You are currently viewing ಖಾಸಗಿ ಶಾಲ್ಲೆಯ ಮೀರಿಸುವ ಸರ್ಕಾರಿ ಶಾಲೆಯ ಕಥೆ ಇದು.

ಖಾಸಗಿ ಶಾಲ್ಲೆಯ ಮೀರಿಸುವ ಸರ್ಕಾರಿ ಶಾಲೆಯ ಕಥೆ ಇದು.

ವಿಜಯನಗರ… ಶಾಲೆಗಳೆಂದ್ರೆ ಮೂಗು ಮುರಿಯುವ ಜನಗಳೇ ಹೆಚ್ಚು, ಯಾಕೆಂದ್ರೆ ಗುಣ ಮಟ್ಟದ ಶಿಕ್ಷಣ ಸಿಗಲ್ಲ, ಶಾಲೆಯಲ್ಲಿ ಶಿಸ್ತು ಇರಲ್ಲ, ಶಿಕ್ಷಕರು ಸರಿಯಾದ ಸಮಯಕ್ಕೆ ಮಕ್ಕಳಿಗೆ ಪಾಠ ಪ್ರವಚನಮಾಡಲ್ಲ ಎಂಭ ಆರೋಪಗಳನ್ನ ನಾವು ಸರ್ವೇ ಸಾಮಾನ್ಯವಾಗಿ ಕೇಳಿದ್ದೇವೆ, ಹಾಗಾಗಿಯೇ ಕೆಲವು ಪೋಷಕರು ತಮ್ಮ ಮಕ್ಕಳನ್ನ ಲಕ್ಷ ಲಕ್ಷ ಹಣ ಕರ್ಚುಮಾಡಿ ಸರದಿ ಸಾಲಿನಲ್ಲಿ ನಿಂತು ಮಕ್ಕಳನ್ನ ಖಾಸಗಿ ಶಾಲೆಗಳಿಗೆ ಸೇರಿಸ್ತಾರೆ, ಆದ್ರೆ ಇಲ್ಲೊಂದು ಸರ್ಕಾರಿ ಶಾಲೆ ಇದೆ, ಈ ಶಾಲೆಯಲ್ಲಿ ಪ್ರವೇಶ ಪಡೆಯುವುದಕ್ಕೆ ವಿದ್ಯಾರ್ಥಿಗಳು ಸಾಲುಗಟ್ಟಿ ನಿಲ್ಲುತ್ತಾರೆ, ಮೇಲಾಗಿ ಪ್ರವೇಶಸಿಗುವುದು ಕಷ್ಟವಾದ್ರೆ ಗಣ್ಯಾತಿ ಗಣ್ಯರಿಂದ ಸಿಪಾರಸ್ಸು ಪತ್ರ ಬೇರೆ ತರ್ತಾರಂತೆ ವಿಧ್ಯಾರ್ಥಿಗಳು, ಅರೆ ಏನಪ್ಪ ಈ ಸರ್ಕಾರಿ ಶಾಲೆಯ ವಿಶೇಷತೆ ಅಂತೀರ ಈ ಸ್ಟೋರಿ ಸಂಪೂರ್ಣ ಓದಿ.

ಹೌದು ಹೊಸಪೇಟೆ ನಗರದ ನಗರಸಭೆಯ ಕಛೇರಿಯ ಹಿಂಬಾಗದಲ್ಲಿರುವ ಈ ಸರ್ಕಾರಿ ಪ್ರೌಡ ಶಾಲೆಯ ಮುಂಬಾಗದಲ್ಲಿ ಪ್ರತಿ ಶೈಕ್ಷಣಿ ವರ್ಷ ಬಂತೆದ್ರೆ ಸಾಕು ವಿದ್ಯಾರ್ಥಿನಿಯರು ಮತ್ತು ಪೋಷಕರು ಸರದಿ ಸಾಲಿನಲ್ಲಿ ಹೀಗೆ ನಿಲ್ಲುವುದು ಸರ್ವೇ ಸಾಮಾನ್ಯವಾಗಿ ಕಂಡು ಬರುತ್ತೆ, ಸಹಜವಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಖಾಸಗಿ ಶಾಲೆಗಳ ಕಡೆ ಮುಖ ಮಾಡುವ ಪೋಷಕರು ಇದೀಗ ಈ ಸರ್ಕಾರಿ ಪ್ರೌಡ ಶಾಲೆಯತ್ತ ಮುಖಮಾಡುವುದಕ್ಕೆ ಪ್ರಾರಂಭಿಸಿದ್ದಾರೆ, ಯಾಕೆಂದ್ರೆ ಖಾಸಗಿ ಶಾಲೆಗಳನ್ನ ಮೀರಿಸುವಂತ ಶಿಸ್ತು, ಶಿಕ್ಷಣ, ಸೌಲಭ್ಯಗಳು, ಇಲ್ಲಿಗೆ ದಾಖಲಾಗುವ ಮಕ್ಕಳಿಗೆ ಸಿಗುತ್ತಂತೆ, ಹಾಗಾಗಿಯೇ ಪೋಷಕರು ತಮ್ಮ ಮಕ್ಕಳನ್ನ ಈ ಶಾಲೆಗೆ ಸೇರಿಸಿ ಶಿಕ್ಷಣ ಕೊಡಿಸಲು ನಾ ಮುಂದು ತಾ ಮುಂದೆ ಎಂದು ಬರುತ್ತಾರೆ,

