You are currently viewing ಕದ್ದು ಮುಚ್ಚಿ ನಡೆಯಿತು ಮುಜರಾಯಿ ಖಾತೆ ಸಚಿವರ ಪುತ್ರಿಯ ಕಲ್ಯಾಣ.

ಕದ್ದು ಮುಚ್ಚಿ ನಡೆಯಿತು ಮುಜರಾಯಿ ಖಾತೆ ಸಚಿವರ ಪುತ್ರಿಯ ಕಲ್ಯಾಣ.

ವಿಜಯನಗರ…ಹೌದು ತಮಿಳುನಾಡಿನ ಮುಜರಾಯಿ ಖಾತೆ ಸಚಿವ ಶೇಖರಬಾಬು ಅವರ ಪುತ್ರಿ ಜಯಕಲ್ಯಾಣಿಯ ಮುದುವೆ ವಿಜಯನಗರ ಜಿಲ್ಲೆಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಹೂವಿನ ಹಡಗಲಿ ತಾಲೂಕಿನ ಹಿರೇಹಡಗಲಿ ಗ್ರಾಮದ ಹಾಲಸ್ವಾಮಿ ಮಠದಲ್ಲಿ ಕಳೆದ ಬಾನುವಾರ ಸರಳ ವಿವಾಹ ಸಮಾರಂಭ ನಡೆದಿದ್ದು, ಹಿರೇಹಡಗಲಿಯ ಹಾಲಸ್ವಾಮಿ ಮಠದ ಅಭಿನವ ಹಾಲವೀರಪ್ಪಜ್ಜ ಅವರ ನೇತೃತ್ವದಲ್ಲಿ ನವ ವದು ವರರು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

ಅಂದಹಾಗೆ ತಮಿಳುನಾಡಿನ ಮುಜರಾಯಿ ಖಾತೆ ಸಚಿವ ಶೇಖರಬಾಬು ಅವರ ಪುತ್ರಿ ಜಯಕಲ್ಯಾಣಿ ಮತ್ತು ಚನ್ನೈನ ಉದ್ಯಮಿ ಸತೀಶಕುಮಾರ್ ನಡುವೆ ಕಳೆದ ನಾಲ್ಕು ವರ್ಷಗಳಿಂದ ಪ್ರೇಮಾಂಕುರವಾಗಿದ್ದು, ಪೊಷಕರು ಇದಕ್ಕೆ ಒಪ್ಪದ ಹಿನ್ನೆಲೆಯಲ್ಲಿ ಹಿರೇಹಡಗಲಿ ಮಠಕ್ಕೆ ಹಾರಿ ಬಂದ ಜೋಡಿ ಹಕ್ಕಿಗಳು ಹೊಸ ಬದುಕಿಗೆ ಶ್ರೀಗಳ ಸಮ್ಮುಖದಲ್ಲಿ ಕಾಲಿಟ್ಟಿದ್ದಾರೆ.

ನಮ್ಮ ತಂದೆ ಶೇಖರಬಾಬು ಅವರು ಅನ್ಯ ಧರ್ಮದ ಯುವಕನೊಂದಿಗೆ ವಿವಾಹಮಾಡಲು ತೀರ್ಮಾನಿಸಿದ್ದರು, ಮದುವೆಗೆ ಮುನ್ನ ಮಂತಾಂತರ ಆಗಲು ಸಹ ನನಗೆ ಒತ್ತಡ ಹೇರಲಾಗಿತ್ತು, ಆದರೆ ನನಗೆ ಹಿಂದೂ ಧರ್ಮವನ್ನ ಬಿಟ್ಟು ಬೇರೆ ಧರ್ಮಕ್ಕೆ ಮತಾಂತರವಾಗಲು ಇಷ್ಟವಿರಲಿಲ್ಲ, ಅದಲ್ಲದೆ ನಾನು ಕಳೆದ ನಾಲ್ಕು ವರ್ಷಗಳಿಂದ ಬೇರೊಬ್ಬ ಯುಕನನ್ನ ಪ್ರೀತಿಸುತಿದ್ದೇನೆ, ಇದಕ್ಕೆ ನನ್ನ ತಂದೆ ಒಪ್ಪದ ಹಿನ್ನೆಲೆಯಲ್ಲಿ ನಿಮ್ಮ ಬಳಿ ಬಂದು ಸಹಾಯ ಕೇಳುತಿದ್ದೇನೆ ಎಂದು ಹಿರೇಹಡಗಲಿ ಹಾಲಸ್ವಾಮಿ ಮಠದ ಅಭಿನವ ಹಾಲಸ್ವಾಮಿಯ ಬಳಿ ಜಯಕಲ್ಯಾಣಿ ತಮ್ಮ ಅಳಲನ್ನ ತೋಡಿಕೊಂಡಿದ್ದರಂತೆ.

ಈ ಹಿನ್ನೆಲೆಯಲ್ಲಿ ಪೂರ್ವಪರ ವಿಚಾರಿಸಿದ ಅಭಿನವ ಹಾಲಸ್ವಾಮಿಗಳು ಪ್ರೇಮಿಗಳ ವಿವಾಹವನ್ನ ತಮ್ಮ ಮಠದಲ್ಲಿ ನೆರವೇರಿಸಿದ್ದಾರೆ.
ವಿವಾಹದ ಬಳಿಕ ನೇರವಾಗಿ ಬೆಂಗಳೂರಿಗೆ ತೆರಳಿದ ಜೋಡಿಗಳು ಪೋಲಿಸ್ ಆಯುಕ್ತರನ್ನ ಬೇಟಿಮಾಡಿ ರಕ್ಷಣೆ ಕೋರಿದ್ದಾರಂತೆ. ತಮ್ಮ ತಂದೆಯಿಂದ ನಮ್ಮಿಬ್ಬರಿಗೆ ಜೀವ ಬೆದರಿಕೆ ಇದೆ ಎಂದು ಕಾನೂನಿನ ನೆರವು ಪಡೆದಿದೆ ಈ ಜೋಡಿ ಹಕ್ಕಿಗಳು.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.