![](https://hampimirror.com/media/2023/07/image_editor_output_image-608090143-1690718782178.jpg)
ದಿನಾಂಕ: 29/7/2023 ರಂದು ಧಾರವಾಡದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆವರಣದ ರಂಗಾಯಣ ಸಾಂಸ್ಕೃತಿಕ ಸಮುಚ್ಚಯ ಸಭಾಭವನದಲ್ಲಿ ನಡೆದ, ನಾಡಿನ ಸಮಚಾರ ಸೇವಾ ಸಂಘ (ರಿ)ಗೋಕಾಕ, ಸಂಸ್ಥೆಯ ಎರಡನೆಯ ವಾರ್ಷಿಕೋತ್ಸವ ಹಾಗೂ ಪತ್ರಿಕಾ ದಿನಾಚರಣೆಯ ಪ್ರಯುಕ್ತ “ಧಾರವಾಡದ ಜ್ಞಾನ ದರ್ಶಿನಿ ಸಂಭ್ರಮ”ದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕರಿಗೆ ರಾಷ್ಟ್ರೀಯ ಪ್ರಶಸ್ತಿ ನೀಡುವ ಸಂಭ್ರಮದಲ್ಲಿ ಕನ್ನಡ ವಿಶ್ವವಿದ್ಯಾಲಯದ ಸಂಗೀತ ಮತ್ತು ನೃತ್ಯ ವಿಭಾಗದ ತಾ.ಸಂಗೀತ ಅಧ್ಯಾಪಕರಾದ ಡಾ.ತಿಮ್ಮಣ್ಣ ಭೀಮರಾಯ ರವರ ಸಂಗೀತ ಸಾಧನೆಯನ್ನು ಗುರುತಿಸಿ “ಗಾನ ಗಾರುಡಿಗ” ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಈ ಸಂದರ್ಬರದಲ್ಲಿ ಸನ್ಮಾನ್ಯ ಶ್ರೀ ಸಂಕಲ್ಪ ಜಗದೀಶ್ ಶೆಟ್ಟರ್ ಯುವ ನಾಯಕರು ಹಾಗೂ ಅಧ್ಯಕ್ಷರು ಎಸ್. ಎಸ್.ಶೆಟ್ಟರ್ ಫೌಂಡೇಷನ್ (ರಿ)ಹುಬ್ಬಳ್ಳಿ, ಶ್ರಿ ಬಸವರಾಜ y. ಉಪ್ಪಾರಟ್ಟೀ ಸಂಸ್ಥಾಪಕರು ಹಾಗೂ ಅದ್ಯಕ್ಷರು ನಾಡಿನ ಸಮಾಚಾರ ಸಂಘ(ರಿ) ಇನ್ನೂ ಹಲವಾರು ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು.
![](https://hampimirror.com/media/2023/07/image_editor_output_image590192444-1690718757206.jpg)