You are currently viewing ತವರು ಮನೆಯಿಂದ ತಂಗಿಯನ್ನ ಹೊರ ಹಾಕಿದರ ಆನಂದ್ ಅಣ್ಣ..?ಚುನಾವಣಾ ಹೊಸ್ತಿಲಲ್ಲಿ ಏನಿದು ಹುನ್ನಾರ.?

ತವರು ಮನೆಯಿಂದ ತಂಗಿಯನ್ನ ಹೊರ ಹಾಕಿದರ ಆನಂದ್ ಅಣ್ಣ..?ಚುನಾವಣಾ ಹೊಸ್ತಿಲಲ್ಲಿ ಏನಿದು ಹುನ್ನಾರ.?

ವಿಜಯನಗರ.. ಹೌದು ಬೆಳಗಾವಿ ಜಿಲ್ಲೆ ನನಗೆ ಗಂಡನ ಮನೆ ಆದ್ರೆ ವಿಜಯನಗರ ಜಿಲ್ಲೆ ನನಗೆ ತವರು ಮನೆ ಇದ್ದಹಾಗೆ ಎಂದಿದ್ರು ಸಚಿವೆ ಶಶಿಕಲಾ ಜೊಲ್ಲೆ ಅವರು, ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ನಡೆದ ಪುರಂದರ ದಾಸರ ಆರಾಧನೋತ್ಸವದಲ್ಲಿ ಮಾತನಾಡಿದ್ದ ಜೊಲ್ಲೆ ಅವರು, ಇಲ್ಲಿನ ಸಚಿವ ಆನಂದ್ ಸಿಂಗ್ ಅವರು ನನಗೆ ಅಣ್ಣನ ಸಮಾನರು, ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವೆ ಆಗಿ ಬಂದಿರುವ ನನಗೆ ತವರು ಮನೆಯಲ್ಲಿ ಕೊಡುವ ರೀತಿಯಲ್ಲೇ ಭವ್ಯ ಸ್ವಾಗತ ಸಿಕ್ಕಿದೆ, ಅದೇರೀತಿ ಜಿಲ್ಲೆಯಲ್ಲಿ ಆಡಳಿತ ನಡೆಸಲು ಎಲ್ಲಾ ರೀತಿಯ ಸಹಕಾರ ನೀಡುತ್ತಾರೆ ಎಂದು ಅಣ್ಣ ಆನಂದ್ ಸಿಂಗ್ ಅವರನ್ನ ಹಾಡಿ ಹೊಗಳಿದ್ದರು.

ಸಚಿವೆ ಶಶಿಕಲಾ ಜೊಲ್ಲೆ ಅವರು ಪುರಂದರ ದಾಸರ ಆರಾಧನ ಉತ್ಸವದಲ್ಲಿ ಆಡಿದ ಮಾತುಗಳು ಇನ್ನೂ ಜನ ಮಾನಸದಿಂದ ದೂರ ಹೋಗಿಲ್ಲ. ಹೀಗಿರುವಾಗಲೆ ಶಶಿಕಲಾ ಜೊಲ್ಲೆ ದಿಡೀರ್ ಕೊಪ್ಪಳ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವೆ ಆಗಿ ವರ್ಗಾವಣೆಗೊಂಡಿದ್ದಾರೆ.ಹೌದು  ಕಳೆದ ಹತ್ತು ತಿಂಗಳ ಹಿಂದೆಯಷ್ಟೇ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಚಿವ ಆನಂದ್ ಸಿಂಗ್ ಅವರನ್ನ ಕೊಪ್ಪಳ ಜಿಲ್ಲೆಗೆ ವರ್ಗಾಯಿಸಿ, ಶಶಿಕಲಾ ಅಣ್ಣಾ ಸಾಹೇಬ ಜೊಲ್ಲೆ ಅವರನ್ನ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.

ಆದರೆ ಇದೀಗ ಪುನ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಆನಂದ್ ಸಿಂಗ್ ಅವರನ್ನ ಮರು ನೇಮಕಮಾಡಿ, ಶಶಿಕಲಾ ಜೊಲ್ಲೆ ಅವರನ್ನ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವೆಯನ್ನಾಗಿ ವರ್ಗಾವಣೆಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಸಂಭಂದ ಇಂದು   ರಾಜ್ಯ ಸರ್ಕಾರದ ಅದೀನ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ. ಈ ಮೂಲಕ ಚುನಾವಣ ಹೊಸ್ತಿಲಲ್ಲಿ ತಾನೆಷ್ಟು ಪ್ರಭಲ ಎಂದು ಆನಂದ್ ಸಿಂಗ್ ತೋರಿಸಿಕೊಂಡಿದ್ದಾರೆ. ಸಚಿವ ಆನಂದ್ ಸಿಂಗ್ ಅವರು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕವಾಗುತಿದ್ದಂತೆ ಅವರ ಬೆಂಬಲಿಗರು ಹೊಸಪೇಟೆ ನಗರದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆಮಾಡುತಿದ್ದಾರೆ.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.