You are currently viewing ಸಚಿವರ ಮನೆಯ ಮುಂದೆಯೇ ಓಪನ್ ಬಾರ್. ಮದ್ಯಪ್ರಿಯರಿಗಿಲ್ಲ ಯಾವುದೇ ಹದ್ದು ಬಸ್ತು.

ಸಚಿವರ ಮನೆಯ ಮುಂದೆಯೇ ಓಪನ್ ಬಾರ್. ಮದ್ಯಪ್ರಿಯರಿಗಿಲ್ಲ ಯಾವುದೇ ಹದ್ದು ಬಸ್ತು.

ವಿಜಯನಗರ:..ಹೊಸಪೇಟೆ ವಿಜಯನಗರ ಜಿಲ್ಲಾ ಕೇಂದ್ರ ಆದಮೇಲೆ ಹೇಳಿಕೊಳ್ಳಲಾಗದ ಅದೆಷ್ಟೊ ಸಮಸ್ಯೆಗಳು ಸರಿಯಾಗಬಹುದೆಂದು ಇಲ್ಲಿನ ಜನ ಸಾಮಾನ್ಯರು ನಿರೀಕ್ಷೆ ಇಟ್ಟುಕೊಂಡಿದ್ದರು, ಆದರೆ ಜಿಲ್ಲಾ ಕೇಂದ್ರದಲ್ಲಿ ಕಂಡು ಬರುವ ಸದ್ಯದ ವಾಸ್ತವ ಸ್ಥಿತಿಯೇ ಬೇರೆ. ಅದರಲ್ಲಿ ಪ್ರಮುಖ ಸಮಸ್ಯೆಗಳೆಂದರೆ ಕುಡುಕರ ಹಾವಳಿ. ರಾತ್ರಿ ಆಗುತಿದ್ದಂತೆ ಕುಡಿದು ವಾಹನ ಚಲಾಯಿಸುವ ಕೆಲವರು ಮನ ಬಂದಂತೆ ರಸ್ತೆಯಲ್ಲಿ ವಾಹನ ಚಲಾಯಿಸಿ ಇಲ್ಲಿಗೆ ಬರುವ ಪ್ರವಾಸಿಗರಿಗೆ ಕಿರಿಕಿರಿ ಉಂಟುಮಾಡುತಿದ್ದಾರೆ.

ಕುಡಿದು ವಾಹನ ಚಲಾಯಿಸಿದ ತಪ್ಪು ಅವರದ್ದೇ ಇದ್ದರು ಗುಂಪು ಕಟ್ಟಿಕೊಂಡು ಪ್ರವಾಸಿಗರ ಮೇಲೆ ದೌರ್ಜನ್ಯ ನಡೆಸುವುದು ಇತ್ತೀಚೆಗೆ ಹೊಸಪೇಟೆ ನಗರದಲ್ಲಿ ಸರ್ವೇ ಸಾಮಾನ್ಯವಾಗಿದೆ. ಇನ್ನು ಇಂತಾ ಕುಡಿದು ವಾಹನ ಚಲಾಯಿಸುವವರ ಮೇಲೆ ದೂರು ದಾಖಲಿಸಲು ಇಲ್ಲಿಗೆ ಬರುವ ಪ್ರವಾಸಿಗರು ಮುಂದಾಗುವುದಿಲ್ಲ. ಎಲ್ಲಿಂದಲೊ ಒಂದೆರಡು ದಿನ ಪ್ರವಾಸಕ್ಕೆ ಬರುವ ಪ್ರವಾಸಿಗರು ಇಂತಾ ಕುಡುಕರ ವಿರುದ್ದ ಇಲ್ಲಿ‌ನ ಪೊಲೀಸ್ ಇಲಾಖೆ ಯಾಕೆ ಕ್ರಮ ಜರುಗಿಸಬಾರದೆಂದು ಹಿಡಿ ಶಾಪ ಹಾಕುತ್ತಲೇ ಹೊರಟು ಹೋಗುತಿದ್ದಾರೆ.

