You are currently viewing ಬರ ಸಿಡಿಲಿಗೆ ಬಲಿಯಾಗುತ್ತಿವೆ ಜನ ಜಾನುವಾರುಗಳು, ನಿನ್ನೆ ಕುರಿ ಮೇಕೆ ಇಂದು ರೈನ ಸಾಥಿ ಸಾವು.

ಬರ ಸಿಡಿಲಿಗೆ ಬಲಿಯಾಗುತ್ತಿವೆ ಜನ ಜಾನುವಾರುಗಳು, ನಿನ್ನೆ ಕುರಿ ಮೇಕೆ ಇಂದು ರೈನ ಸಾಥಿ ಸಾವು.

ವಿಜಯನಗರ..ಹೌದು ವಿಜಯನಗರ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸಿಡಿಲು ಬಡಿತದ ಸಾವು ನೋವುಗಳು ಹೆಚ್ಚಾಗುತ್ತಿವೆ.  ಮೊನ್ನೆ ಹೂವಿನಹಡಗಲಿ ತಾಲೂಕಿನ ಉತ್ತಂಗಿಯಲ್ಲಿ ಇಸ್ಮಾಯಿಲ್ ಸಾಬ್ ಎನ್ನುವ ರೈತ ಸಾವನ್ನಪ್ಪಿದ್ದರೆ ನಿನ್ನೆ ಹಗರಿಬೊಮ್ಮನಹಳ್ಳಿಯ ಚಿಂತ್ರಪಳ್ಳಿಯಲ್ಲಿ ಹನ್ನೊಂದು ವರ್ಷದ ಬಾಲಕ ಸಾವನ್ನಪ್ಪಿದ್ದ, ಅದೇರೀತಿ ಇಂದು ಕೂಡ ರೈತನ ಸಾಥಿ ಎಂದು ಕರೆಸಿಕೊಳ್ಳುವ ಎತ್ತು ಸಿಡಿಲ ಬಡಿತಕ್ಕೆ ಬಲಿಯಾಗಿದೆ‌.

ಹೌದು ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿ ಗ್ರಾಮದ ಕಣದಲ್ಲಿ ಕಟ್ಟಿದ್ದ ಕೆ.ಲಕ್ಷ್ಮಪ್ಪ ಎನ್ನುವವರಿಗೆ ಸೇರಿದ್ದ ಎತ್ತು ಸಿಡಿಲ ಬಡಿತಕ್ಕೆ ಸಾವನ್ನಪ್ಪಿದೆ.ಸಂಜೆ ಐದು ಗಂಟೆ ಸುಮಾರಿಗೆ ಈ ಬಾಗದಲ್ಲಿ ಮಳೆ ಗಾಳಿ ಪ್ರಾರಂಭವಾಗುತಿದ್ದಂತೆ ತುಂತುರು ಮಳೆ ಪ್ರಾರಂಭವಾಗಿದೆ‌. ಈ ಸಂದರ್ಭದಲ್ಲಿ ಏಕಾ ಎಕಿ ಕಾಣಿಸಿಕೊಂಡ ಸಿಡಿಲು ಕಣದಲ್ಲಿ ಕಟ್ಟಿದ್ದ ಲಕ್ಷ್ಮಪ್ಪ ಅವರ ಒಂದು ಎತ್ತಿಗೆ ತಾಗಿದೆ, ಆದರೆ ಜೊತೆಗೆ ಕಟ್ಟಿದ್ದ ಮತ್ತೊಂದು ಎತ್ತಿಗೆ ಮಾತ್ರ ಯಾವುದೇ ತೊಂದರೆ ಆಗಿಲ್ಲ, ಇನ್ನು ಘಟನೆಯಿಂದ ಎತ್ತಿನ ಮಾಲೀಕ ಲಕ್ಷ್ಮಪ್ಪ ಕಂಗಾಲಾಗಿದ್ದು ತನ್ನ ಬದುಕಿನ ಬಂಡಿಗೆ ಸಾಥಿಯಾಗಿದ್ದ ಒಂದು ಎತ್ತು ಧಾರುಣ ಸಾವಿಗೀಡಾಗಿರುವುದನ್ನ ಕಂಡು ಕಣ್ಣೀರಿಟ್ಟಿದ್ದಾನೆ.

