You are currently viewing ಒಂದೇ ಕುಟುಂಭದ ನಾಲ್ವರು ಸಾವನ್ನಪ್ಪಿದ ಪ್ರಕರಣ, ಸಾವಿನ ಮನೆಗೆ ಎದುರಾಳಿ ಸಚಿವ ಶಾಸಕರು ಬೇಟಿ.

ಒಂದೇ ಕುಟುಂಭದ ನಾಲ್ವರು ಸಾವನ್ನಪ್ಪಿದ ಪ್ರಕರಣ, ಸಾವಿನ ಮನೆಗೆ ಎದುರಾಳಿ ಸಚಿವ ಶಾಸಕರು ಬೇಟಿ.

ವಿಜಯನಗರ… ಒಂದೇ ಕುಟುಂಭ ನಾಲ್ವರು ಸಾವನ್ನಪ್ಪಿದ ಮರಿಯಮ್ಮನಹಳ್ಳಿ ಪಟ್ಟಣದ ಮೃತರ ಮನೆಗೆ ಇಂದು ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ಮತ್ತು ಸಚಿವ ಆನಂದ್ ಸಿಂಗ್ ಬೇಟಿ ನೀಡಿ ಸಾಂತ್ವಾನ ಹೇಳಿದರು.

ಜೊತೆಗೆ ವಿಜಯನಗರ ನೂತನ ಜಿಲ್ಲೆಯ ಜಿಲ್ಲಾಧಿಕಾರಿ ಅನಿರುದ್ದ ಶ್ರವಣ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ ಅವರು ಬೇಟಿ ನೀಡಿ ಘಟನೆಯ ಕುರಿತು ಸಂಪೂರ್ಣ ಮಾಹಿತಿ ಸಂಗ್ರಹಿಸಿದರು. ಅದಲ್ಲದೆ ಬಳ್ಳಾರಿಯ ವಿದ್ಯೂತ್ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಕೂಡ ಸುಟ್ಟಿರುವ ಮನೆಯಲ್ಲಿ ತಪಾಸಣೆ ನಡೆಸಿ ವಿದ್ಯೂತ್ ಶಾರ್ಟ್ ಸರ್ಕ್ಯೂಟ್ ಯಾವ ಕಾರಣದಿಂದ ಸಂಭವಿಸಿದೆ ಎಂದು ಪರಿಸೀಲನೆಗೆ ಮುಂದಾದರು.

ನಿನ್ನೆ ಬೆಳಗಿನ ಜಾವ 12:45 ಗಂಟೆ ಸುಮಾರಿಗೆ ವಿದ್ಯೂತ್ ಶಾರ್ಟ್ ಸರ್ಕ್ಯೂಟ್ ನಿಂದ ಉಂಟಾದ ಅಗ್ನಿ ಅವಘಡಕ್ಕೆ ಒಂದೇ ಕುಟುಂಭದ ನಾಲ್ವರು ಸಜೀವವಾಗಿ ದಹನವಾದ ದಾರುಣ ಘಟನೆ ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣದ 5ನೇ ವಾರ್ಡಲ್ಲಿರುವ ಶ್ರೀ ರಾಘವೇಂದ್ರ ಶೆಟ್ಟಿ ರವರ ಮನೆಯಲ್ಲಿ ಸಂಭವಿಸಿತ್ತು.

ಇದ್ದಕ್ಕಿದ್ದಂತೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮತ್ತು ಎ.ಸಿ ಲಿಕ್ ನಿಂದ ಮನೆಗೆ ಬೆಂಕಿ ಹತ್ತಿಕೊಂಡಿದ್ದು ಮನೆಯ ಕೆಳಗಡೆ ಮಲಗಿದ್ದ  ರಾಘವೇಂದ್ರ ಶೆಟ್ಟಿ ಮತ್ತು ಅವರ ಹೆಂಡತಿ ರಾಜೇಶ್ರೀ ರವರು ಮನೆಯಿಂದ ಹೊರಗಡೆ ಓಡಿ ಬಂದಿದ್ದು,

ಮನೆಯ ಬೆಡ್ರೂಮಲ್ಲಿ ಮಲಗಿದ್ದ  ರಾಘವೇಂದ್ರ ಶೆಟ್ಟಿ ರವರ ಮಗ ಡಿ ವೆಂಕಟ್ ಪ್ರಶಾಂತ್ 42 ವರ್ಷ, ವೈಷ್ಣವ ಜನಾಂಗ ಕಿರಣಿ ಅಂಗಡಿ ವ್ಯಾಪಾರಿ ಮತ್ತು ವೆಂಕಟ್ ಪ್ರಶಾಂತ್ ರವರ ಹೆಂಡತಿ ಡಿ ಚಂದ್ರಕಲ 38 ವರ್ಷ,  ಹಾಗೂ ಅವರ ಮಕ್ಕಳಾದ  1) ಎಚ್. ಎ ಅರ್ದ್ವಿಕ್, 16 ವರ್ಷ, 2) ಪ್ರೇರಣಾ, 8 ವರ್ಷ ಇವರುಗಳು  ಮನೆಯಿಂದ ಹೊರಗಡೆ ಬರಲಿಕ್ಕೆ ಆಗದೆ ಸಜೀವ ದಹನವಾಗಿದ್ದರು.

ಘಟನೆಯ ಸುದ್ದಿ ವಿಜಯನಗರ ಜಿಲ್ಲೆಯಾಧ್ಯಂತ ಹಬ್ಬುತಿದ್ದಂತೆ ಜಿಲ್ಲೆ ಸೇರಿದಂತೆ ನೆರೆಯ ಜಿಲ್ಲೆಯ ಜನ ಸಾಮಾನ್ಯರು ಕೂಡ ಸಂತಾಪ ಸೂಚಿಸಿ ಮರುಗಿದ್ದರು. ಇದೇ ವಿಷಯಕ್ಕೆ ಸಂಭಂದಿಸಿದಂತೆ ಇಂದು ಇಲ್ಲಿನ ಸ್ಥಳೀಯ ಶಾಸಕ ಭೀಮಾನಾಯ್ಕ್ ಮತ್ತು ಪ್ರವಾಸೋಧ್ಯಮ ಸಚಿವ ಆನಂದ್ ಸಿಂಗ್ ಸಾವಿನ ಮನೆಗೆ ಬೇಟಿ ಮೃತ ಕುಟುಂಭಸ್ಥರಿಗೆ ಸಾಂತ್ವಾನ ಹೇಳಿದರು.