You are currently viewing ಕಳೆದ 15 ದಿನಗಳಿಂದ  ಅನಾರೋಗ್ಯದಲ್ಲಿ ಬಳಲುತ್ತಿದೆ 108 ಅಂಬುಲೆನ್ಸ್.

ಕಳೆದ 15 ದಿನಗಳಿಂದ  ಅನಾರೋಗ್ಯದಲ್ಲಿ ಬಳಲುತ್ತಿದೆ 108 ಅಂಬುಲೆನ್ಸ್.

ವಿಜಯನಗರ… ರಸ್ತೆ ಅಪಘಾತ ಅಥವಾ ಇನ್ನಾವುದೇ ತುರ್ತಾಗಿ ಚಿಕಿತ್ಸೆ ಬೇಕೆಂದರೆ ಸಹಜವಾಗಿ ನಾವು ಸಡನ್ ಆಗಿ ಪೊನ್ ಕಾಲ್ ಮಾಡುವುದು 108 ನಂಬರಿಗೆ, ಹೀಗೆ ಕಾಲ್ ಮಾಡಿದ ತಕ್ಷಣ ಘಟನಾ ಸ್ಥಳಕ್ಕೆ 108 ಅಂಬುಲೆನ್ಸ್ ಬಂದು ಆಪತ್ತಿನಲ್ಲಿರುವ ಗಾಯಾಳು ಅಥವಾ ರೋಗಿಗಳನ್ನ ಸರಿಯಾದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಮೂಲಕ ಅಂತವರ ಪ್ರಾಣ ಕಾಪಾಡುವ ಕೆಲಸ ಮಾಡುತ್ತೆ 108 ಅಂಬುಲೆನ್ಸ್, ಆದರೆ ಇಂತಾ ಜನೋಪಯೊಗಿ ಕೆಲಸಮಾಡುವ ಹೊಸಪೇಟೆ ನಗರದ 108 ಅಂಬುಲೆನ್ಸ್ ಕಳೆದ ಹದಿನೈದು ದಿನಗಳಿಂದೆ ಅನಾರೋಗ್ಯಕ್ಕೆ ಒಳಗಾಗಿ ನಗರದ ಸಂಡೂರು ರಸ್ತೆಯಲ್ಲಿ  ಅನಾಥವಾಗಿ ನಿಂತಿದೆ.

ಇಂಜಿನ್ ಪ್ರಾಬ್ಲಮ್ ಇರುವ ಈ ಅಂಬುಲೆನ್ಸ್  ಅದೆಷ್ಟು ಜನಗಳ‌ ಜೀವ ಬದುಕಿಸಿದೆಯೋ ಏನು, ಇದೀಗ ಅನಾಥವಾಗಿ ನಿಂತಿರುವುದನ್ನ ನೋಡಿದರೆ ಈಗಿನ ಆರೋಗ್ಯ ಇಲಾಖೆಯ ಪರಿಸ್ಥಿತಿ ಎಲ್ಲರಿಗೂ ಗೊತ್ತಾಗುತ್ತೆ. ಈ ಮಬುಲೆನ್ಸ್  ಕೆಟ್ಟು ನಿಂತಿರುವುದರಿಂದ ಬಡ ರೋಗಿಗಳಿಗೆ ಮತ್ತು ಅಪಘಾತಕ್ಕೆ ಒಳಗಾದ ಗಾಯಾಳುಗಳಿಗೆ ತುರ್ತಾಗಿ ಚಿಕಿತ್ಸೆ ಸಿಗದೆ ಜೀವ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಹೊಸಪೇಟೆ ನಗರದ ಸುತ್ತ ಮುತ್ತಲಿನ ಬಡ ಜನಕ್ಕೆ ಎದುರಾಗಿದೆ. ಇನ್ನು ಹೊಸಪೇಟೆ ತಾಲೂಕಿನಲ್ಲಿ ಮೂರು 108 ಅಂಬುಲೆನ್ಸ್ ಗಳಿದ್ದು, ಒಂದು‌ ಕಮಲಾಪುರ, ಮತ್ತೊಂದು ಮರಿಯಮ್ಮನಹಳ್ಳಿ,ಇದೀಗ ಅನಾರೋಗ್ಯದಿಂದ ಬಳಲುತ್ತಿರುವ ಹೊಸಪೇಟೆಗೆ ಸೇರಿದ ಅಂಬುಲೆನ್ಸ್. ಹೊಸಪೇಟೆ ನಗರದಲ್ಲಿರುವ ಈ ಅಂಬುಲೆನ್ಸ್ ಪರಿಸ್ಥಿರಿ ಹೀಗಿರುವುದರಿಂದ ಮರಿಯಮ್ಮನಹಳ್ಲಿ, ಅಥವಾ ಕಮಲಾಪುರ ಅಂಬುಲೆನ್ಸ್ ಗಳು ಹೊಸಪೇಟೆ ನಗರಕ್ಕೆ ಬಂದು ತುರ್ತು ಸೇವೆ ನೀಡಬೇಕು ಇಲ್ಲವಾದರೆ ರಸ್ತೆಯಲ್ಲಿ ಗಾಯವಾದವರು ಹೆಣವಾಗುವುದು ಪಕ್ಕಾ.