ಅದರಲ್ಲೂ ಇಂತಾ ಪರಿಸ್ಥಿತಿ ಹೆಚ್ಚಾಗಿ ಎದುರಾಗುವುದು ಹೊಸಪೇಟೆ ನಗರದ ಹೃದಯ ಬಾಗದಲ್ಲಿರುವ ಬಸ್ ನಿಲ್ದಾಣ ಮತ್ತು ಪುನಿತ್ ರಾಜಕುಮಾರ್ ವೃತ್ತದಲ್ಲಿ, ಹಾಗೂ ರೈಲ್ವೇ ನಿಲ್ದಾಣದ ರಸ್ತೆಯಲ್ಲಿ. ಹೌದು ಈ ಬಾಗದಲ್ಲಿ ರಾತ್ರಿ‌ ಹತ್ತರಿಂದ ಹನ್ನೆರಡು ಗಂಟೆಯ ಮದ್ಯದಲ್ಲಿ ನೀವು ವಾಹನ ಚಲಾಯಿಸಿಕೊಂಡು ಹೊರಟರೆ ಮದ್ಯಪ್ರಿಯರ ಕಿರಿಕಿರಿ ಮಾತ್ರ ತಪ್ಪಿದ್ದಲ್ಲ ಎಚ್ಚರ.
ಕುಡಿದು ಆಟೋ,ಕಾರ್,ಬೈಕ್ ಸೇರಿದಂತೆ ಇನ್ನಿತರ ವಾಹನ ಚಲಾಯಿಸಿಕೊಂಡು ಬರುವ ಮದ್ಯಪ್ರಿಯರು ಎದುರಿಗೆ ಬರುವ ವಾಹನಗಳಿಗೆ ತೊಂದರೆ ಕೊಡುತ್ತಲೇ ರಸ್ತೆಯಲ್ಲಿ ಸಂಚರಿಸುತ್ತಾರೆ. ಇನ್ನು ಇದನ್ನ ಪ್ರಶ್ನೆಮಾಡಲು ಮುಂದಾದರೆ, ಗುಂಪು ಕಟ್ಟಿಕೊಂಡು ಪ್ರವಾಸಿಗರ ಮೇಲೆಯೇ ಹಲ್ಲೆ ಮಾಡಲು ಸಹ ಮುಂದಾಗುತ್ತಾರೆ.
ಇದರಿಂದ ರೋಷಿ ಹೋಗಿರುವ ಜನ ಸಾಮಾನ್ಯರು ಹಿಡಿ ಶಾಪ ಹಾಕುತ್ತಲೇ ಹೊರಟು ಹೋಗುತ್ತಾರೆ,

ಇನ್ನು ಸಂಜೆ ಆದರೆ ಸಾಕು ನಗರದ ಸುತ್ತ  ಹರಿದಿರುವ ಹೆಚ್.ಎಲ್.ಸಿ. ಮತ್ತು ಎಲ್.ಎಲ್.ಸಿ. ಕಾಲುವೆ ದಡದ ಮೇಲೆ ಕುಡುಕರ ದಂಡೇ ಸೇರಿರುತ್ತದೆ. ಎಂ.ಎಸ್.ಐ.ಎಲ್‌. ಮದ್ಯದಂಗಡಿಯಿಂದ ಮದ್ಯ ಖರೀದಿಸುವ ಮದ್ಯಪ್ರಿಯರು, ನೇರವಾಗಿ ಅವರು ಕುಳಿತುಕೊಳ್ಳುವುದೇ ನಗರದ ಸುತ್ತ ಹರಿದುರುವ ತುಂಗಭದ್ರ ಹೆಚ್.ಎಲ್.ಸಿ. ಹಾಗೂ ಎಲ್.ಎಲ್.ಎಲ್.ಸಿ. ಕಾಲುವೆಯ ದಡದ ಮೇಲೆ. ಮದ್ಯ ರಾತ್ರಿ ಒಂದು ಗಂಟೆಯ ವರೆಗೆ ಕಾಲುವೆಯ ಮೇಲೆ ಕುಳಿತು ಕುಡಿಯುವ ಕುಡುಕರು ಮನೆಗೆ ಮರಳುವಾಗ ದಾರಿಯಲ್ಲಿ ಯಾವುದಾದರು ಅಮಾಯಕರ ವಾಹನ ಎದುರಾದರೆ ಅಪಘಾತ ಕಟ್ಟಿಟ್ಟ ಬುತ್ತಿ.

ಅದರಲ್ಲೂ ಇಂತಾ ಪರಿಸ್ಥಿತಿ ಹೆಚ್ಚಾಗಿ ಕಂಡು ಬರುವುದು ಪ್ರವಾಸೋಧ್ಯಮ ಸಚಿವರಾದ ಆನಂದ್ ಸಿಂಗ್ ಅವರ ಹೊಸ ಮನೆಯ ಮುಂಬಾಗದಲ್ಲಿ. ಪ್ರವಾಸೋಧ್ಯಮ ಸಚಿವರ ಮನೆಯ ಮುಂದಿನ ಪ್ರದೇಶವೇ ಪ್ರತಿ ದಿನ ರಾತ್ರಿ ಒಂದು ರೀತಿಯ ಓಪನ್ ಬಾರಂತೆ ಗೋಚರಿಸುತ್ತದೆ. ಇದೊಂದೇ ಬಾಗದಲ್ಲಿ ಸರಿ ಸುಮಾರು ನೂರರಿಂದ ನೂರೈವತ್ತು ಜನ ಮದ್ಯಪ್ರಿಯರು ಕುಡಿಯುತ್ತ ಕುಳಿತಿರುವ ದೃಷ್ಯಗಳು ಪ್ರತಿದಿನ ಇಲ್ಲಿ ಸರ್ವೇ ಸಾಮಾನ್ಯವಾಗಿ ಕಾಣುತ್ತದೆ. ಇನ್ನು ಸಚಿವರ ಮನೆಯ ಮುಂದಿನ ಈ ಪ್ರದೇಶವೇ ಹೀಗಿರುವಾಗ ಇನ್ನುಳಿದ ಪ್ರದೇಶಗಳ ಪರಿಸ್ಥಿತಿ ಹೇಗಿರುತ್ತೆ ಎಂದು ನೀವೆ ಕಲ್ಪಿಸಿಕೊಳ್ಳಿ.

