You are currently viewing ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಮಾಡಿದ ವಾಯು,ವರುಣ, ಇವರ ಆರ್ಭಟಕ್ಕೆ ರೈತ ಹೈರಾಣ. ಕೆಲವೊತ್ತು ಸುರಿದ ಮಳೆಗೆ ನಡುಗಡ್ಡೆಯಂತಾದ ಗ್ರಾಮದ.

ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಮಾಡಿದ ವಾಯು,ವರುಣ, ಇವರ ಆರ್ಭಟಕ್ಕೆ ರೈತ ಹೈರಾಣ. ಕೆಲವೊತ್ತು ಸುರಿದ ಮಳೆಗೆ ನಡುಗಡ್ಡೆಯಂತಾದ ಗ್ರಾಮದ.

ವಿಜಯನಗರ..ನಿನ್ನೆ ಸಂಜೆ ಕಾಣಿಸಿಕೊಂಡ ಮಳೆ-ಗಾಳಿ ವಿಜಯನಗರ ಜಿಲ್ಲೆಯಲ್ಲಿ ದೊಡ್ಡ ಅವಾಂತರವನ್ನೇ ಸೃಷ್ಠಿಮಾಡಿದೆ.ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕೆಲವೆಡೆಗಳಲ್ಲಿ ಗಾಳಿಗೆ ಮರ ವಿದ್ಯೂತ್ ಕಂಬಗಳು ಧರೆಗೆ ಉರುಳಿ ಅವಾಂತರ ಸೃಷ್ಠಿಯಾಗಿದ್ದರೆ, ರೈತನ ಟ್ರಾಕ್ಟರ್ ಮೇಲೆ ಮರ ಉರುಳಿದ್ದು ಮನಕ ಕಲಕುವಂತಿತ್ತು, ಅಂತದ್ದೇ ಮನ ಕಲಕುವ ವರದಿಯೊಂದು ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಆಗಿದೆ. ನಿನ್ನೆ ಸಂಜೆಯ ಮಳೆಗಾಳಿ ವೀಳ್ಯದೆಲೆ ತೋಟ ಮತ್ತು ಬಾಳೆ ತೋಟವನ್ನ ಸಂಪೂರ್ಣ ನಾಶಮಾಡಿ ಹಾಕಿದೆ.

ಇಂತದ್ದೊಂದು ಘಟನೆ ಕೂಡ್ಲಿಗಿ  ತಾಲೂಕಿನ ಕಕ್ಕುಪ್ಪಿ ಗ್ರಾಮದಲ್ಲಿ ನಡೆದಿದ್ದು ಲಕ್ಷಾಂತರ ಮೌಲ್ಯದ ಬೆಳೆ ಹಾನಿಯಾಗಿದೆ, ಅದೇರೀತಿ ಹರಪನಹಳ್ಳಿ ತಾಲೂಕಿನ ಶೀರನಹಳ್ಳಿ ಗ್ರಾಮದಲ್ಲಿ ಕೂಡ 15 ಮನೆಗಳ ಮೇಲ್ಛಾವಣಿ ಹಾರಿ ಹೋಗಿವೆ. ಸದ್ಯಕ್ಕೆ ಸಂಜೆಯಾಗುತಿದ್ರೆ ರೈತ ಸಮುದಾಯ ವಾಯು ವರುಣನ ಅಬ್ಬರಕ್ಕೆ ತತ್ತರಿಸುತ್ತಿದ್ದು ಮಳೆಗಾಳಿಯಿಂದ ಉಂಟಾದ ಹಾನಿಗೆ ಸರ್ಕಾರ ತ್ವರಿತವಾಗಿ ಸೂಕ್ತ ಪರಿಹಾರ ಬೀಡಯವಂತೆ ರೈತರು ಆಗ್ರಹಿಸಿದ್ದಾರೆ.

ಮುಂಗಾರು ಮಳೆ ಆರ್ಭಟಕ್ಕೆ ನಡುಗಡ್ಡೆಯಂತಾದ ಗ್ರಾಮ.

ನಿನ್ನೆ ಸಂಜೆ ಸುರಿದ ಬಾರಿ ಮಳೆಗೆ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಹರವಿ ಗ್ರಾಮ ಕೆಲ ಗಂಟೆಗಳ ಕಾಲ ನಡುಗಡ್ಡೆಯಂತಾಗಿತ್ತು. ಸಂಜೆ ಐದು ಗಂಟೆ ಸುಮಾರಿಗೆ ಪ್ರಾರಂಭವಾದ ಮಳೆ ಒಂದು ಗಂಟೆಗಳ ಕಾಲ ನಿರಂತರ ಸುರಿದ ಪರಿಣಾಮ ಗ್ರಾಮದಲ್ಲಿ ಮೊಣಕಾಲುದ್ದ ನೀರು ನಿಂತು ಜನಗಳ ಸಂಚರಿಸದಂತೆ ಪರಿಸ್ಥಿತಿ ನಿರ್ಮಾಣವಾಯಿತು. ಮಳೆ ಗಾಳಿಯಿಂದ ಮರ ಉರುಳಿ ಒಂದು ಮನೆಗೆ ಹಾನಿಯಾಗಿರುವುದು ಕೂಡ ಕಂಡು ಬಂತು.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.