You are currently viewing ಗಣಿ ಭಾದಿತ ಪ್ರದೇಶದ ಈ ಜನಗಳ ಗೋಳು ಕೇಳುವವರು ಯಾರು. ಇವರ ಅಭಿವೃದ್ದಿಯ ನಿಧಿ ಯಾವುದಕ್ಕೆ ಬಳಕೆ ಆಗುತ್ತಿದೆ ಹೇಳಿ ಸಚಿವರೆ

ಗಣಿ ಭಾದಿತ ಪ್ರದೇಶದ ಈ ಜನಗಳ ಗೋಳು ಕೇಳುವವರು ಯಾರು. ಇವರ ಅಭಿವೃದ್ದಿಯ ನಿಧಿ ಯಾವುದಕ್ಕೆ ಬಳಕೆ ಆಗುತ್ತಿದೆ ಹೇಳಿ ಸಚಿವರೆ

ವಿಜಯನಗರ…. ವಿಜಯನಗರ,ಬಳ್ಳಾರಿ,ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿರುವ ಶಾಸಕರು, ಸಂಸದರು ಯಾವುದೇ ಪಕ್ಷದಿಂದ ಚುನಾಯಿತರಾಗಿರಲಿ, ತಮ್ಮ ತಮ್ಮ ಕ್ಷೇತ್ರಗಳ ಅಭಿವೃದ್ದಿಗೆ ಆಡಳಿತ ಪಕ್ಷದ ಅಂಗಾಲಾಚಬೇಕಿಲ್ಲ. ಯಾಕೆಂದ್ರೆ ಈ ಮೂರು ಜಿಲ್ಲೆಗಳ ಅಭಿವೃದ್ದಿಗೆ ಸಾವಿರಾರು ಕೋಟಿಯಷ್ಟು ಹಣ ಮೀಸಲಿದೆ. ಇಲ್ಲಿನ ಶಾಸಕ ಸಂಸದರು ಸರಿಯಾಗಿ ಹೋರಾಟ ನಡೆಸಿದ್ದೇ ಆದರೆ ತಮ್ಮನ್ನ ಆಯ್ಕೆಮಾಡಿದ ಕ್ಷೇತ್ರದ ಜನ ಸಾಮಾನ್ಯರ ಸಮಸ್ಯೆಗಳನ್ನ ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಸರಿದೂಗಿಸಬಹುದು,
ಅಷ್ಟೊಂದು ಹಣ ಈ ಮೂರು ಜಿಲ್ಲೆಗಳ ಅಭಿವೃದ್ದಿಗೆ ಸೀಮಿತವಾಗಿದೆ.

ಹೌದು ಕಳೆದ ಹಲವು ವರ್ಷಗಳಿಂದ ಈ ಬಾಗದಲ್ಲಿ ಗಣಿಗಾರಿಕೆ  ನಡೆಯುತಿದ್ದು,  ಗಣಿಗಾರಿಕೆಯಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ಆದಾಯ ಬರುತ್ತಿದೆ, ಹೀಗೆ ಬರುವ ಆದಾಯದ ಶೇಕಡ 10% ರಷ್ಟು ಭಾಗವನ್ನ ಇಲ್ಲಿನ ಗಣಿ ಭಾದಿತ ಪ್ರದೇಶಗಳ ಅಭಿವೃಧದಿಗಾಗಿಯೇ ಮೀಸಲಿರಸಲಾಗಿದೆ. ಪ್ರತಿ ದಿನ, ಪ್ರತಿ ತಿಂಗಳು, ಪ್ರತಿ ವರ್ಷ, ಆ ನಿಧಿ ಹೆಚ್ಚಾಗುತ್ತಲೇ ಇದೆ. ಆದರೆ ಆ ನಿಧಿ ಸರಿಯಾದ ಕಾರ್ಯಕ್ಕೆ ಬಳಕೆ ಆಗದೆ, ಗಣಿ ಬಾದಿತ ಪ್ರದೇಶದ ಜನ ಸಾಮಾನ್ಯರು ನರಕಯಾತನೆ ಅನುಭವಿಸುತ್ತಲೇ ಬದುಕು ಸಾಗಿಸಿದ್ದಾರೆ.

ಉದಾಹರಣೆಗೆ ಈ ಪ್ರದೇಶದಲ್ಲಿ ವಾಸಮಾಡುವ ನೂರಾರು ಕುಟುಂಭಗಳು ಪ್ರತಿ ದಿನ ಪ್ರತಿ ಕ್ಷಣ ಜೀವವನ್ನ ಕೈಯಲ್ಲಿ ಹಿಡಿದೇ ಬದುಕಬೇಕಿದೆ.
ಹೌದು ವಿಜಯನಗರ ವಿಧಾನಸಭೆ ಕ್ಷೇತ್ರದ ಶಾಸಕರು ಮತ್ತು ಪ್ರವಾಸೋಧ್ಯಮ ಸಚಿವರೂ ಆದ ಆನಂದ್ ಸಿಂಗ್ ಅವರ ಕ್ಷೇತ್ರದ ಮತದಾರರಾದ ಈ ಬಡಪಾಯಿಗಳು ಪಾಪಿನಾಯಕನಹಳ್ಳಿ ಗ್ರಾಮದ ಹೊರ ವಲಯದಲ್ಲಿರುವ ದಾಲ್ಮಿಯ ಕಾಲೋನಿಯ ನಿವಾಸಿಗಳು.ಸರಿ ಸುಮಾರು ಎರಡು ನೂರು ಕುಟುಂಭಗಳು ಕಳೆದ ಮೂರು ದಶಕಗಳಿಂದ ಇಲ್ಲಿಯೇ ವಾಸವಾಗಿವೆ.

