You are currently viewing ಒಮೈಕ್ರಾನ್ ಕ್ರಿಮಿಯ ಅಟ್ಟ ಹಾಸಕ್ಕಿಂತ ಪೊಲೀಸರ ದಂಡದ ಭಯವೇ ಹೆಚ್ಚಾಗಿದೆ ವಿಜಯನಗರ ಜನಕ್ಕೆ.

ಒಮೈಕ್ರಾನ್ ಕ್ರಿಮಿಯ ಅಟ್ಟ ಹಾಸಕ್ಕಿಂತ ಪೊಲೀಸರ ದಂಡದ ಭಯವೇ ಹೆಚ್ಚಾಗಿದೆ ವಿಜಯನಗರ ಜನಕ್ಕೆ.

ಹೌದು ಕೊರೊನ ನಿಯಂತ್ರಣ ಉದ್ದೇಶದಿಂದ ರಾಜ್ಯ ಸರ್ಕಾರ ವಾರಾಂತ್ಯದ ಎರಡು ದಿನಗಳನ್ನ ಲಾಕ್ ಡೌನ್ ಘೋಷಣೆಮಾಡಿದ ಹಿನ್ನೆಲೆಯಲ್ಲಿ ಇಡೀ ವಿಜಯನಗರ ಜಿಲ್ಲೆ ಸ್ಥಬ್ದವಾಗಿದೆ ಇಂದು.

ಹೊಸಪೇಟೆ ನಗರದ ಎಲ್ಲಾ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದಾಗಿದ್ದು, ಅಗತ್ಯ ವಸ್ತುಗಳ ವ್ಯಾಪಾರ ವಹಿವಾಟ ಮಾತ್ರ ಆಮೆಗತಿಯಲ್ಲಿ ಸಾಗಿತ್ತು, ಸಾರಿಗೆ ಬಸ್ ಸಂಚಾರಕ್ಕೆ ಅವಕಾಶ ಇದ್ದರೂ ಜನಗಳು ಮಾತ್ರ ಮನೆಯಿಂದ ಆಚೆ ಬರದ ಕಾರಣಕ್ಕೆ ಬಸ್ ಗಳೇ ಜನಗಳಿಗೆ ಕಾದು ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ನಗರದಲ್ಲಿ ಆಟೋ ಟ್ಯಾಕ್ಸಿ ಸಂಚಾರಕ್ಕೆ ಅವಕಾಶ ಇದ್ದರೂ ಜನಗಳು ಮಾತ್ರ ಅತ್ತ ಸುಳಿಯದ ಕಾರಣ ಆಟೋ ಟ್ಯಾಕ್ಸಿಗಳು ನಿಂತ ಜಾಗದಲ್ಲೇ ನಿಂತಿರುವ ದೃಷ್ಯ ಕಂಡುಬಂತು.

ಇನ್ನು ಸರಿಯಾದ ಮಾಹಿತಿ ಇರದೆ ನಗರಕ್ಕೆ ಬಂದ ಪ್ರಯಾಣಿಕರಿಗೆ ಈ ಬಾರಿ ಯಾವುದೇ ತೊಂದರೆ ಎದುರಾಗಲಿಲ್ಲ. ಕಾರಣ ಸಾರಿಗೆ ಬಸ್ ಸಂಚಾರ ಆಟೋ ಟ್ಯಾಕ್ಸಿ, ಹಾಗೂ ಹೊಟೆಲ್ ಗಳು ಲಭ್ಯವಿದ್ದ ಕಾರಣ ಅಪ್ಪಿ ತಪ್ಪಿ ಬಂದ ಪ್ರವಾಸಿಗರು ಮತ್ತು ಪ್ರಯಾಣಿಕರು ನಿಟ್ಟುಸಿರು ಬಿಟ್ಟು ಹೊಟ್ಟೆ ತುಂಬಿಸಿ ಕೊಂಡರು ತಮ್ಮೂರಿಗೆ ಮರಳಿದರು.

ಅದರಲ್ಲೂ ಕಳೆದ ಎರಡು ಬಾರಿ ಆದ ಲಾಕ್ ಡೌನ್ ಸಂದರ್ಭದಲ್ಲಿ ಪೊಲೀಸರ ತಮ್ಮ ತಾಳ್ಮೆಯನ್ನ ಕಳೆದುಕೊಂಡು ಲಾಟಿ ಬೀಸಿದ್ದರು, ಆದರೆ ಈ ಬಾರಿ ಪೊಲೀಸರು ತಮ್ಮ ಲಾಟಿಗೆ ಕೆಲಸ ಕೊಡದೆ ಜೇಬಲ್ಲಿರುವ ಪೆನ್ನಿಗೆ ಹೆಚ್ಚು ಕೆಲಸ ಕೊಟ್ಟು ಎಚ್ಚರಿಕೆ ಕೊಟ್ಟಿದ್ದಾರೆ.

