ರೆಡ್ಡಿಗಳ ಅಬ್ಬರ ಮತ್ತೆ ಮುನ್ನೆಲೆಗೆ. ಹುಟ್ಟುಹಬ್ಬದ ಶುಭಾಷಯ ಹೇಳಲು ಸಿ.ಎಂ ಬೊಮ್ಮಾಯಿ ಓಡೊಡಿ ಬಂದರೂ, ಆನಂದ್ ಸಿಂಗ್ ಮಾತ್ರ ಗೈರಾಗಿದ್ರು.

ವಿಜಯನಗರ… ವಿಜಯನಗರ ಜಿಲ್ಲೆ ಹರಪನಹಳ್ಳಿಯಲ್ಲಿ ನಡೆದ ಸೀತಾರಾಮ ಕಲ್ಯಾಣೋತ್ಸವ ಮತ್ತು ಷಷ್ಠ್ಯಾಬ್ದಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ವೇದಿಕೆ ಕಾರ್ಯಕ್ರಮದಲ್ಲಿ ಸಿ.ಎಂ.ಬಸವರಾಜ್ ಬೊಮ್ಮಾಯಿ ಸೇರಿದಂತೆ ಸಂಸದ ಜಿ.ಎಂ.ಸಿದ್ದೇಶ, ಸಚಿವ ಶ್ರೀರಾಮುಲು, ಶಾಸಕ ಸೋಮಶೇಖರ ರೆಡ್ಡಿ, ಗಾಲಿ ಜನಾರ್ಧನ ರೆಡ್ಡಿ, ಸಂಸದ ದೇವೇಂದ್ರಪ್ಪ, ಸೇರಿದಂತೆ ಬಿಜೆಪಿ ಪಕ್ಷದ ಹಲವು ನಾಯಕರು ಬಾಗಿಯಾಗಿದ್ದರು.

ಸೀತಾರಾಮಕಲ್ಯಾಣೋತ್ಸವದ ಹೆಸರಲ್ಲಿ ನಿರ್ಮಾಣವಾಗಿದ್ದ ಈ ಕಾರ್ಯಕ್ರಮದ ವೇದಿಕೆ ಸೀಮಿತವಾಗಿದ್ದು ಮಾತ್ರ ರೆಡ್ಡಿ ಕುಟುಂಭದ ಹಿರಿಯ ಕರುಣಾಕರ ರೆಡ್ಡಿಯವರ ಹುಟ್ಟುಹಬ್ಬ ಆಚರಣೆಗೆ. ಗಣಿ ಪ್ರಕರಣದಲ್ಲಿ ಸಿಲುಕಿ ಇತ್ತೀಚೆಗೆ ಬಳ್ಳಾರಿ ಪ್ರವೇಶಿಸಿರುವ ಗಾಲಿ ಜನಾರ್ಧನ ರೆಡ್ಡಿ ರಾಜಕೀಯ ಪ್ರವೇಶದ ಶಕ್ತಿ ಪ್ರದರ್ಶನದ ವೇದಿಕೆ  ಇದಾಗಿತ್ತು.

ಕಳೆದ ಹತ್ತು ವರ್ಷಗಳಿಂದ ದೂರ ದೂರವಿದ್ದ ರೆಡ್ಡಿ ಬ್ರದರ್ಶ್ ಒಟ್ಟಿಗೆ ಕಾಣಿಸಿಕೊಂಡಿದ್ದ ವೇದಿಕೆ ಸಹ ಇದೇ ಆಗಿತ್ತು. ಇನ್ನು ಮಾತಿನುದ್ದಕ್ಕೂ ಅಣ್ಣ ಕರುಣಾಕರ ರೆಡ್ಡಿಯ ಕೊಂಡಾಡುವ ಮೂಲಕ ನಾವೆಲ್ಲ ಒಟ್ಟಿಗಿದ್ದೇವೆ ಎಂದು ಗಾಲಿ ಜನಾರ್ಧನ ರೆಡ್ಡಿ ಈ ವೇಧಿಕೆಯ ಮೂಲಕ ತೋರಿಸುವ ಪ್ರಯತ್ನಮಾಡಿದರು, ಮಾತಿನುದ್ದಕ್ಕೂ ಅಣ್ಣನನ್ನ ಹಾಡಿ ಹೊಗಳಿದ ಗಾಲಿ ಜನಾರ್ಧನ ರೆಡ್ಡಿ, ನಾವು ಮೂರು ಜನ ಸಹೋದರರಲ್ಲ ನಾಲ್ಕು ಜನ ಅಣ್ಣ ತಮ್ಮಂದಿರು, ಶ್ರೀ ರಾಮುಲು ಕೂಡ ನಮ್ಮ ಸಹೋದರ, ಶ್ರೀ ರಾಮುಲುಗೆ ಲಕ್ಷ್ಮಣ,ಭರತ, ಶತ್ರುಘ್ನರಂತೆ ನಾವು ಜೊತೆಗಿದ್ದೇವೆ ಎಂದು ಗಾಲಿ ಜನಾರ್ಧನರೆಡ್ಡಿ ಮಾತನಾಡಿದರು.