ಇನ್ನು ಎಂಟನೆ ತರಗತಿ ಯಿಂದ ಎಸ್.ಎಸ್.ಎಲ್.ಸಿ. ವರೆಗೆ ಮಾತ್ರ ಇರುವ ಈ ಶಾಲೆಯಲ್ಲಿ ಇದೀಗ ಬರೊಬ್ಬರಿ 750 ಕ್ಕೂ ಹೆಚ್ಚು ವಿಧ್ಯಾರ್ಥಿನೀಯರು ಕಲಿಯುತ್ತಿದ್ದಾರೆ, ಹನ್ನೊಂದು ಶಿಕ್ಷಕರನ್ನ ಒಳಗೊಂಡಿರುವ ಈ ಶಾಲೆಯಲ್ಲಿ ಕೊಠಡಿಗಳ ಸಂಖೆ ಕೂಡ ತುಂಬಾ ಕಡಿಮೆ ಇವೆ, ಹೀಗಿದ್ರು ಏಳನೆ ತರಗತಿ ಪಾಸದ ವಿಧ್ಯಾರ್ಥಿನಿಯರು ಎಂಟನೆ ತರಗತಿಗೆ ಪ್ರವೇಶ ಪಡೆಯಲು ಈ ಶಾಲೆಗೆ ಮುಗಿ ಬಿಳುತ್ತಾರೆ,ಕಾರಣ ಪ್ರತಿ ವರ್ಷದ ಎಸ್.ಎಸ್.ಎಲ್.ಸಿ, ಪರೀಕ್ಷಾ ಪಲಿತಾಂಶ ಬಂದಾಗ ಈ ಶಾಲೆಯದ್ದೇ ಮೇಲುಗೈ,ಪ್ರತಿ ವರ್ಷದ ಪಲಿತಾಂಶದಲ್ಲಿ ಶೇಖಡ 99 ರಷ್ಟು ವಿಧ್ಯಾರ್ಥಿನೀಯರು ಉತ್ತಮ ಅಂಕಗಳಿಸುವ ಮೂಲಕ ಪಾಸಾಗ್ತಾರೆ, ಇನ್ನು ಶಿಕ್ಷಣ ಅಷ್ಟೇ ಅಲ್ಲ, ಇಲ್ಲಿನ ಮಕ್ಕಳ ಉಡುಗೆ ತೊಡುಗೆ ನೋಡಿದ್ರೆ ಯಾವುದೋ ಖಾಸಗಿ ಶಾಲೆಗಳ ಮಕ್ಕಳನ್ನ ನೋಡಿದ ರೀತಿಯಲ್ಲಿ ಬಾಸವಾಗುತ್ತೆ, ಎಲ್ಲದಕ್ಕಿಂತ ಹೆಚ್ಚಾಗಿ ಹೆಣ್ಣು ಮಕ್ಕಳಿಗೆ ಬೇಕಾಗುವ ಸುರಕ್ಷತೆ, ಈ ಶಾಲೆಯ ಆವರಣಕ್ಕೆ ಯಾವುದೇ ವಿದ್ಯಾರ್ಥಿನಿ ಒಳ ಪ್ರವೇಶ ಪಡೆದ್ರೆ ಶಾಲೆಯ ತರಗತಿ ಮುಗಿಯುವ ವರೆಗೆ ಹೊರ ಹೋಗುವ ಹಾಗಿಲ್ಲ, ಇನ್ನು ಯಾವುದೇ ರೀತಿಯ ತೊಂದರೆ ಕೂಡ ಇಲ್ಲಿನ ಮಕ್ಕಳಿಗೆ ಕಾಣದ ರೀತಿಯಲ್ಲಿ ಶಿಕ್ಷಕರು ನೋಡಿಕೊಳ್ತಾರಂತೆ,ಒಟ್ಟಿನಲ್ಲಿ ಹೇಳೊದಾದ್ರೆ ಖಾಸಗಿ ಶಾಲೆಗಳನ್ನ ಮೀರಿಸುವ ಶಿಸ್ತು ಈ ಶಾಲೆಯಲ್ಲಿ ಕಾಣಸಿಗುತ್ತೆ,

ವರದಿ..ಸುಬಾನಿ ಪಿಂಜಾರ ವಿಜಯನಗರ.