You are currently viewing ದೇಶದ ಅತೀ ದೊಡ್ಡ ದ್ವಜ ಹಾರಾಟ ನಡೆಸಲು ಕೋತಿರಾಜ್ ನೆರವು..

ದೇಶದ ಅತೀ ದೊಡ್ಡ ದ್ವಜ ಹಾರಾಟ ನಡೆಸಲು ಕೋತಿರಾಜ್ ನೆರವು..

ವಿಜಯನಗರ…ಸ್ವತಂತ್ರೋತ್ಸವದ 75ನೇ ವರ್ಷದ ಅಮೃತ ಮೊಹೋತ್ಸವವನ್ನ ವಿಜಯನಗರ ಜಿಲ್ಲೆಯಲ್ಲಿಂದು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆ ನಗರದ ಪುನಿತ್ ರಾಜಕುಮಾರ್ ಕ್ರೀಡಾಂಗಣದಲ್ಲಿ ನಿರ್ಮಾಣವಾಗಿರುವ ದೇಶದ ಅತಿ ಎತ್ತರದ ದ್ವಜ ಸ್ಥಂಬ (405) ನಿರ್ಮಾಣವಾಗಿದ್ದು, ಸಚಿವ ಆನಂದ್ ಸಿಂಗ್ ಇಂದು ದ್ವಜಾರೋಹಣ ನೆರವೇರಿಸಿದರು.  ಸಂಸದ ವೈ ದೇಚೇಂದ್ರಪ್ಪ, ಜಿಲ್ಲಾಧಿಕಾರಿ ಅನಿರುದ್ ಶ್ರವಣ್, ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಅರುಣ್ ಕುಮಾರ್ ಕೆ. ಸಮಾರಂಭದಲ್ಲಿ ಬಾಗಿಯಾಗಿ ಸಚಿವರಿಗೆ ಸಾತ್ ನೀಡಿದರು. 405 ಅಡಿ ಎತ್ತರದ ಈ ದ್ವಜ ಸ್ತಂಬದಲ್ಲಿ 80 ಅಡಿ ಉದ್ದ 120 ಅಡಿ ಅಗಲದ ದ್ವಜವನ್ನ ಹೊಂದಿದ್ದು, ಈ ಬೃಹತ್ ದ್ವಜ ಹಾರಾಡಲು ತಂತ್ರಜ್ಞರು ಹಗಲು ರಾತ್ರಿ ಎನ್ನದೆ ಶ್ರಮವಹಿಸಿ ಯಶ್ವಿಯಾಗಿದ್ದಾರೆ.

ತಾಂತ್ರಿಕ ಸಮಸ್ಯೆ ಪರಿಹಾರಕ್ಕೆ ಕೋತಿ ರಾಜ ಖ್ಯಾತಿಯ ಜೋತಿ ರಾಜ್ ನೆರವು ಪಡೆದ ವಿಜಯನಗರ ಜಿಲ್ಲಾಡಳಿತ.

ಹೌದು ನಿನ್ನೆ ರಾತ್ರಿ ದ್ವಜಾರೋಹಣದ ಪ್ರಯೋಗಿಕ ಪರೀಕ್ಷೆ ನಡೆದ ಸಂದರ್ಭದಲ್ಲಿ ದ್ವಜ ಸಂಭದ 150ಅಡಿ ಮೇಲೆ ತಾಂತ್ರಿಕ ತೊಂದರೆ ಎದುರಾಗಿ ಕಷ್ಟಪಡುವ ಪರಿಸ್ಥಿತಿ ಎದುರಾಯಿತು. ಈ ಕೂಡಲೆ ಚಿತ್ರದುರ್ಗದ ಕೋತಿ ರಾಜವರನ್ನ ಕರೆತಿಸಿದ ಜಿಲ್ಲಾಡಳಿತ  ಕೋತಿರಾಜ ಅವರನ್ನ ಮೇಲೇರಿಸಿ ತಾಂತ್ರಿಕ ತೊಂದರೆ ಸರಿಪಡಿಸಿ ದ್ವಜ ಹಾರಾಟಕ್ಕೆ ಹರ ಸಾಹಸ ಪಡಬೇಕಾಯಿತು.

ದೇಶದ ಇತಿಹಾಸದಲ್ಲೇ ವಿಜಯನಗರ ಜಿಲ್ಲೆಯಲ್ಲಿ ಅತೀ ಎತ್ತರದ ದ್ವಜ ಸ್ಥಂಬ ನಿರ್ಮಾಣವಾಗಿರುವುದು ದಾಖಲೆ ಆದರೆ, ಅವರ ಜನ್ಮ ದಿನದಂದೇ ಅತೀ ಎತ್ತರಕ್ಕೆ ಮೇಲೇರಿದ ಸಾಹಸವನ್ನ ಕೂಡ ಕೋತಿ ರಾಜ್ ಈ ದ್ವಜ ಸ್ಥಂಬದ ಮೂಲಕ ಮಾಡಿದ್ದಾರೆ ಎಂಬುದು ಮತ್ತೊಂದು ಇತಿಹಾಸ ಈ ಬಾಗದಲ್ಲಿ ನಿರ್ಮಾಣವಾಗಿದೆ.

ವೀಡಿಯೊ ನೋಡಲು ಈ ಕೆಳಗಿನ ಲಿಂಕ್ ಒತ್ತಿರಿ.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.