ವರ್ಷದ ಇಡೀ ಬೇಸಿಗೆಯಲ್ಲಿ ಕಣದಲ್ಲಿ ಕಟ್ಟಿ ಹುಲ್ಲು ಮೇಯಿಸಿ ಮುಂದಿನ ಮುಂಗಾರಿನ ಬಿತ್ತನೆಗೆ ಎತ್ತುಗಳನ್ನ ಸಾಕಿ ವರ್ಷದ ಅನ್ನ ಸಂಪಾದನೆಗೆ ಸಿದ್ದತೆ ನಡೆಸಿಕೊಂಡಿದ್ದ. ಆದರೆ ಜವರಾಯ ಸಿಡಿಲಿನ ರೂಪದಲ್ಲಿ ಬಂದು ಒಂದು ಎತ್ತಿನ ಜೀವ ಪಡೆದು ಮತ್ತೊಂದು ಎತ್ತನ್ನ ಒಂಟಿ ಮಾಡುವ ಮೂಲಕ ಲಕ್ಷ್ಮಪ್ಪನ ತೋಳ್ಬಲವನ್ನೇ ಕಸಿದು ಕೊಂಡಿದ್ದಾನೆ, ಅದರ ಪರಿಣಾಮ ದಿಕ್ಕು ಕಾಣದಂತೆ ಕಂಗಾಲಾಗಿರುವ ಲಕ್ಷ್ಮಪ್ಪ ಸರ್ಕಾರಕ್ಕೆ ಸಹಾಯಸ್ತ ಚಾಚಿದ್ದಾನೆ.

ಇನ್ನು ಲಕ್ಷ್ಮಪ್ಪನ ಪರಿಸ್ಥಿತಿ ಇದಾದರೆ, ಇದೇ  ಸಿಡಿಲಿನ ಬಡಿತಕ್ಕೆ 17 ಕುರಿಗಳು ಸಾವನ್ನಪ್ಪಿದ ಘಟನೆ ಇದೇ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ತೆಲಿಗಿ ಗ್ರಾಮದ ಕೆರೆಯಲ್ಲಿ ನಿನ್ನೆ ಸಂಜೆ ನಡೆದಿದೆ. ತಿಪ್ಪೇಶಪ್ಪನ 3ಕುರಿ, ಮ೦ಜುನಾಥನ 8ಕುರಿ, ತಳವಾರ ರೇವಣ್ಣಪ್ಪನ 6ಕುರಿ ಹೀಗೆ ಒಟ್ಟು 17 ಕುರಿಗಳು ಹಾಗೂ ಕುರಿಯಲ್ಲಿದ್ದ 1 ನಾಯಿ ಸಿಡಿಲಿಗೆ ಬಲಿಯಾಗಿವೆ.

ಕುರಿಗಳನ್ನ ಮೇಯಿಸಿಕೊಂಡು ಮರಳಿ ಮನೆಗೆ ಕರೆತರುವಾಗ ಕೆರೆಯಲ್ಲಿ ಕುರಿ ಹಿ೦ಡಿನ ಮೇಲೆ ಏಕಾ ಏಕಿ ಸಿಡಿಲು ಬಡಿದಿದೆ. ಇನ್ನು ಕಂದಾಯ ಇಲಾಖೆಯ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಈ ಸಂಭಂದ ತೆಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.

ಒಟ್ಟಿನಲ್ಲಿ ಮುಂಗಾರು ಕಾಣಿಸಿಕೊಳ್ಳುವ ಮುಂಚೆಯೇ ಸಿಡಿಲಿನ ರೂಪದಲ್ಲಿ ಬಂದ ಜವರಾಯ ಜನ ಜಾನುವಾರುಗಳ ಜೀವ ಬಲಿ ಪಡೆದು ಮರಳುತಿದ್ದಾನೆ. ಸಂಭಂದಪಟ್ಟ ಕೃಷಿ ಇಲಾಖೆಯ ಅಧಿಕಾರಿಗಳು ಸಿಡಿಲಿನಿಂದ ಜನ ಸಾಮಾನ್ಯರು ಹೇಗೆ ರಕ್ಷಣೆಪಡೆಯಬೇಕೆಂದು ಜಾಗೃತಿ ಮೂಡಿಸುವ ಅನಿವಾರ್ಯತೆ ಇದೀಗ ಎದುರಾಗಿದೆ. ಕೂಡಲೆ ಎಚ್ಚೆತ್ತು ಆ ಕೆಲಸಕ್ಕೆ ಅಧಿಕಾರಿಗಳು ಮುಂದಾಗಿ ಜನ ಜಾನುವಾರುಗಳ ಜೀವ ಉಳಿಸಬೇಕಿದೆ.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.