You are currently viewing ಕಳ್ಳತನಕ್ಕೆ ಮುನ್ನವೇ ಕೈಕೊಳ.ಮೊಬೈಲ್ ಕಳ್ಳ ಅಂದರ್.

ಕಳ್ಳತನಕ್ಕೆ ಮುನ್ನವೇ ಕೈಕೊಳ.ಮೊಬೈಲ್ ಕಳ್ಳ ಅಂದರ್.

ವಿಜಯನಗರ (ಹೊಸಪೇಟೆ) ಮನೆಗಳ್ಳತನಕ್ಕೆ ಎತ್ನಿಸಿದ ಮನೆಗಳ್ಳನನ್ನ ಸ್ಥಳೀಯರೆ ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ವಿಜಯನಗರ ಜಿಲ್ಲೆ ಹೊಸಪೇಟೆ ನಗರದ ಮೂರುಗೇರಿ ಪ್ರದೇಶದಲ್ಲಿ ಇಂದು ಬೆಳಗಿನ ಜಾವ ನೇದಿದೆ. ರಮೇಶ ಅಲಿಯಾಸ್ ಪರಶುರಾಮ ಅಲಿಯಾಸ್ ಹೆಗ್ಗಣ ಸೆರೆ ಸಿಕ್ಕಿರುವ ಮನೆಗಳ್ಳ ಆಗಿದ್ದಾನೆ.

ಮೂರುಗೇರಿ ಪ್ರದೇಶದಲ್ಲಿ 11/09/2022ರಂದು ಬೆಳಗಿನ ಜಾವ 4:30ರ ಸುಮಾರಿಗೆ ವಿಶ್ವನಾಥ ಪೂಜಾರಿ ಎಂಬುವವರಿಗೆ ಸೇರಿದ ಮನೆಯ ಕಿಟಕಿಯನ್ನ ಮುರಿದು ಒಳ ನುಗ್ಗುವುದನ್ನ ತಿಳಿದ ಸ್ಥಳೀಯರು ಕೂಡಲೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ಕೂಡಲೆ ಸ್ಥಳಕ್ಕೆ ಬೇಟಿ‌ ನೀಡಿದ ಬೀಟ್ ಸಿಬ್ಬಂದಿ ಎ.ಎಸ್.ಐ. ಬಿ.ಎಂ.ಸುರೇಶ್ ಹಾಗೂ ಪರಶುರಾಮ್ ನಾಯಕ್, ನಾಗರಾಜ್, ಕಳ್ಳನನ್ನ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಗೆ ಕರೆ ತಂದು, ಮನೆ ಮಾಲೀಕನಿಂದ ದೂರ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಮೊಬೈಲ್ ಕಳ್ಳರನ ಬಂದನ.

ಹೊಸಪೇಟೆ ಬಸ್ ನಿಲ್ದಾಣದಲ್ಲಿ ನಿಂತು ಪ್ರಯಾಣಿಕರ ಮೊಬೈಲ್ ಕದಿಯುತ್ತಿದ್ದ ಮೊಬೈಲ್ ಕಳ್ಳನನ್ನ ಹೊಸಪೇಟೆ ಪಟ್ಟಣ ಪೊಲೀಸರು ಬಂದಿಸಿದ್ದಾರೆ. ಬಂದಿತನಿಂದ 70 ಸಾವಿರ ಬೆಲೆ ಬಾಳುವ ಎಂಟು ಮೊಬೈಲ್ ಮತ್ತು ಒಂದು ಜೊತೆ ಬೆಂಡೊಲೆಯನ್ನ ವಶಕ್ಕೆ ಪಡೆಸಿದ್ದಾರೆ.

ಬಸವನದುರ್ಗದ ಚಲವಾದಿ ಪ್ರತಾಪ್ ಬಂದಿತ ಆರೋಪಿಯಾಗಿದ್ದಾನೆ.

10/09/2022ರ ರಾತ್ರಿ ಏಳ ರಿಂದ ಎಂಟು ಗಂಟೆ ಸುಮಾರಿಗೆ ಹೊಸಪೇಟೆ ಬಸ್ ನಿಲ್ದಾಣದಲ್ಲಿ ಮರಿಯಮ್ಮನಹಳ್ಳಿಯ ಕುಮಾರಿ ಗೀತಾಂಜಲಿ ಎಂಬ ವಿಧ್ಯಾರ್ಥಿನಿಯ ವೆನೈಟ್ ಬ್ಯಾಗ್ ಕದ್ದು ಪರಾರಿಯಾಗಿದ್ದ, ಒಂದು ವೆನೈಟಿ ಬ್ಯಾಗ್ ಮತ್ತು ಒಂದ ಜೊತೆ ಬೆಂಡೊಲೆ ಸೇರಿದಂತೆ ಮೊಬೈಲ್ ಕಳೆದುಕೊಂಡಿದ್ದ ಯುವತಿಯ ಪೊಷಕರು ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 

ನಂತರ ಕದ್ದ ಮೊಬೈಲ್ ಮಾರಾಟ ಮಾಡುತಿದ್ದ ವಿಷಯ ತಿಳಿದ ಪೊಲೀಸರು ಪ್ರತಾಪನನ್ನ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ, ಯುವತಿ ವೆನೈಟ್ ಬ್ಯಾಗ್ ಕಳ್ಳತನ ಮಾತ್ರವಲ್ಲದೆ, ಈ ಹಿಂದೆ ಕದ್ದಿರುವ ಎಲ್ಲಾ ಮೊಬೈಲ್ ಗಳನ್ನ ಪೊಲೀಸರ ಮುಂದೆ ಇಕ್ಕಿದ್ದಾನೆ. 

ಹೊಸಪೇಟೆ ಡಿವೈಎಸ್ಪಿ ವಿಶ್ವನಾಥ ರಾವ್ ಕುಲಕರ್ಣಿ ಮಾರ್ಗದರ್ಶನದಲ್ಲಿ ನಡೆದ ಈ ಪ್ರಕರಣದ ತನಿಖೆಯ ನೇತೃತ್ವವನ್ನ ಪಟ್ಟಣ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಶ್ರೀನಿವಾಸ್ ರಾವ್ ವಹಿಸಿಕೊಂಡಿದ್ದು, ಎ.ಎಸ್.ಐ. ಕೋದಂಡಪಾಣಿ ಮತ್ತು ಸಿಬ್ಬಂದಿಗಳಾದ ನಾಗರಾಜ್, ಬಿ.ರಾಘವೇಂದ್ರ,ಶ್ರೀರಾಮರೆಡ್ಡಿ, ಸಂಜೀವಪ್ಪ,ಪರಶುನಾಯಕ್, ಲಿಂಗರಾಜ್, ಪಕ್ಕೀರಪ್ಪ,ಗುರುಬಸವರಾಜ್, ದೇವೇಂದ್ರಪ್ಪ ತನಿಖಾ ತಂಡದಲ್ಲಿ ಬಾಗಿಯಾಗಿದ್ದರು.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.