You are currently viewing ಕಸ ವಿಲೇವಾರಿ ಮಾಡುವ ಯಂತ್ರ ತುಂಡರಿಸಿ ಕಳ್ಳತನಮಾಡಿದ್ದ ಆರೋಪಿಗಳು ಅಂದರ್.

ಕಸ ವಿಲೇವಾರಿ ಮಾಡುವ ಯಂತ್ರ ತುಂಡರಿಸಿ ಕಳ್ಳತನಮಾಡಿದ್ದ ಆರೋಪಿಗಳು ಅಂದರ್.

ವಿಜಯನಗರ.. ಹೊಸಪೇಟೆ ನಗರದ ಹೊರ ವಲಯದಲ್ಲಿರುವ ಕಾರಿಗನೂರು ಗ್ರಾಮದ ಬಳಿಯ ಘನ ತ್ಯಾಜ ವಿಲೇವಾರಿ ಘಟಕದಲ್ಲಿದ್ದ ಶ್ರಡರ್ ಮಷಿನ್ ಕಳ್ಳತನಮಾಡಿದ್ದ ಮೂರು ಜನ ಆರೋಪಿಗಳನ್ನ ಬಂದಿಸುವಲ್ಲಿ ಹೊಸಪೇಟೆ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ.ರಮೇಶ. ಶಿವನಾಯ್ಕ. ಎಂ.ಮರಿಸ್ವಾಮಿ ಬಂದಿತ ಆರೋಪಿಗಳಾಗಿದ್ದಾರೆ.

ಬಂದಿತರಿಂದ ನಾಲ್ಕು ಲಕ್ಷ ಮೌಲ್ಯದ ತುಂಡರಿಸಿದ ಶ್ರಡರ್ ಮಷಿನ್,ಕಳ್ಳತನಕ್ಕೆ ಬಳಸಿದ್ದ ಕೆ.ಎ. 35 ಬಿ 1620 ನಂಬರಿನ ಟಾಟ ಏಸ್ ವಾಹನ, ಹಾಗೂ ಶ್ರಡರ್ ಮಷಿನ್ ತುಂಡರಿಸಲು ಬಳಸಿದ್ದ ಗ್ಯಾಸ್ ಕಟರ್ ಮತ್ತು ಎರಡು ಸಿಲಿಂಡರ್ ವಶಕ್ಕೆ ಪಡೆದಿದ್ದಾರೆ.

ಹೊಸಪೇಟೆ ನಗರಸಭೆಯ ಪರಿಸರ ಇಂಜಿನಿಯರ್ ಶ್ರೀಮತಿ ಆರತಿಯವರು 18/01/2022ರಂದು ಗ್ರಾಮೀಣ ಪೊಲೀಸ್ ಠಾಣೆಗೆ ಬೇಟಿ‌ ನೀಡಿ ಕಳ್ಳತನಕ್ಕೆ ಸಂಭಂದಿಸಿದಂತೆ ದೂರು ದಾಖಲುಮಾಡಿದ್ದರು, ಪ್ರಕರಣವನ್ನ ಕೈಗೆತ್ತಿಕೊಂಡ ಪೊಲೀಸರು ಕದ್ದಿರುವ ಮಾಲು ಸಮೇತ ಆರೋಪಿಗಳನ್ನ ಬಂದಿಸಿದ್ದಾರೆ.

ಹೊಸಪೇಟೆ ಡಿ.ವೈ.ಎಸ್ಪಿ.ವಿಶ್ವನಾಥರಾವ್ ಕುಲಕರ್ಣಿ ಮಾರ್ಗದರ್ಶನದಲ್ಲಿ ತನಿಖೆ ನಡೆದಿದ್ದು, ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಶ್ರೀನಿವಾಸ ಮೇಟಿ ಹಾಗೂ ಎಸ್.ಐ.ಷಾಷಾವಲಿ. ರಾಘವೇಂದ್ರ, ಕೊಟ್ರೇಶ, ಪ್ರಕಾಶ, ರಮೇಶ, ಬಿ.ನಾಗರಾಜ, ಕೆ.ಸುಭಾಷ್ ತನಿಖಾ ತಂಡದಲ್ಲಿ ಬಾಗಿಯಾಗಿದ್ದರು. ಇನ್ನು ತಮ್ಮ ಸಿಬ್ಬಂದಿಗಳ ಕಾರ್ಯಚರಣೆಯನ್ನ ಮೆಚ್ಚಿದ ವಿಜಯನಗರ ಎಸ್ಪಿ ಡಾಕ್ಟರ್ ಅರುಣ್ ಕೆ. ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವರದಿ.. ಸುಬಾನಿ ಪಿಂಜಾರ ವಿಜಯನಗರ.