You are currently viewing ಕರ್ನಾಟಕ ರಾಜ್ಯಲಾರದ ಥಾವರ್ ಚಂದ್ ಗೆಹಲೋಟ್ ಅವರು ಹಂಪಿಗೆ ಬೇಟಿ ನೀಡಿದ ಪೊಟೊ ಗ್ಯಾಲರಿ.

ಕರ್ನಾಟಕ ರಾಜ್ಯಲಾರದ ಥಾವರ್ ಚಂದ್ ಗೆಹಲೋಟ್ ಅವರು ಹಂಪಿಗೆ ಬೇಟಿ ನೀಡಿದ ಪೊಟೊ ಗ್ಯಾಲರಿ.

ಹಂಪಿ ಶಿಲ್ಪಾ ಕಲಾ ವೈಭವಕ್ಕೆ ಮನಸೋತ ರಾಜ್ಯಪಾಲರು

ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಹಂಪಿಗೆ ಭೇಟಿ, ಐತಿಹಾಸಿಕ ಸ್ಮಾರಕಗಳ ವೀಕ್ಷಣೆ ಮಾಡಿದರು.

ಮೊದಲಿಗೆ ವಿಶ್ವವಿಖ್ಯಾತಿ ಹಂಪಿಯ ವಿರೂಪಾಕ್ಷನ ದರ್ಶನ ಮಾಡಿದ ರಾಜ್ಯಪಾಲರು, ವಿಶೇಷ ಪೂಜೆ ಸಲ್ಲಿಸಿದರು. ವಿರೂಪಾಕ್ಷನ ಸನ್ನಿಧಿಯಲ್ಲಿ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಅವರು ರಾಜ್ಯಪಾಲರಿಗೆ ಸನ್ಮಾನಿಸಿ, ಶ್ರೀ ಶಂಕರಾಚಾರ್ಯರ ಭಾವಚಿತ್ರ ನೀಡಿದರು.

ಹಂಪಿಯ ಐತಿಹಾಸಿಕ ಸ್ಮಾರಕಗಳ ವೀಕ್ಷಣೆ ನಡೆಸಿದ ಅವರು, ಶಿಲ್ಪಕಲಾವೈಭವಕ್ಕೆ ಮನಸೋತರು. ವಿಜಯ ವಿಠಲ, ಲಕ್ಷ್ಮಿ ದೇವಸ್ಥಾನ,
ಶ್ರೀ ಕೃಷ್ಣ ದೇವರಾಯ ಅವರ ಸಾಮ್ರಾಜ್ಯದ ಕುರುಹುಗಳಾದ ಪ್ರಮುಖ ಸ್ಥಳಗಳನ್ನು ಹಾಗೂ ಪಂಪ ನದಿಯನ್ನು ವೀಕ್ಷಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಅನಿರುದ್ಧ ಶ್ರವಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್, ಮುಂತಾದವರು ಉಪಸ್ಥಿತರಿದ್ದರು.