You are currently viewing ಬದುಕಿರುವ ವ್ಯಕ್ತಿಗೆ ಮರಣ ಪ್ರಮಾಣ ಪತ್ರ ನೀಡಿದ ತಹಸಿಲ್ದಾರ್.

ಬದುಕಿರುವ ವ್ಯಕ್ತಿಗೆ ಮರಣ ಪ್ರಮಾಣ ಪತ್ರ ನೀಡಿದ ತಹಸಿಲ್ದಾರ್.

ಕೋಲಾರ… ಬದುಕಿರುವ ವ್ಯಕ್ತಿಗೆ ಮರಣ ಪ್ರಮಾಣ‌ ಪತ್ರ ನೀಡಿರುವ‌ ಪ್ರಕರಣವೊಂದು
ಕೋಲಾರ ಜಿಲ್ಲೆಯನ್ನ ನಡೆದಿದೆ. ಪ್ರಕರಣಕ್ಕೆ ಸಂಭಂದಿಸಿದಂತೆ ತಹಶೀಲ್ದಾರ್ ಸೇರಿ‌ ನಾಲ್ವರು ಸಿಬ್ಬಂದಿಗಳ ವಿರುದ್ಧ ದೂರು ದಾಖಲಾಗಿದೆ.
ಕೋಲಾರ ಜಿಲ್ಲೆಯ ಮುಳಬಾಗಲು ತಾಲೂಕಿನ ಎಂ.ಹೊಸಹಳ್ಳಿ ಗ್ರಾಮದ ಶಿವರಾಜ್ ಎಂಬ ರೈತ,
ಪಡಿತರ ಪಡೆಯಲು ಹೋದ ಸಂದರ್ಭದಲ್ಲಿ ಆಶ್ಚರ್ಯ ಎದುರಾಗಿದೆ.

ಪಡಿತರ ಚೀಟಿಯಲ್ಲಿ ಆತನ ಹೆಸರು ಇಲ್ಲದ ಕಾರಣಕ್ಕೆ ಪ್ರತಿ‌ ತಿಂಗಳು ಆತನ ಕುಟುಂಭಕ್ಕೆ ಕೊಡುವ ಪಡಿತರವನ್ನ ಕಡಿತಗೊಳಿಸಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನ ಪಡೆಯಲು ವ್ಯಕ್ತಿ‌ಮುಂದಾದಾಗ ತಾನು ಸಾವನ್ನಪ್ಪಿರುವ ದಾಖಲೆ ಕೈಗೆ ಸಿಕ್ಕಿದೆ.

ಹಾಗಾಗಿ ಈ ಹಿಂದಿನ ತಹಶೀಲ್ದಾರ್ ಜಿ.ರಾಜಶೇಖರ್, ಹಾಗೂ ಗ್ರಾಮ ಲೆಕ್ಕಿಗ ಅರವಿಂದ, ಮತ್ತು ಕಂದಾಯ ನಿರೀಕ್ಷಕ ಸಾದತ್ ವುಲ್ಲಾ ಖಾನ್,ನಾಡ ಕಚೇರಿ ಶಿರೇಸ್ತೆದಾರ್ ಜಯರಾಂ ವಿರುದ್ದ ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲುಮಾಡಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸುವಂತೆ ಶಿವರಾಜ್ ಒತ್ತಾಯಿಸಿದ್ದಾರೆ.