You are currently viewing ಲೊಕಲ್ ದಂಗಲ್ ನಾಳೆ.

ಲೊಕಲ್ ದಂಗಲ್ ನಾಳೆ.

ವಿಜಯನಗರ. ಸ್ಥಳೀಯ ಸಂಸ್ಥೆಗಳಿಗೆ ನಡೆದಿದ್ದ ಚುನಾವಣೆಯ ಮತ ಎಣಿಕೆ ಕಾರ್ಯ ನಾಳೆ ನಡೆಯಲಿದೆ‌.ಈ ಮೂಲಕ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದ್ದ ಅಭ್ಯರ್ಥಿಗಳ ಭವಿಷ್ಯ ನಾಳೆ ಬಹಿರಂಗವಾಗಲಿದ್ದು ಈಗಿನಂದಲೇ ಅಭ್ಯರ್ಥಿಗಳ ಎದೆ ಬಡಿತ ಜೋರಾಗಿದೆ. ಹೊಸಪೇಟೆ ನಗರಸಭೆಯ 35 ವಾರ್ಡಗೆ ಹಾಗೂ ಮರಿಯಮ್ಮನಹಳ್ಳಿಯ ಪಟ್ಟಣ ಪಂಚಾಯ್ತಿಯ 18 ವಾರ್ಡಗೆ ನಡೆದಿದ್ದ ಚುನಾವಣೆಯ ಮತ ಎಣಿಕೆ ಕಾರ್ಯ ಹೊಸಪೇಟೆ ನಗರದ ಸಂಡೂರು ರಸ್ತೆಯಲ್ಲಿರುವ ಎಲ್.ಎಪ್.ಎಸ್.ಶಾಲೆಯ ಮೂರು ಕೊಠಡಿಯಲ್ಲಿ ನಡೆಯಲಿದೆ. ಇತ್ತ ಹಗರಿಬೊಮ್ಮನಹಳ್ಳಿಯ ಪುರಸಭೆಯ 22 ವಾರ್ಡಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಹಗರಿಬೊಮ್ಮನಹಳ್ಳಿಯ ಜಿ.ವಿ.ಪಿ.ಪಿ.ಕಾಲೇಜಿನಲ್ಲಿ ನಡೆಯಲಿದೆ.
ನಾಳೆ ಬೆಳಗ್ಗೆ 7:45ಕ್ಕೆ ಟ್ರಾಂಗ್ ರೂಂ ತೆರೆಯುವ ವಿಜಯನಗರ ಜಿಲ್ಲಾಧಿಕಾರಿ ಅನಿರುದ್ದ ಶ್ರವಣ್ ಅವರು ಮತ ಎಣಿಕೆ ಕಾರ್ಯಕ್ಕೆ ಚಾಲನೆ ನೀಡಲಿದ್ದಾರೆ.8ಗಂಟೆ ಪ್ರಾರಂಭವಾಗಲಿರುವ ಮತ ಎಣಿಕೆಯಲ್ಲಿ ಮೊದಲಿಗೆ ಅಂಚೆ ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಇನ್ನು ಮತ ಎಣಿಕೆಗೆ ಬರುವ ಪ್ರತಿಯೊಬ್ಬ ಎಜೆಂಟ್ ಹಾಗೂ ಮತ ಎಣಿಕೆ ಸಿಬ್ಬಂದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸುವ ಮೂಲಕ ಕೊವಿಡ್ ನಿಯಮ ಪಾಲಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.