You are currently viewing ಮೊಟರ್ ಬೈಕ್ ಖದೀಮನ ಬಂದಿಸಿದ ಬಡಾವಣೆ ಪೊಲೀಸರು. ತಂದೆ ಮಗ ಪ್ರಯಾಣಿಸುತಿದ್ದ ಸ್ಕೂಟರ್ ಗೆ ಟಿಪ್ಪರ್ ಲಾರಿ ಡಿಕ್ಕಿ. ಮನ ಕಲಕುವಂತಿದೆ ಈ ಘಟನೆ.

ಮೊಟರ್ ಬೈಕ್ ಖದೀಮನ ಬಂದಿಸಿದ ಬಡಾವಣೆ ಪೊಲೀಸರು. ತಂದೆ ಮಗ ಪ್ರಯಾಣಿಸುತಿದ್ದ ಸ್ಕೂಟರ್ ಗೆ ಟಿಪ್ಪರ್ ಲಾರಿ ಡಿಕ್ಕಿ. ಮನ ಕಲಕುವಂತಿದೆ ಈ ಘಟನೆ.

ವಿಜಯನಗರ.. ಎರಡು ಬೈಕ್ ಕಳ್ಳತನಮಾಡಿದ್ದ ಖದೀಮನನ್ನ ಬಂದಿಸುವಲ್ಲಿ ಹೊಸಪೇಟೆ ಬಡಾವಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಮೊಹಮ್ಮದ್ ಗೌಸ್ ಬಂದಿತ ಆರೋಪಿಯಾಗಿದ್ದು, ಬಂದಿತನಿಂದ 85ಸಾವಿರ ಮೌಲ್ಯದ ಒಂದು ಹೀರೊ ಸ್ಪೇಂಡ್ರ್ ಪ್ರೊ ಬೈಕ್ ಮತ್ತು ಹೋಂಡಾ ಆಕ್ಟಿವಾ ಬೈಕನ್ನ ವಶಕ್ಕೆ ಪಡೆದಿದ್ದಾರೆ.

ಹೊಸಪೇಟೆ ಡಿ.ವೈ.ಎಸ್ಪಿ ವಿಶ್ವನಾಥ ಕುಲಕರ್ಣಿ ಮತ್ತು ಸಿಪಿಐ ಹುಲುಗಪ್ಪ ಮಾರ್ಗದರ್ಶನದಲ್ಲಿ‌ ನಡೆದ ಈ ಕಾರ್ಯಾಚರಣೆಯ ನೇತೃತ್ವವನ್ನ ಬಡಾವಣೆ ಪಿ.ಎಸ್.ಐ.ಎಸ್ಪಿ ನಾಯಕ್ ವಹಿಸಿದ್ದರು, ಸಿಬ್ಬಂದಿಗಳಾದ ಶಿವಕುಮಾರ್, ರಾಮಮೂರ್ತಿ, ಮಾಣಿಕ್ ರೆಡ್ಡಿ, ತಿಪ್ಪೇಸ್ವಾಮಿ, ಆನಂದ್ ಗೌಡ, ಸಂತೋಷ್ ಕೂಡ್ ತನಿಖಾ ತಂಡದಲ್ಲಿ‌ ಬಾಗಿಯಾಗಿದ್ದು, ವಿಜಯನಗರ ಎಸ್ಪಿ ಡಾಕ್ಟರ್ ಅರುಣ್ ಕುಮಾರ್ ಕೆ. ತನಿಖಾ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ರಸ್ತೆ ಅಪಘಾತ ತಂದೆ ಮಗ ಗಂಬೀರ ಗಾಯ.

ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಗುಂಡಾ ಅರಣ್ಯದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಅಪಘಾತವೊಂದು ಸಂಭವಿಸಿದೆ, ಮರಿಯಮ್ಮನಹಳ್ಳಿ ಕಡೆಯಿಂದ ಹೊಸಪೇಟೆಗೆ ಬರುತಿದ್ದ ಸ್ಕೂಟರ್ಗೆ ಟಿಪ್ಪರ್ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ತಂದೆ ಮಗ ಗಂಬೀರವಾಗಿ ಗಾಯಗೊಂಡಿದ್ದಾರೆ. ರಮೇಶ್ ತಂದೆ ದುರುಗಪ್ಪ ಗಾಯಗೊಂಡಿರುವ ಗಾಯಾಳುಗಳಾಗಿದ್ದು, ಹೊಸಪೇಟೆ ನಗರದ ನಗರದ ಹೊರ ವಲಯದಲ್ಲಿರುವ ಜಂಭುನಾಥನ ಹಳ್ಳಿಯ ಸುಡುಗಾಡ ಸಿದ್ದ ಸಮುದಾಯದವರಾಗಿದ್ದಾರೆ.

ಮತ್ತೊಂದು ಮನಕಲಕುವ ಘಟನೆ ಎಂದರೆ ಅಪಘಾತದಲ್ಲಿ ರಮೇಶ್ ಒಂದು ಕಾಲು ಸಂಪೂರ್ಣ ನುಜ್ಜುಗೊಜ್ಜಾಗಿದೆ, ಇತ್ತ ತಂದೆಯ ದುರುಗಪ್ಪನಿಗೆ ಕೂಡ ಗಂಬೀರ ಗಾಯಗಳಾಗಿವೆ. ಗಾಯಾಳುಗಳನ್ನ ಹೊಸಪೇಟೆ ಸರ್ಕಾರಿ ನೂರು ಹಾಸಿಗೆ ಆಸ್ಪತ್ರೆಗೆ ದಾಖಲಿಸಿದ 108ಸಿಬ್ಬಂದಿಗಳು ಹೆಚ್ಚಿನ ಚಿಕಿತ್ಸೆಗೆ ಕೊಪ್ಪಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ,  ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದೆ. ಇನ್ನು ಮನೆಯ ಆಧಾರ ಸಂಭವಾಗಿದ್ದ ಈ ಸುಡುಗಾಡ ಸಿದ್ದರ ಕುಟುಂಭ ಇದೀಗ ದಿಕ್ಕು ಕಾಣದಂತೆ ಕಂಗಾಲಾಗಿದ್ದು ಮಗ ರಮೇಶ್ ದುಡಿಮೆಯೇ ಕುಟುಂಭದ ತುತ್ತಿನ ಚೀಲ ತುಂಬಿಸುತಿತ್ತು.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.