You are currently viewing ಗ್ರಾಮ ಪಂಚಾಯ್ತಿ ಮುಂದೆ ಮೃತ ರೈತನ ಶವ ಇಟ್ಟು ಪ್ರತಿಭಟನೆಗೆ ಮುಂದಾದ ಗ್ರಾಮಸ್ಥರು.

ಗ್ರಾಮ ಪಂಚಾಯ್ತಿ ಮುಂದೆ ಮೃತ ರೈತನ ಶವ ಇಟ್ಟು ಪ್ರತಿಭಟನೆಗೆ ಮುಂದಾದ ಗ್ರಾಮಸ್ಥರು.

ವಿಜಯನಗರ…ಇಂದು ಮದ್ಯಾಹ್ನ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಮೃತ ರೈತನ ಶವ ಇಟ್ಟು ಪ್ರತಿಭಟನೆಗೆ ಮುಂದಾಗಿದ್ದಾರೆ ಜಿ.ನಾಗಲಾಪುರ ಗ್ರಾಮದ ಗ್ರಾಮಸ್ಥರು. ಇಂದು ಬೆಳಗಿನ ಜಾವ ಸುರಿದ ಭಾರಿ ಮಳೆಯಿಂದ ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಜಿ.ನಾಗಲಾಪುರ  ಗ್ರಾಮದ ಪಕ್ಕದಲ್ಲಿ ಇದ್ದ ಹಳ್ಳ ರಭಸದಿಂದ ಹರಿಯುತ್ತಿದ್ದು, ಇದೇ ಸಂದರ್ಭದಲ್ಲಿ ರೈತ ಉಂಚಟ್ಟಿ ಬೊಮ್ಮಪ್ಪ ಹಳ್ಳ ದಾಟುವ ಸಂದರ್ಭದಲ್ಲಿ (62) ಹಳ್ಳದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು.

ಘಟನೆ ನಡೆಯುತಿದ್ದಂತೆ ಹೊಸಪೇಟೆ ತಹಶೀಲ್ದಾರ್ ವಿಶ್ವಜೀತ್ ಮೆಹ್ತಾ. ಕಂದಾಯ ನಿರೀಕ್ಷಕ ಅಂದಾನಗೌಡ. ಗ್ರಾಮಲೆಕ್ಕಿಗ ಬಸವರಾಜ, ಪಿ.ಡಿ.ಒ ರಾಘವೇಂದ್ರ ಸೇರಿದಂತೆ ಮರಿಯಮ್ಮಹಳ್ಳಿ ಪೊಲೀಸ್ ಸ್ಥಳಕ್ಕೆ ಬೇಟಿ ನೀಡಿ ