ಚೀಟಿ ಅನುಮೋದಿಸಿ ವಿತರಿಸುವ ಪ್ರಕ್ರಿಯೆ ಸಂಪೂರ್ಣ ಉಚಿತ ಶುಲ್ಕ ಪಾವತಿಗೆ ಬೇಡಿಕೆ ಇಟ್ಟಲ್ಲಿ ಡಿಸಿ ಕಚೇರಿ ಸಹಾಯವಾಣಿಗೆ ಮಾಹಿತಿ ನೀಡಿ: ಡಿಸಿ ಅನಿರುದ್ಧ್ ಶ್ರವಣ್


ಹೊಸಪೇಟೆ(ವಿಜಯನಗರ),ಮೇ 19: ಪಡಿತರ ಚೀಟಿಗಳನ್ನು ಅನುಮೋದಿಸಿ ವಿತರಿಸುವ ಪ್ರಕ್ರಿಯೆ ಶುಲ್ಕ ರಹಿತವಾಗಿದ್ದು, ಸಂಪೂರ್ಣ ಉಚಿತವಾಗಿದೆ. ಶುಲ್ಕ ಪಾವತಿಸುವ ಬಗ್ಗೆ ಬೇಡಿಕೆ ಇಟ್ಟಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಸಹಾಯವಾಣಿಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ವಿಜಯನಗರ ಜಿಲ್ಲೆಯ ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಅವರು ಮನವಿ ಮಾಡಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ವಿಜಯನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಪ್ರಸ್ತುತ ಆಹಾರ ಇಲಾಖೆಯಿಂದ ಕುಟುಂಬ ಪಡಿತರ ಚೀಟಿಗಾಗಿ ಸಾರ್ವಜನಿಕರಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ಸದರಿ ಅರ್ಜಿಗಳ ಅನುಸಾರವಾಗಿ ಈಗಾಗಲೇ ಆಹಾರ ಇಲಾಖೆಯಿಂದ ಪರಿಶೀಲಿಸಿ ಆದ್ಯತೆಯ ಮೇರೆಗೆ ಅರ್ಹ ಫಲಾನುಭವಿಗಳಿಗೆ ಪಡಿತರ ಚೀಟಿಗಳನ್ನು ಅನುಮೋದಿಸಿ ವಿತರಿಸುವ ಕಾರ್ಯ ಪ್ರಗತಿಯಲ್ಲಿದೆ. ಈ ಪ್ರಕ್ರೀಯೆ ಸಂಪೂರ್ಣವಾಗಿ ಶುಲ್ಕರಹಿತ ಪ್ರಕ್ರಿಯೆಯಾಗಿದ್ದು, ಯಾವುದೇ ಶುಲ್ಕವನ್ನು ಪಾವತಿಸದೇ ಉಚಿತವಾಗಿ ಅರ್ಹ ಅರ್ಜಿದಾರರು ಪಡಿತರ ಚೀಟಿಗಳನ್ನು ಪಡೆದುಕೊಳ್ಳುವಂತೆ ಅವರು ಕೋರಿದ್ದಾರೆ.

ಒಂದು ವೇಳೆ ಅಂತಹ ಶುಲ್ಕ ಪಾವತಿಸುವ ಬಗ್ಗೆ ಬೇಡಿಕೆ ಇಟ್ಟಲ್ಲಿ ವಿಜಯನಗರ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿರುವ ಸಹಾಯವಾಣಿ(ಕಂಟ್ರೋಲ್ ರೂಂ)ಸಂಖ್ಯೆ ದೂ: 08394-295655ಗೆ ಮಾಹಿತಿ ನೀಡಬೇಕು ಎಂದು ಸಾರ್ವಜನಿಕರಿಗೆ ತಿಳಿಸಿದ್ದಾರೆ.

ವರದಿ…ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.