ಹೌದು ಮಾಸ್ಕ್ ದರಿಸದೆ ಸಂಚರಿಸುವವರಿಗೆ, ಹಾಗೂ ಅನಗತ್ಯವಾಗಿ ನಗರದಲ್ಲಿ ಸಂಚರಿಸುವ ಕೆಲವರಿಗೆ ಇಂದು ಲಾಟಿ ಬದಲು ದಂಡ ವಸೂಲಿಯ ಬಿಸಿ ಮುಟ್ಟಿಸಿದ್ದಾರೆ ವಿಜಯನಗರ ಪೊಲೀಸರು.

ವಿಜಯನಗರ ಜಿಲ್ಲೆಯ ಸುತ್ತ ಮುತ್ತ ಒಟ್ಟು 31  ಚಕ್ ಪೊಸ್ಟ್ ಗಳನ್ನ ಅಳವಡಿಸಿದ ಪೊಲೀಸ್ ಇಲಾಖೆ ಜಿಲ್ಲೆಯ ಒಳ ಬರುವ ಮತ್ತು ಹೊರ ಹೋಗುವವರ ಮೇಲೆ ನಿಗಾ ವಹಿಸುತಿದ್ದಾರೆ,

ಇನ್ನು ಚಿಕಿತ್ಸೆಗೆ ಹೋಗುವವರಿಗೆ ಮತ್ತು ಸರಿಯಾದ ಕಾರಣದಿಂದ ಪ್ರಯಾಣಮಾಡುವ ಪ್ರಯಾಣಿಕರಿಗೆ ಮಾತ್ರ ಯಾವುದೇ ತೊಂದರೆ ಇಲ್ಲದೆ ರಸ್ತೆ ಅನುವು ಮಾಡಿಕೊಡುವ ಮೂಲಕ  ಪೊಲೀಸರು ತಮ್ಮ ಕೆಲಸ ಮಾಡುತಿದ್ದಾರೆ.

ಒಟ್ಟಿನಲ್ಲಿ ಮೂರನೆ ಅಲೆಯ ಒಮಿಕ್ರಾನ್ ಕ್ರಿಮಿ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ರೆ, ಇತ್ತ ಜನಗಳ ಗಾಯದ ಮೇಲೆ ಬರೆ ಎಳೆದಂತಾಗಿದೆ ಸರ್ಕಾರ ಮಾಡಿರುವ ಲಾಕ್ ಡೌನ್ ನಿಯಮ.

ಕಳೆದ ಒಂದುವರೆ ವರ್ಷದಿಂದ ಲಾಕ್ ಡೌನಗೆ ತುತ್ತಾಗಿ ದುಡಿಮೆ ಕಳೆದುಕೊಂಡಿದ್ದ ಜನಗಳು ಇದೀಗ ಚೇತರಿಕೆಯ ಹಾದಿ ಹಿಡಿದಿದ್ರು, ಅಷ್ಟೊತ್ತಿಗೆ ಮೂರನೆ ಅಲೆಯ ಹೆಸರಲ್ಲಿ ಲಾಕ್ಡೌನ್ ಮಾಡಿದ್ದಕ್ಕೆ ಜನಗಳು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

ಇನ್ನು ಮಾಸ್ಕ್ ಇಲ್ಲದೆ ನಿಯಮ ಮೀರಿ ಹೊರಗಡೆ ಓಡಾಡಿದವರಿಗೆ ಪೊಲೀಸರು ದಂಡ ವಿದಿಸಿದ ಲೆಕ್ಕ ದೊಡ್ಡದಿದೆ. ಇಂದು ಒಂದೇ ದಿನಕ್ಕೆ ಜಿಲ್ಲೆಯಾಧ್ಯಂತ ಬರೋಬ್ಬರಿ 757 ಕೇಸ್ ಗಳನ್ನ ಪೊಲೀಸರು ದಾಖಲುಮಾಡಿದ್ದಾರೆ.

115ವಾಹನಗಳನ್ನ ಸೀಜ್ ಮಾಡಿರುವ ವಿಜಯನಗರ ಜಿಲ್ಲೆಯ ಪೊಲೀಸರು ದಂಡ ಪಡೆದು 58ವಾಹನಗಳನ್ನ ರಿಲೀಸ್ ಮಾಡಿದ್ದಾರೆ ಇನ್ನುಳಿದ 57ವಾಹನಗಳನ್ನ ಇನ್ನೂ ರಿಲೀಸ್ ಮಾಡಬೇಕಿದೆ ಎಂದು ವಿಜಯನಗರ ಎಸ್ಪಿ ಡಾಕ್ಟರ್. ಅರುಣ್. ಕೆ. ಮಾದ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ವರದಿ..ಸುಬಾನಿ ಪಿಂಜಾರ. ವಿಜಯನಗರ.