ಕಾರಣ ಗಣಿಗಾರಿಕೆ ನಡೆಯುವ ಈ ಪ್ರದೇಶಕ್ಕೆ ಕೂಲಿ ಹರಸಿ ಬಂದ ಕುಟುಂಭಗಳು, ಇಲ್ಲೇ ನಲೆ ಕಂಡುಕೊಂಡು ದಿನೇ ದಿನೆ ನರಳಿ ನರಳಿ ಸಾಯುತ್ತಿವೆ. ಈ ಪ್ರದೇಶಕ್ಕೆ ಸರಿಯಾದ ರಸ್ತೆ ಮಾರ್ಗ ಇಲ್ಲ, ಮೂಲ ಸೌಕರ್ಯಗಳಂತೂ ಇಲ್ಲವೇ ಇಲ್ಲ, ಅದರ ಪರಿಣಾಮ ಅನಾರೋಗ್ಯ ಪೀಡಿತರು ಆಸ್ಪತ್ರೆ ಸೇರುವ ಮುಂಚೆಯೇ ಸ್ಮಶಾನ ಸೇರುತಿದ್ದಾರೆ. ಇನ್ನು ಗರ್ಭಿಣಿ ಮಹಿಳೆಯರು, ವಯೋ ವೃದ್ದರಿಗೆ ಅನಾರೋಗ್ಯ ಎದುರಾದರೆ ಸರಿಯಾದ ಸಮಯಕ್ಕೆ ಅವರಿಗೆ ಚಿಕಿತ್ಸೆ ಸಿಗುವುದೇ ಇಲ್ಲ, ಯಾಕೆಂದರೆ ಈ ಸ್ಥಳಕ್ಕೆ ಆ್ಯಂಬುಲೆನ್ಸ್ ಕೂಡ ಬರಲು ಮಾರ್ಗವೇ ಇಲ್ಲ. ಇನ್ನು ಖಾಸಗಿ ವಾಹನದ ಮೂಲಕವಾದರು ಆಸ್ಪತ್ರೆ ಸೇರೊಣ ಎಂದರೆ ಇಲ್ಲಿನ ರಸ್ತೆಗಳನ್ನ ಕಂಡ ಖಾಸಗಿ ವಾಹನಗಳ ಚಾಲಕರು ಇತ್ತ ತಲೆ ಕೂಡ ಹಾಕುವುದಿಲ್ಲ.