ಸರ್ಕಾರ ಮದ್ಯ ಪ್ರಿಯರಿಗೆ ಅನುಕೂಲವಾಗಲೆಂದು ಎಂ.ಎಸ್.ಎಲ್.ಐ. ಅಂಗಡಿ ಪ್ರಾರಂಭಿಸಿ ನ್ಯಾಯ ಬೆಲೆಗೆ ಮದ್ಯ ಮಾರಾಟಮಾಡಿತೆ ಹೊರತು, ಅವರು ಕುಡಿಯಲು ಸೂಕ್ತ ಸ್ಥಳವನ್ನ ಮಾತ್ರ ನೀಡಲಿಲ್ಲ, ಅದರ ಪರಿಣಾಮ ನಗರದ ಹೊರ ವಲಯಗಳು ಓಪನ್ ಬಾರ್ ಗಳಾಗಿ ಬದಲಾಗುತ್ತಿವೆ. ಇನ್ನು ಹೀಗೆ ಕುಡಿತದಿಂದ ಬರುವ ತ್ಯಾಜ್ಯವೆಲ್ಲ ಮುಂದಿನ ತುಂಗಭದ್ರ ಕಾಲುವೆಗೆ ಹಾಕುವ ಕುಡುಕರು, ಪರಿಸರ ಮಾಲಿವನ್ನ ಕೂಡ ಮಾಡುತಿದ್ದಾರೆ. ಅದರ ಜೊತೆ ಕುಡಿದು ದಾರಿಯಲ್ಲಿ ವಾಹನ ಚಲಾಯಿಸುತ್ತ ಅಮಾಯಕ ಜನ ಸಾಮಾನ್ಯರ ನೆಮ್ಮದಿಯನ್ನ ಕೂಡ ಹಾಳುಮಾಡುತಿದ್ದಾರೆ, ಅದರ ಜೊತೆಗೆ ಎಲ್ಲದಕ್ಕಿಂತ ಹೆಚ್ವಾಗಿ ಹೊಸಪೇಟೆ ಮೂಲಕ ಹಾದು ಹಂಪಿ ಸೇರುವ ಪ್ರವಾಸಿಗರಿಗಂತೂ ಇವರ ಕಿರಿಕಿರಿ ಇದ್ದೇ ಇರುತ್ತೆ. ಇದೇ ರೀತಿಯ ಪರಿಸ್ಥಿತಿ ಮುಂದುವರೆದರೆ ಹೊಸಪೇಟೆ ನಗರ ಕಾಲಿ ಬಾಟಲಿ ಸಿಟಿಯಾಗಿ ಬದಲಾಗುವುದರಲ್ಲಿ ಸಂದೇಹವೇ ಇಲ್ಲ.

ಇನ್ನು ಪೊಲೀಸ್ ಇಲಾಖೆ ಬೆಂಗಳೂರು ಸೇರಿದಂತೆ ಇನ್ನುಳಿದ ಮಹಾನಗರಗಳಲ್ಲಿ ರಾತ್ರಿ ಸಂಚರಿಸುವ ವಾಹನ ಸವಾರರ ದಾಖಲೆ ಪರಿಸೀಲನೆ ನಡೆಸುವುದರ ಜೊತೆಗೆ ಚಾಲಕ ಮದ್ಯಸೇವನೆ ಮಾಡಿದ್ದಾರ ಅಥವಾ ಇಲ್ಲವಾ ಎಂದು ಖಚಿತಪಡಿಸಿಕೊಳ್ಳುತ್ತಾರೆ, ಒಂದು ವೇಳೆ ಚಾಲಕ ಮದ್ಯ ಸೇವನೆಮಾಡಿದ್ದರೆ ಅಂತವರಿಗೆ ದಂಡ ವಿಧಿಸುವುದರ ಜೊತೆಗೆ ಶಿಕ್ಷೆಗೆ ಸಹ ಗುರಿ ಪಡಿಸುವುದು ಕೂಡ ಕಾನೂನು. ಇಂತಾದ್ದೇ ಕ್ರಮ ಜರುಗಿಸಲು ಹೊಸಪೇಟೆ ನಗರದ ಪೊಲೀಸ್ ಇಲಾಖೆ ಕೂಡ ಮುಂದಾಗಬೇಕಿದೆ. ಒಂದು ವೇಳೆ ಹೀಗೆ ಮಾಡಿದ್ದೇ ಆದರೆ ಕುಡುಕರಿಂದ ತೊಂದರೆ ಎದುರಿಸುವ ಅಮಾಯಕ ಜನ ಸಾಮನ್ಯರಿಗೆ ನೆಮ್ಮದಿಯ ಬದುಕು ನೀಡಿದಂತಾಗುತ್ತದೆ ಪೊಲೀಸ್ ಇಲಾಖೆ.

ವರದಿ. ಸುಬಾನಿ ಪಿಂಜಾರ ಹಂಪಿ‌ ಮಿರರ್ ವಿಜಯನಗರ.