ಸಹಜವಾಗಿ ಸಿ.ಎಂ.ಇಂತಾ ಕಾರ್ಯಕ್ರಮಗಳಲ್ಲಿ ಬಾಗವಹಿಸುವುದು ಕಷ್ಟಸಾದ್ಯ, ಆದರೆ ರೆಡ್ಡಿ ಬ್ರದರ್ಶ್ ಒಟ್ಟಿಗೆ ಸೇರಿ ನಡೆಸಿಕೊಡುವ ಕಾರ್ಯಕ್ರಮ ಇದಾದ ಕಾರಣಕ್ಕೆ ಕಾರ್ಯಕ್ರಮದಲ್ಲಿ ಬಾಗವಹಿಸಿ ಕರುಣಾಕರ ರೆಡ್ಡಿಯವರಿಗೆ ಹುಟ್ಟುಹಬ್ಬದ ಶುಭಾಷಯಗಳನ್ನ ಕೋರಿ ಕಾಂಗ್ರೆಸ್ ಬದ್ರ ಕೋಟೆಯಾಗಿದ್ದ ಬಳ್ಳಾರಿಯಲ್ಲಿ ಬಿಜೆಪಿ ಪಕ್ಷ ಕಟ್ಟಲು ರೆಡ್ಡಿಗಳು ಶ್ರಮಿಸಿದ ನೆನನಪನ್ನ ಮೆಲುಕು ಹಾಕಿದರು. ಇನ್ನು ಕಾರ್ಯಕ್ರಮದಲ್ಲಿ ಬಾಗವಹಿಸಿದ ಸಿ.ಎಂ.ಬಸವರಾಜ್ ಬೊಮ್ಮಾಯಿಯವರು ಮಾತನಾಡುತ್ತ ಪರೋಕ್ಷವಾಗಿ ರೆಡ್ಡಿ ಬ್ರದರ್ಸ್ ಗಳಿಗೆ ಕಿವಿ ಮಾತು ಹೇಳಿದಂತೆ ಗೋಚರವಾಗಿದ್ದಂತೂ ಸತ್ಯ.

ಹಣ ಅಧಿಕಾರ ಇದ್ದಾಗ ನಾವು ಏನು ಸಂಪಾದಿಸಿದ್ದೇವೆ ಎನ್ನುವುದಕ್ಕಿಂತ ದೀನ ದಲಿತರ ಕಷ್ಟ ನಷ್ಟಗಳನ್ನ ಎಷ್ಟರ ಮಟ್ಟಿಗೆ ದೂರಮಾಡಿದ್ದೇವೆ ಎನ್ನುವುದು ಮುಖ್ಯ ಎನ್ನುವ ಮೂಲಕ ತಮ್ಮ ಮಾತನ್ನ ಆರಂಭಿಸಿ, ರೆಡ್ಡಿ ಕುಟುಂಭದ ಎಲ್ಲಾ ಸದಸ್ಯರು ಒಟ್ಟಿಗೆ ಇರುವುದನ್ನ ನೋಡಿ ತುಂಬಾ ಖುಷಿ ಆಯ್ತು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು ಕಾರ್ಯಕ್ರಮ ಮುಕ್ತಾಯಗೊಳಿಸಿದರು. ಆದರೆ ವಿಜಯನಗರ ಹರಪನಹಳ್ಳಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಿ.ಎಂ. ಬಾಗವಹಿಸಿದರು ಪ್ರವಾಸೋಧ್ಯಮ ಸಚಿವ ಆನಂದ್ ಸಿಂಗ್ ಗೈರು ಆಗಿದ್ದು ಎದ್ದು ಕಾಣುತಿತ್ತು.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.