You are currently viewing ಕೊಬ್ಬರಿ ಹೋರಿ ಹಿರಿದ ಪರಿಣಾಮ ಯುವಕ ದಾರುಣ ಸಾವು…

ಕೊಬ್ಬರಿ ಹೋರಿ ಹಿರಿದ ಪರಿಣಾಮ ಯುವಕ ದಾರುಣ ಸಾವು…

ಹಾವೇರಿ…ಕೊಬ್ಬರಿ ಹೋರಿ ಹಿರಿತಕ್ಕೆ ಒಳಗಾದ ಯುವಕನೊಬ್ಬ ಸಾವಿಗೀಡಾದ ಘಟನೆ
ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಬೆಟಕೇರೂರು ಗ್ರಾಮದಲ್ಲಿ ಇಂದು ಸಂಭವಿಸಿದೆ,
ರಾಣಿಬೆನ್ನೂರು ತಾಲೂಕಿನ ಗುಡ್ಡದ ಹೊಸಳ್ಳಿ ಗ್ರಾಮದ ಷಣ್ಮುಖಪ್ಪ ಮಹೇಶಪ್ಪ ಹುಡೇದ 22ವರ್ಷ ಸಾವಿಗೀಡಾದ ಯುವಕನಾಗಿದ್ದು
ಇಂದು ಸಂಜೆ ಬೆಟಕೇರೂರು ಗ್ರಾಮದ ಭೂತಪ್ಪನ ಗುಡ್ಡದ ಇಳಿಜಾರಿನಲ್ಲಿ ಹೋರಿ ಬೆದರಿಸುವ ಸ್ಪರ್ಧೆ ನಡೆದಿತ್ತು,

ಇದನ್ನು ನೋಡುತ್ತ ನಿಂತಿದ್ದಾಗ ಕೊಬ್ಬರಿ ಹೋರಿಯೊಂದು ಈತನ ಹೊಟ್ಟೆಗೆ ಕೊಂಬಿನಿಂದ ಹಿರಿದಿದದೆ, ತೀವ್ರ ರಕ್ತ ಸ್ರಾವವಾಗಿ ಗಂಬೀರ ಗಾಯಗೊಂಡ ಯುವಕನನ್ನ ತಕ್ಷಣ ಹಿರೇಕೆರೂರು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಯುವಕ ಮಾತ್ರ ಬದುಕುಳಿಯಲಿಲ್ಲ.

ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಸಂಭಂದ ಪ್ರಕರಣ ದಾಖಲಾಗಿದ್ದು, ಹೋರಿ ಬೆದರಿಸುವ ಇಂತಾ ಸ್ಪರ್ಧೆಗಳಲ್ಲಿ ಒಂದಲ್ಲ ಒಂದು ಅವಘಡ ನಡೆಯುತ್ತಲೇ ಇವೆ.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.