You are currently viewing ಅಕ್ರಮ ಮದ್ಯ ಮಾರಾಟದ ಅಡ್ಡೆ ಮೇಲೆ ಬಳ್ಳಾರಿ ಪೊಲೀಸರ ಭರ್ಜರಿ ಕಾರ್ಯಾಚರಣೆ.

ಅಕ್ರಮ ಮದ್ಯ ಮಾರಾಟದ ಅಡ್ಡೆ ಮೇಲೆ ಬಳ್ಳಾರಿ ಪೊಲೀಸರ ಭರ್ಜರಿ ಕಾರ್ಯಾಚರಣೆ.

ವಿಜಯನಗರ… ಇತ್ತೀಚೆಗೆ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ಎಲ್ಲೆಡೆ ನಡೆಯುತಿದ್ದು ಅಂತಾ ಮಾರಾಟದ ಅಡ್ಡೆಯ ಮೇಲೆ ಬಳ್ಳಾರಿ ಪೊಲೀಸರು ದಾಳಿ ನಡೆಸಿ ಅಕ್ರಮ ಮದ್ಯ ವಶಕ್ಕೆ ಪಡೆಯುವುದರ ಜೊತೆಗೆ ಮಾರಾಟಗಾರರ ವಿರುದ್ದ ಪ್ರಕರಣ ದಾಖಲಿಸಿಕೊಂಡು ಬಿಸಿ ಮುಟ್ಟಿಸಿದ್ದಾರೆ.

ಬಳ್ಳಾರಿ ಜಿಲ್ಲೆಯ ಒಟ್ಟು 15 ಪೊಲೀಸ್ ಠಾಣೆಗಳಲ್ಲಿ ಈ ಕಾರ್ಯಾಚರಣೆ ನಡೆದಿದ್ದು,35ಅಕ್ರಮ ಮದ್ಯ ಮಾರಾಟದ ಪ್ರಕರಣಗಳು ದಾಖಲಾಗಿವೆ.ಈ ಸಂಭಂದ 46ಜನರ ವಿರುದ್ದ ದೂರು ಕೂಡ ದಾಖಲಾಗಿದೆ.1ಲಕ್ಷ 82 ಸಾವಿರ ಮೌಲ್ಯದ 473ಲೀಟರ್ ವದ್ಯವನ್ನ ಸಹ ವಶಕ್ಕೆ ಪಡೆದಿದ್ದಾರೆ.

ಇನ್ನು ಇಷ್ಟೆಲ್ಲ ಆದ ಮೇಲೆ, ಸಕ್ರಮ ಮದ್ಯ ಮಾರಾಟಮಾಡುವ ವ್ಯಾಪಾರಸ್ತರಿಗೆ ಕೂಡ ಬಳ್ಳಾರಿ ಎಸ್ಪಿ  ಸೈದುಲ್ಲಾ ಅದಾವತ್ ಖಡಕ್ ಸೂಚನೆ ನೀಡಿದ್ದಾರೆ. ಪರವಾನಿಗೆ ಪಡೆದ ಬಾರ್ ವೈನ್ ಶಾಪ್ ಗಳ ಮಾಲೀಕರು ಮದ್ಯ ಪ್ರಿಯರನ್ನ ಹೊರತು ಪಡಿಸಿ ವ್ಯಾಪಾರಸ್ತರಿಗೆ ಮದ್ಯಮಾರಾಟಮಾಡಿದ್ದೇ ಆದರೆ ಅಂತವರ ವಿರುದ್ದ ಕೂಡ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದ್ದಾರೆ.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.