ವಿಜಯನಗರ.. ಕಳೆದ ತಿಂಗಳು31ನೆ ತಾರೀಕಿನಂದು ಹೊಸಪೇಟೆ ನಗರದ ಮ್ಯಾಸಕೇರಿ ಪ್ರದೇಶದಲ್ಲಿ ಗಾಂಜಾ ಮಾರಾಟದಲ್ಲಿ ತೊಡಗಿಕೊಂಡಿದ್ದ ಇಬ್ಬರು ಮಹಿಳೆಯರನ್ನ ಬಂದಿಸುವಲ್ಲಿ ಹೊಸಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
1)ಶ್ರೀಮತಿ ಹೇಮಲತ ಗಂಡ ಮಹಾದೇವಪ್ಪ 42ವರ್ಷ ವಯಸ್ಸು ಮ್ಯಾಸಕೇರಿ ನಿವಾಸಿ.
2)ಶ್ರೀಮತಿ ಕಲಾವತಿ ಗಂಡ ಶಿವಪ್ರಸಾದ್ 36ವರ್ಷ ಡಾಣಾಪುರ ನಿವಾಸಿ.
ಈ ಇಬ್ಬರು ಮಹಿಳೆಯರು ಬಂದಿತರಾಗಿದ್ದು, ಬಂದಿತರಿಂದ 2 ಕೆಜಿ 150 ಗ್ರಾಂ ಗಾಂಜಾವನ್ನ ವಶಕ್ಕೆ ಪಡೆದಿದ್ದಾರೆ.
31/07/2022 ರಂದು ಹೊಸಪೇಟೆ ನಗರದ ಮ್ಯಾಸಕೇರಿಯ ಪ್ರದೇಶದಲ್ಲಿ ಈ ಇಬ್ಬರು ಮಹಿಳೆಯರು ಗಾಂಜಾ ಮಾರಾಟ ಮಾಡುತಿದ್ದರು, ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿದ ಪೊಲೀಸರು, ಡಿ.ವೈ.ಎಸ್ಪಿ. ವಿಶ್ವನಾಥ ಕುಲಕರ್ಣಿ ಮಾರ್ಗದರ್ಶನದಲ್ಲಿ ಪಿ.ಐ.ಜಯಪ್ರಕಾಶ್ ಮತ್ತು ಎ.ಎಸ್.ಐ ರಾಜಶೇಖರ,ಮಲ್ಲೇಶ್, ಸಿಬ್ಬಂದಿಗಳಾದ ನಾಗರಾಜ್, ರಾಘವೇಂದ್ರ, ಶ್ರೀನಿವಾಸ್,ಲಿಂಗರಾಜು, ಶ್ರೀಮತಿ ಉಮಾ, ಶ್ರೀಮತಿ ದುರ್ಗಿಬಾಯಿ ಒಳಗೊಂಡ ತನಿಖಾ ತಂಡ ದಾಳಿ ನಡೆಸಿ ಮಹಿಳೆಯರನ್ನ ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂಭಂದ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಬಂದಿತ ಮಹಿಳೆಯರನ್ನ ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿದೆ. ಇನ್ನು ತಮ್ಮ ಸಿಬ್ಬಂದಿಗಳ ಕಾರ್ಯ ವೈಖರಿ ಮೆಚ್ಚಿ ವಿಜಯನಗರ ಎಸ್ಪಿ ಅರುಣ್ ಕುಮಾರ್ ಕೆ. ಶ್ಲಾಘಿಸಿದ್ದಾರೆ.
ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.