You are currently viewing ಜನರನ್ನ ರಂಜಿಸಲು ಹೋಗಿ ಎಡವಟ್ಟು..

ಜನರನ್ನ ರಂಜಿಸಲು ಹೋಗಿ ಎಡವಟ್ಟು..

ಜನರನ್ನ ರಂಜಿಸಲು ಸಾಕಷ್ಟು ವಿಷಯಗಳಿವೆ, ಆದರೆ ಅವುಗಳನ್ನ ಆಯ್ಕೆಮಾಡುವ ಬುದ್ದಿ ಶಕ್ತಿ ಆ ಕಲಾವಿಧನಿಗೆ ಇರಬೇಕು, ಸೇರಿದ್ದ ಜನಗಳ ಸಿಳ್ಳೆ ಚಪ್ಪಾಳೆ ಗಿಟ್ಟಿಸುವ ಸಂಭಂದ ಬಾಯಿಗೆ ಬಂದಂತೆ ಹೇಳಿದ್ರೆ, ಸೇರಿದ ಜನಗಳೇ ಧರ್ಮದ ಏಟು ಕೊಡುತ್ತಾರೆ ಇದು ಪಕ್ಕಾ. ಹೌದು ಹಾಸ್ಯ ಕಲಾವಿಧನೊಬ್ಬ ಜನರನ್ನ ನಗಿಸುವ ಸಂಭಂದ ನಮ್ಮ ವಿಶ್ವ ವಿಖ್ಯಾತ ಹಂಪಿ ಸಂಗೀತ ಮಂಠಪ ಮತ್ತು ವಿಜಯನಗರ ಸಾಮ್ರಾಜ್ಯ ಸಂಸ್ಥಾಪಕರ ಬಗ್ಗೆ ಹಗುರವಾಗಿ ಮಾತನಾಡಿ ವಿವಾದವೊಂದನ್ನ ಮೈಮೇಲೆ ಎಳೆದುಕೊಂಡಿದ್ದಾನೆ. ವಿವಾದಕ್ಕೆ ಸಂಭಂದಿಸಿದಂತೆ, ಅವಹೇಳನಕಾರಿಯಾಗಿ ಮಾತನಾಡಿದ ಹಾಸ್ಯ ಕಲಾವಿಧ ಪಿ.ಶ್ರವಣ್ ಎನ್ನುವವನ ವಿರುದ್ದ ಹಂಪಿಯ ಪ್ರವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.

ವಿಜಯನಗರ ಸಾಮ್ರಾಜ್ಯ ಸಂಸ್ಥಾಪಕರಾದ ಹಕ್ಕ ಬುಕ್ಕರು ಹಾಗೂ ಇಲ್ಲಿನ ವಿಜಯ ವಿಠ್ಠಲ ದೇವಸ್ಥಾನ ಸಂಕೀರ್ಣದಲ್ಲಿರುವ ಸಂಗೀತ ಮಂಠಪದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ವಿಡಿಯೊವೊಂದನ್ನ ಪೇಸಬುಕನ ಸ್ಟ್ಯಾಂಡಪ್ ಕಾಮಿಡಿಯ ಪೇಜಲ್ಲಿ ಅಪ್ಲೊಡ್ ಮಾಡಲಾಗಿತ್ತು, ಈ ಸಂಭಂದ ಸಾಮಾಜಿಕ ಜಾಲತಾಣದಲ್ಲಿ ಬಾರಿ ವಿರೋಧ ವ್ಯಕ್ತವಾಗಿದೆ. ಅದಲ್ಲದೆ ಹಂಪಿ ಪ್ರವಾಸಿಮಾರ್ಗದರ್ಶಿಗಳು ಇಲ್ಲಿನ ಪ್ರವಾಸಿ ಪೊಲೀಸ್ ಠಾಣೆಯಲ್ಲಿ ಶ್ರವಣ್ ವಿರುದ್ದ ದೂರು ದಾಖಲಿಸಿ ಆರೋಪಿಯನ್ನ ಕೂಡಲೆ ಬಂದಿಸುವಂತೆ ಒತ್ತಾಯಿಸಿದ್ದಾರೆ.
ಅಲ್ಲದೆ ರಾಜ್ಯ ಸರ್ಕಾರ ಈ ವಿಷಯವನ್ನ ಗಂಬೀರವಾಗಿ ಪರಿಗಣಿಸಿ, ಆರೋಪಿನ್ನ ಕೂಡಲೆ ಕಾನೂನಿ ಚೌಕಟ್ಟಿನಲ್ಲಿ ಶಿಕ್ಷಿಸಬೇಕೆಂದು ಕೂಡ ಒತ್ತಾಯಿಸಿದ್ದಾರೆ. ಈ ಮೂಲಕ ನಮ್ಮ ಸಂಸ್ಕೃತಿಯ ಬಗ್ಗೆ ಯಾರೂ ಹಗುರವಾಗಿ ಮಾತನಾಡಬಾರದೆಂದು ಹಂಪಿ ಪ್ರವಾಸಿ ಮಾರ್ಗದರ್ಶಿಗಳು ಎಚ್ಚರಿಕೆ ಸಂದೇಶವನ್ನ ನಾಡಿಗೆ ರವಾನಿಸಿದ್ದಾರೆ.