You are currently viewing ಬಾರಿ ಬಿರುಗಾಳಿಗೆ ಧರೆಗೆ ಉರುಳಿದ ಮರ ರೈತನ ಸಾರಥಿ ನುಜ್ಜುಗೊಜ್ಜು. ರೈತನಿಗೆ ವರವಾಗಬೇಕಿದ್ದ ಮುಂಗಾರು ಶಾಪವಾಗುತ್ತಿದೆ ಯಾಕೆ.?

ಬಾರಿ ಬಿರುಗಾಳಿಗೆ ಧರೆಗೆ ಉರುಳಿದ ಮರ ರೈತನ ಸಾರಥಿ ನುಜ್ಜುಗೊಜ್ಜು. ರೈತನಿಗೆ ವರವಾಗಬೇಕಿದ್ದ ಮುಂಗಾರು ಶಾಪವಾಗುತ್ತಿದೆ ಯಾಕೆ.?

ವಿಜಯನಗರ…ನೆನ್ನೆ ಸಂಜೆ ಸರಿದ ಬಾರಿ ಬಿರುಗಾಳಿ ಸಹಿತ ಮಳೆಗೆ ವಿಜಯನಗರ ಜಿಲ್ಲೆಯಲ್ಲಿ ದೊಡ್ಡ ಅವಾಂತರವೇ ಸೃಷ್ಠಿಯಾಗಿದೆ. ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಶಿವಪುರ ಗ್ರಾಮದಲ್ಲಿ ಬೃಹತ್ ಗಾತ್ರದ ಮರವೊಂದು ಧರೆಗೆ ಉರುಳಿದ್ದು ಮರದ ಕೆಳಗೆ ನಿಲ್ಲಿಸಿದ ರೈತನ ಸಾರಥಿ ಟ್ರಾಕ್ಟರ್ ಜಕಂ ಗೊಂಡಿದೆ.
ಶಿವಪುರ ಗ್ರಾಮದ ದುರುಗಪ್ಪ ಎಂಬುವವರಿಗೆ ಸೇರಿದ ಟ್ರಾಕ್ಟರ್ ಇದಾಗಿದ್ದು,

ಅವರ ಮನೆಯ ಪಕ್ಕದ ಮರದ ಕೆಳಗಡೆ ಟ್ರಾಕ್ಟರ್ ನಿಲ್ಲಿಸುವುದು ಅವರ ದಿನ ನಿತ್ಯದ ವಾಡಿಕೆ ಆಗಿತ್ತು. ಎಂದಿನಂತೆ ನಿನ್ನೆ ಮದ್ಯಾಹ್ನ ಟ್ರಾಕ್ಟರ್ ತಂದು ಮರದ ಕೆಳಗಡೆ ನಿಲ್ಲಿಸಿ ಒಂದೆರಡು ಗಂಟೆಯ ಬಳಿಕ ಬಾರಿ ಬಿರುಗಾಳಿ ಸಹಿತ ಮಳೆ ಪ್ರಾರಂಭವಾಗಿದೆ. ಈ ಸಂದರ್ಭದಲ್ಲಿ ಬುಡ ಸಮೇತ ಉರುಳಿದ ಮರ ಕೆಳಗಡೆ ನಿಂತಿದ್ದ ಟ್ರಾಕ್ಟರ್ ಮೇಲೆ ಉರುಳಿದೆ.  ಮರ ಉರುಳಿದ ಹೊಡೆತಕ್ಕೆ ಟ್ರಾಕ್ಟರ್ ಇಂಜಿನ್ ಮತ್ತು ಟ್ರಾಲಿ ಜಕಂಗೊಂಡಿದ್ದು ರೈತ ದಿಕ್ಕು ಕಾಣದೆ ಕಂಗಾಲಾಗಿದ್ದಾನೆ.

ಹೂವಿನಹಡಗಲಿ ತಾಲೂಕಿನ ಕೆಲವು ಕಡೆಗಳಲ್ಲಿ ಇಂತದ್ದೇ ಬಾರಿ ಬಿರುಗಾಳಿ ಸಹಿತ ಮಳೆಯಾಗಿದ್ದು, ಮಳೆಗಿಂತ ಗಾಳಿ ಅಬ್ಬರ ಹೆಚ್ಚಾಗಿದೆ, ಕಳೆದ ವಾರವಷ್ಟೆ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಓರ್ವ ಬಾಲಕ ಸಿಡಿಲಿಗೆ ಮತ್ತೊಬ್ಬ ವ್ಯಕ್ತಿ ಹಾಗೂ ಎತ್ತು ಬಲಿಯಾಗಿರುವ ಸುದ್ದಿ ಮಾಸುವ ಮುಂಚೆಯೇ ಟ್ರಾಕ್ಟರ್ ಜಕಂಗೊಂಡಿರುವ ಸುದ್ದಿ ರೈತರಲ್ಲಿ‌ ನಡುಕ ಹುಟ್ಟಿಸಿದೆ. ಸಹಜವಾಗಿ ಮುಂಗಾರು ಪ್ರಾರಂಭವಾದರೆ ರೈತರಿಗೆ ಎಲ್ಲಿಲ್ಲದ ಸಂಭ್ರಮ, ಆದರೆ ಮುಂಗಾರು ಇನ್ನೇನು ಪ್ರಾರಂಭವಾಗುತ್ತೆ ಎನ್ನುವ ಮುಂಚೆಯೇ ರೈತರಲ್ಲಿ ನಡುಕ ಹುಟ್ಟಿಸುತ್ತಲೇ ಬರುತ್ತಿದೆ. ರೈತ ಸಮುದಾಯ ಆದಷ್ಟು ತಮ್ಮ ಜಾಗೃತಿಯಿಂದ ಮುಂಗಾರು ಕಳೆಯಬೇಕಿದೆ.

ವರದಿ..ಸುಬಾನಿ ಪಿಂಜಾರ. ಹಂಪಿ ಮಿರರ್ ವಿಜಯನಗರ.