You are currently viewing ಜಾತ್ರೆಯ ಸಡಗರ ಕಣ್ತುಂಬಿಕೊಳ್ಳಲು ಬಂದವರನ್ನ ಸರ್ಕಾರಿ ಸಾರಿಗೆ ಬಸ್ ಬಲಿಪಡೆಯಿತು.

ಜಾತ್ರೆಯ ಸಡಗರ ಕಣ್ತುಂಬಿಕೊಳ್ಳಲು ಬಂದವರನ್ನ ಸರ್ಕಾರಿ ಸಾರಿಗೆ ಬಸ್ ಬಲಿಪಡೆಯಿತು.

ವಿಜಯನಗರ…ಸರ್ಕಾರಿ ಸಾರಿಗೆ ಬಸ್ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು  ಸಾವನ್ನಪ್ಪಿದ ಘಟನೆ ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಗಾದಿಗನೂರು ಗ್ರಾಮದಲ್ಲಿ ಇಂದು ನಡೆದಿದೆ. ಬಳ್ಳಾರಿಯಿಂದ ಹೊಸಪೇಟೆ ಕಡೆಗೆ ಬರುತಿದ್ದ ಹೊಸಪೇಟೆ ಡಿಪೊಗೆ ಸೇರಿದ ಸರ್ಕಾರಿ ಬಸ್ ಗಾದಿಗನೂರು ಗ್ರಾಮದಲ್ಲಿ ಟಿ.ವಿ.ಎಸ್.ಎಕ್ಸಲ್ ಮೊಟರ್ ಬೈಕಿಗೆ ಡಿಕ್ಕಿಯಾಗುತಿದೆ. ಸ್ಥಳದಲ್ಲೇ ಕಿರಣ ಬೇವಿನ ಮರದ (22)ಎನ್ನುವ ಯುವಕ ಸಾವನ್ನಪ್ಪಿದ್ದಾನೆ. ಬೈಕಲ್ಲಿದ್ದ ಅಗಸರ ವೆಂಕಟೇಶ್ (24) ಎನ್ನುವ ಯುವಕ ಗಂಬೀರವಾಗಿ ಗಾಯಗೊಂಡಿದ್ದು, ಗಾಯಾಳುವನ್ನ ಬಳ್ಳಾರಿ ಆಸ್ಪತ್ರೆಗೆ ದಾಖಲಿಸಲು ಅಂಬುಲೆನ್ಸಲ್ಲಿ ಕರೆದೊಯ್ಯಲು ಮುಂದಾಗಿದ್ದಾರೆ, ಆದರೆ ಬಳ್ಳಾರಿಯ ಆಸ್ಪತ್ರೆ ಮುಟ್ಟುವ ಮುಂಚೆಯೇ ವೆಂಕಟೇಶ್ ಕೂಡ ಕೊನೆಯುಸಿರೆಳೆದಿದ್ದಾನೆ.

ಇನ್ನು ಸಾವಿಗೀಡಾದ ಈ ಇಬ್ಬರು ಯುವಕರು ಹೊಸಪೇಟೆ ತಾಲೂಕಿನ ಕಾಕುಬಾಳು ಗ್ರಾಮದವರಾಗಿದ್ದು, ಗಾದಿಗನೂರು ಗ್ರಾಮದಲ್ಲಿ ಜಾತ್ರೆ ಇರುವ ಸಂಭಂದ ಗಾದಿಗನೂರು ಗ್ರಾಮದ ಸಂಭಂದಿಗಳ ಮನೆಗೆ ಹೋಗಿದ್ದರು, ಆದರೆ ವಿಧಿಯ ಆಟವೆ ಬೇರೆ ಆಗಿತ್ತು, ಯಮ ಸ್ವರೂಪದಲ್ಲಿ ಬಂದ ಸರ್ಕಾರಿ ಸಾರಿಗೆ ಬಸ್, ಈ ಇಬ್ಬರು ಯುವಕರ ಜೀವವನ್ನ ಬಲಿಪಡೆದಿತ್ತು. ದುರಂತ ಎಂದರೆ ಹಲವು ವರ್ಷಗಳಿಗೊಮ್ಮೆ ನಡೆಯುವ ಈ ಗ್ರಾಮ ದೇವತೆಯ ಜಾತ್ರೆಯ ಸಡಗರ ಕಣ್ತುಂಬಿಕೊಳ್ಳಲು ಬಂದ ಯುವಕರು ಶಾಸ್ವತವಾಗಿ ಕಣ್ಣುಮುಚ್ಚುವಂತಾಗಿದೆ. ಇನ್ನು ಈ  ಸಂಭಂದ ಗಾದಿಗನೂರು ಉಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೃತ ಕುಟುಂಭಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ವರದಿ..ಸುಬಾನಿ ಪಿಂಜಾರ ಹಂಪಿ‌ ಮಿರರ್ ವಿಜಯನಗರ.