ಇನ್ನು ಈ ಜನಗಳು ಇಷ್ಟೆಲ್ಲ ಸಮಸ್ಯೆಗಳನ್ನ ಅನುಭವಿಸುವುದಕ್ಕೆ ಪ್ರಮುಖ ಕಾರಣ ಕಾಲೂನಿಯ ನಿವಾಸಿಗಳು ಮತ್ತು ಇಲ್ಲಿನ ರೈತರು ಈ ಹಿಂದೆ ಸಂಚಾರ ನಡೆಸುತಿದ್ದ ಇಲ್ಲಿನ ರೈಲ್ವೆ ಅಂಡರ್ ಪಾಸನ್ನ ಇಲ್ಲಿನ ರೈಲ್ವೇ ಇಲಾಖೆ ಮುಚ್ಚಿ ಹಾಕಿದೆ. ಅದರ ಪರಿಣಾಮ ರೋಗಿಯನ್ನ ಆಸ್ಪತ್ರೆಗೆ ಸಾಗಿಸುವುದು ಇರಲಿ, ಆಸ್ಪತ್ರೆಯಲ್ಲಿ ಸಾವನ್ನಪ್ಪಿದ  ಶವವನ್ನ  ಈ ಕಾಲೋನಿಗೆ ಸಾಗಿಸುವುದು ಕೂಡ ದುಸ್ಥರವಾಗಿದೆ, ಇನ್ನು ಈ ಮಾರ್ಗದ ಮೂಲಕವೇ ದಿನಂ ಪ್ರತಿ ರೈತರು ಶಾಲಾ ಮಕ್ಕಳು ವೃದ್ದರು, ಮಹಿಳೆಯರು ಸಂಚಾರ ನಡೆಸಿ ಪಟ್ಟಣ ಸೇರಬೇಕಾಗಿದೆ. ಆದ್ರೆ ಇಲ್ಲಿನ ಸಂಸದರು,ಶಾಸಕರು, ಸಚಿವರು ಈ ಕಾಲೋನಿಗೆ ಚುನಾವಣೆ ಸಂದರ್ಭದಲ್ಲಿ ಬೇಟಿ ನೀಡಿದ್ದನ್ನ ಬಿಟ್ಟರೆ ಇನ್ನುಳಿದ ಸಂದರ್ಭಗಳಲ್ಲಿ ಈ ಕಡೆ ತಿರುಗಿ ಕೂಡ ನೋಡಿಲ್ಲ. ಇವರ ಸಮಸ್ಯೆ ಸರಿಪಡಿಸುವ ಗೋಜಿಗಂತೂ ಹೋಗಿಯೇ ಇಲ್ಲ.ಅದರ ಪರಿಣಾಮ ಇಲ್ಲಿನ ನಿವಾಸಿಗಳು ಸಂಭಂದ ಪಟ್ಟ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಪ್ರತಿ ದಿನ ಪ್ರತಿ ಕ್ಷಣ ಹಿಡಿ ಶಾಪ ಹಾಕುತ್ತಲ್ಲೇ ಈ ರೈಲ್ವೇ ಹಳಿ ದಾಟುತ್ತಿದ್ದಾರೆ. ಒಂದುವೇಳೆ ನಗರ ಪ್ರದೇಶದಲ್ಲಿ ವಾಸಮಾಡುವ ಜನ ಸಾಮಾನ್ಯರು ಇಲ್ಲಿಗೆ‌ ಬೇಟಿ‌ ನೀಡಿದರೆ ಒಂದೇ ಒಂದು ಕ್ಷಣ ಈ ಬಾಗದಲ್ಲಿ ನಿಲ್ಲುವುದಿಲ್ಲ. ಅಷ್ಟೊಂದು ಗಣಿ ಧೂಳು, ಈ ಬಾಗದಲ್ಲಿದೆ. ಹಾಗಾಗಿ ಇಲ್ಲಿನ ವೃದ್ದರು ಮಹಿಳೆಯರು,ಮಕ್ಕಳು ನೇರವಾಗಿ ಸಿ.ಎಂ.ಬಸವರಾಜ ಬೊಮ್ಮಾಯಿ ಅವರಿಗೆ ಮನವಿಮಾಡಿಕೊಂಡು ಈ ರೈಲ್ವೆ ಅಂಡರ್ ಪಾಸ್ ನಿರ್ಮಾಣಮಾಡುವ ಮೂಲಕ ತಮ್ಮ ಊರಿಗೆ ಸರಿಯಾದ ರಸ್ತೆ ನಿರ್ಮಾಣ ಮಾಡಿಕೊಡಲು ಮನವಿಮಾಡಿಕೊಂಡಿದ್ದಾರೆ. ಅದರ ಜೊತೆಗೆ ಇನ್ನಿತರ ಮೂಲ ಸೌಕರ್ಯಗಳನ್ನ ಕೊಟ್ಟು ಪುಣ್ಯಕಟ್ಟಿಕೊಳ್ಳ ಎಂದು ಗೋಗರೆದಿದ್ದಾರೆ.

ಇನ್ನು ಇತ್ತೀಚೆಗೆ.ಡಿ.ಎಂ.ಎಪ್. ಫಂಡ್ ನಿಂದ ಸಾಕಷ್ಟು ಕಡೆಗಳಲ್ಲಿ ನೂರಾರು ಕೋಟಿಗಳ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ಆಸ್ಪತ್ರೆ,ಶಾಲಾ ಕಾಲೇಜು, ರಸ್ತೆ ಕಾಮಗಾರಿ, ಕುಡಿಯುವ ನೀರು ಸರಬರಾಜಿಗೆ ಇದೇ ಡಿ.ಎಮ್.ಎಪ್. ಫಂಡನ್ನ ಬಳಕೆ ಮಾಡಿಕೊಂಡು ನಗರ ಪ್ರದೇಶಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನ ನಡೆಸಲಾಗುತ್ತಿದೆ. ಆದರೆ ಆ ಹಣ ನಿಜವಾಗಿಯೂ ಬಳಕೆ ಆಗಬೇಕಾಗಿರುವುದು ಮೊದಲಿಗೆ ಇಂತಾ ಜನಗಳಿಗೆ, ಆ ನಂತರ ಇನ್ನುಳಿದ ಪ್ರದೇಶದ ಜನಗಳಿಗೆ. ಆದರೆ ಇಲ್ಲಿ ನಡೆಯುತ್ತಿರುವುದೇ ಬೇರೆ. ಹೀಗೆ ಮುಂದುವರೆದರೆ ಸಂಕಷ್ಟದಲ್ಲಿರುವ ಜನ ಸಾಮಾನ್ಯರು ಬದುಕಟ್ಟಿಕೊಳ್ಳುವುದು ಹೇಗೆ ಹೇಳಿ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರೆ.

ವೀಡಿಯೊ ನೋಡಲು ಈ ಕೆಳಗಿನ ಲಿಂಕ್ ಒತ್ತಿರಿ.

https://youtu.be/AKxOqYy1fSY

ವರದಿ..ಸುಬಾನಿ ಪಿಂಜಾರ ಹಂಪಿ‌ಮಿರರ್ ವಿಜಯನಗರ.