You are currently viewing ಈ ಹಿಂದೆ ಹೈಜಾಕಾಗಿದ್ದ ಕಾಂಗ್ರೆಸ್ ನಗರಸಭೆ ಸದಸ್ಯರು ಇಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆ.

ಈ ಹಿಂದೆ ಹೈಜಾಕಾಗಿದ್ದ ಕಾಂಗ್ರೆಸ್ ನಗರಸಭೆ ಸದಸ್ಯರು ಇಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆ.

ವಿಜಯನಗರ….ಕಳೆದ ಹೊಸಪೇಟೆ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಚುನಾಯಿತರಾಗಿದ್ದ ನಗರಸಭೆ ಸದಸ್ಯರು ಇಂದು ಅಧಿಕೃತವಾಗಿ ಬಿಜೆಪಿ ಪಕ್ಷ ಸೇರ್ಪಡೆ ಆಗಿದ್ದಾರೆ.

1.ವಿ.ಹುಲುಗಪ್ಪ 8ನೇ ವಾರ್ಡ್,

2.ಗುಡುಗುಂಟಿ ರಾಧ ಮಲ್ಲಿಕಾರ್ಜುನ 35ನೇ ವಾರ್ಡ್,

3.ಹೆಚ್.ಕೆ ಮಂಜುನಾಥ 28 ನೇ ವಾರ್ಡ್,

4.ಲಕ್ಷ್ಮೀ ಪರಗಂಟಿ 33 ನೇ ವಾರ್ಡ್,

5.ರೋಹಿಣಿ ವೆಂಕಟೇಶ್ 10ನೇ ವಾರ್ಡ್, ಸೇರ್ಪಡೆಯಾಗಿರುವ ಸದಸ್ಯರಾಗಿದ್ದಾರೆ.

ಕಳೆದ ವಾರ ನಡೆದಿದ್ದ ಬಿಜೆಪಿ ರಾಜ್ಯ ಕಾರ್ಯಕಾರಣಿ ಸಭೆಯ ಅವಲೋಕನ ಮತ್ತು ಅಭಿನಂದನ ಸಮಾರಂಭವನ್ನ ಇಂದು ಹೊಸಪೇಟೆ ನಗರದ ಸಿದ್ದಿಪ್ರಿಯಾ ಕಲ್ಯಾಣ ಮಂಟಪದಲ್ಲಿ ಆಯೋಜನೆಮಾಡಲಾಗಿತ್ತು.

ಬಿಜೆಪಿಯ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮತ್ತು ಸಚಿವ ಆನಂದ್ ಸಿಂಗ್ ಸೇರಿದಂತೆ ಬಿಜೆಪಿಯ ಹಲವು ಶಾಸಕರು ಮತ್ತು ಕಾರ್ಯಕರ್ತರು ಸಮಾರಂಭದಲ್ಲಿ ಬಾಗಿಯಾಗಿದ್ದರು. ಇದೇ ಸಂದರ್ಭದಲ್ಲಿ ಈ ನಗರಸಭೆಯ ಸದಸ್ಯರನ್ನ ನಳೀನ್ ಕುಮಾರ್ ಕಟೀಲ್ ಅವರು ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಮಾಡಿಕೊಂಡರು.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.