You are currently viewing ಹೊಸಪೇಟೆ ಪಟ್ಟಣ ಪೊಲೀಸರ ಕಾರ್ಯಾಚರಣೆ, ಇಬ್ಬರು ಮೊಬೈಲ್ ಕಳ್ಳರ ಬಂದನ.

ಹೊಸಪೇಟೆ ಪಟ್ಟಣ ಪೊಲೀಸರ ಕಾರ್ಯಾಚರಣೆ, ಇಬ್ಬರು ಮೊಬೈಲ್ ಕಳ್ಳರ ಬಂದನ.

ವಿಜಯನಗರ… ಹೊಸಪೇಟೆ ಬಸ್ ನಿಲ್ದಾಣದಲ್ಲಿ ಬಸ್ಸ್ ಹತ್ತುವ ಪ್ರಯಾಣಿಕರೇ ಈ ಇಬ್ಬರು ಮೊಬೈಲ್ ಕಳ್ಳರ ಟಾರ್ಗೇಟ್, ಗುಂಪು ಗುಂಪಾಗಿ ಬಸ್ಸ್ ಹತ್ತುವ ಪ್ರಯಾಣಿಕರ ಜೇಬಲ್ಲಿರುವ ಮೊಬೈಲ್ ಗಳನ್ನ ಕಣ್ಣುಮುಚ್ಚಿ ಬಿಡುವಷ್ಟರಲ್ಲೇ ಕದ್ದು ಪರಾರಿಯಾಗುವ ಈ ಕಳ್ಳರು ಕದ್ದ ಮೊಬೈಲ್ ಗಳನ್ನ ಮಾರಾಟಮಾಡಿ ಮಜಾ ಉಡಾಯಿಸುತಿದ್ದರು. ಹೀಗೆ ಕದ್ದ ಮಾಲನ್ನ ಇಂದು ಜೆ.ಪಿ. ನಗರದಲ್ಲಿ ಮಾರಾಟಮಾಡಲು ಹೋಗಿ ಹೊಸಪೇಟೆ ಪಟ್ಟಣ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ಕಳ್ಳರನ್ನ ವಶಕ್ಕೆಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಬರೋಬ್ಬರಿ ಒಂದು ಲಕ್ಷ 68ಸಾವಿರ ಮೌಲ್ಯದ 13 ಮೊಬೈಲ್ ಗಳನ್ನ ವಶಕ್ಕೆ ಸಿಕ್ಕಿವೆ. 

1)ಯಶವಂತ್ ಅಲಿಯಾಸ್ ಪಿಂಕಿ ತಂದೆ ಬಿ.ಮಂಜುನಾಥ 20ವರ್ಷ ಬಾಣದಕೇರಿ ಹೊಸಪೇಟೆ.
2)ಮಂಜುನಾಥ ಅಲಿಯಾಸ್ ಕೊಳಕು ಮಂಜ 19ವರ್ಷ ತಂದೆ ಮಲ್ಲಿಕಾರ್ಜುನ ಗುರುಭವನ ಹಿಂಬಾಗದ ಜನತಾ ಪ್ಲಾಟ್, ಹೊಸಪೇಟೆ. ಬಂದಿತ ಆರೋಪಿಗಳಾಗಿದ್ದಾರೆ.

ಕಳೆದ ಹಲವು ದಿನಗಳಿಂದ ಕಳ್ಳತನಮಾಡಿದ್ದ ಮೊಬೈಲನ್ನ ಇಂದು ಜೆ.ಪಿ. ನಗರದ ಪಾರ್ಕ್ ಬಳಿಯಲ್ಲಿ ಮಾರಾಟಮಾಡುತ್ತಿದ್ದ ಮಾಹಿತಿ ತಿಳಿದ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯ ಅಪರಾದ ವಿಭಾಗದ ಎ.ಎಸ್.ಐ. ಕೋದಂಡಪಾಣಿ, ಮತ್ತು ಸಿಬ್ಬಂದಿಗಳಾದ ನಾಗರಾಜ್, ಬಿ.ರಾಘವೇಂದ್ರ, ಸಂಜೀವಪ್ಪ, ಶ್ರೀರಾಮರೆಡ್ಡಿ,ಪರಶುರಾಮನಾಯ್ಕ್, ಲಿಂಗರಾಜ್, ಪಕ್ಕೀರಪ್ಪ, ಗುರುಬಸವರಾಜ್, ದೇವೇಂದ್ರ, ತನಿಖಾ ತಂಡದಲ್ಲಿದ್ದರು.ಹೊಸಪೇಟೆ ಡಿವೈಎಸ್ಪಿ ವಿಶ್ವನಾಥ ಕುಲಕರ್ಣಿ ಮತ್ತು, ಪಟ್ಟಣ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಶ್ರೀನಿವಾಸ್ ರಾವ್, ನೇತೃತ್ವದಲ್ಲಿ ನಡೆದ ಈ ತನಿಖಾ ತಂಡಕ್ಕೆ ವಿಜಯನಗರ ಎಸ್ಪಿ ಡಾಕ್ಟರ್ ಅರುಣ್ ಕುಮಾರ್ ಕೆ. ಪ್ರಸಂಶೆ ವ್ಯಕ್ತಪಡಿಸಿದ್ದಾರೆ.

ವರದಿ.ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.