ಇನ್ನು ಪರಿಸ್ಥಿತಿ ಹೀಗಿರುವಾಗ  ಮರಿಯಮ್ಮನಹಳ್ಳಿ ಅಂಬುಲೆನ್ಸ್ ಹೆಚ್ಚು ಕಡಿಮೆ ವೇಗವಾಗಿ ಓಡಿಸುವ ಹಾಗಿಲ್ಲವಂತೆ ಅದರ ಟೈರ್ ಗಳು ಕೂಡ ಬಾಂಡ್ಲಿಗಳಂತೆ  ಹೊಳೆಯುತ್ತವಂತೆ, ಅಂದರೆ ಟೈರ್  ಸವೆದು ಸವೆದು ಹೋಗಿದ್ದು ಎಲ್ಲಿ ಪಂಕ್ಚರ್ ಆಗುತ್ತೊ ಎನ್ನುವ ಭಯ ಈ ಅಂಬುಲೆನ್ಸ್ ಚಲಾಯಿಸುವ ಚಾಲಕರಿಗೆ. ಇನ್ನು ಈ ಅಂಬುಲೆನ್ಸ್ ನಿರ್ವಹಣೆಮಾಡಬೇಕಾಗಿರುವ ಜಿ.ವಿ.ಕೆ. ಪೌಂಡೇಷನ್ ಬೇಕಾದ ಸೌಲಭ್ಯಗಳನ್ನ ನೀಡದೆ ನಡೆದುಕೊಳ್ಳುತಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಿದೆ. ಇನ್ನು ಈ ಪರಿಸ್ಥಿತಿಯನ್ನ ಕಂಡೂ ಕಾಣದಂತೆ ಕುಳಿತಿದ್ದಾರಂತೆ ಇಲ್ಲಿನ ಡಿ.ಹೆಚ್.ಒ. ಮತ್ತು ಟಿ.ಹೆಚ್. ಒ. ಸರಿಪಡಿಸಬೇಕಾದ ಸಂಭಂದ ಪಟ್ಟ ಅಧಿಮಾರಿಗಳೇ ಹೀಗೆ ಕಣ್ಣುಮುಚ್ಚಿ ಕುಳಿತರೆ ಜನ ಸಾಮಾನ್ಯರ ಪರಿಸ್ಥಿತಿ ಏನು, ಸಾಲದಕ್ಕೆ ನಾವು ಬಡ ಜನರಿಗೆ ಉಚಿತ ಆರೋಗ್ಯ ಸೇವೆ ಕೊಡುತ್ತೇವೆ ಎನ್ನುವ ಅಪ ಪ್ರಚಾರ ಬೇರೆ.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.