You are currently viewing ಉಕ್ರೇನ್ ಹಾಗೂ ರಷ್ಯಾ ನಡುವಿನ ಸಂಘರ್ಷಕ್ಕೆ ಭಾರತೀಯ ವಿಧ್ಯಾರ್ಥಿ ಬಲಿ.

ಉಕ್ರೇನ್ ಹಾಗೂ ರಷ್ಯಾ ನಡುವಿನ ಸಂಘರ್ಷಕ್ಕೆ ಭಾರತೀಯ ವಿಧ್ಯಾರ್ಥಿ ಬಲಿ.

ಉಕ್ರೇನ್ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಯುದ್ದ ನಿಲ್ಲುವ ಲಕ್ಷಣಗಳು ಗೋಚರಿಸುತ್ತಿಲ್ಲ,  ಈ ಎರಡು ದೇಶಗಳ ಮದ್ಯ ನಡೆಯುತ್ತಿರುವ ಯುದ್ದದಲ್ಲಿ ಅದೆಷ್ಟೊ ಜನ ಜೀವ ಕಳೆದುಕೊಂಡಿದ್ದರೆ, ಅದೆಷ್ಟೊ ಕುಟುಂಭಗಳು ಮನೆ ಮಠ ಕಳೆದುಕೊಂಡು ಬೀದಿಗೆ ಬಂದಿವೆ.

ಮತ್ತೊಂದು ದುರಂತದ ವಿಚಾರ ಎಂದರೆ ವೈದ್ಯಕೀಯ ಶಿಕ್ಷಣಕ್ಕಾಗಿ ಉಕ್ರೇನ್ಗೆ ಹೋಗಿದ್ದ ನಮ್ಮ ದೇಶದ ವಿಧ್ಯಾರ್ಥಿ ಸಾವನ್ನಪ್ಪಿರುವ ವಿಷಯ ಬಹಿರಂಗವಾಗಿದೆ. ಬನಾರತ ಮತ್ತು ಉಕ್ರೇನ್ ರಾಯಭಾರಿ ಕಛೇರಿಯಿಂದ ಅಧಿಕೃತ ಮಾಹಿತಿ ಹೊರ ಬಿದ್ದಿದ್ದು, ಹಾವೇರಿ ಜಿಲ್ಲೆಯ ರಾಣೆಬೇನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್ ಮೃತಪಟ್ಟ ವಿಧ್ಯಾರ್ಥಿ ಆಗಿದ್ದಾನೆ.

ಮೃತ ನವೀನ್ ಕಾರ್ಕಿವ್‍ನಲ್ಲಿ ನಾಲ್ಕನೇ ವರ್ಷದ ಎಂ.ಬಿ.ಬಿ.ಎಸ್. ವ್ಯಾಸಂಗ ಮಾಡುತ್ತಿದ್ದು, ಇತ್ತೀಚೆಗೆ ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿದ ನಂತರ ಉಕ್ರೇನ್ ಬಂಕರ್ ನಲ್ಲಿ ರಕ್ಷಣಡ ಪಡೆದಿದ್ದರು. ಊಟ ತರಲೆಂದು ಅಲ್ಲಿಂದ ಹೊರ ಬರುತಿದ್ದಂತೆ ರಷ್ಯಾ ದಾಳಿಯ ಗುಂಡು ನವೀನ್ ಗೆ ತಗುಲಿ ಸಾವನ್ನಪ್ಪಿದ್ದಾರೆ ಎಂದು ವಿದೇಶಂಗ ಸಚಿವಾಲ ಮಾಹಿತಿ ನೀಡಿದೆ. ಇನ್ನು ಇತ್ತೀಚೆಗೆ ಭಾರತ ವಿಧೇಶಾಂಗ ಸಚಿವಾಲಯ ಉಕ್ರೇನ್ ನಲ್ಲಿರುವ ಭಾರತೀಯ ವಿಧ್ಯಾರ್ಥಿಗಳ ರಕ್ಷಣೆಗೆ ಸರಿಯಾದ ಪ್ರಯತ್ನ ನಡೆಸುತ್ತಿಲ್ಲ ಎನ್ನುವ ಆರೋಪಗಳು  ಕೇಳಿ ಬಂದಿದ್ದವು, ಅದರ ಬೆನ್ನಲ್ಲೇ ನವೀನ್ ಸಾವನ್ನಪ್ಪಿರುವುದು ಆ ಆರೋಪಕ್ಕೆ ಮತ್ತಷ್ಟು ಪುಷ್ಟಿ ನೀಡಿದಂತಿದೆ.ಇತ್ತ ಮೃತ ನವೀನ್ ಕುಟುಂಭಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಮೃತ ಕುಟುಂಭಕ್ಕೆ ಸಾಂತ್ವಾನ ಹೇಳಿದ ಮಾಜಿ.ಸಿ.ಎಂ.ಯಡಿಯೂರಪ್ಪ.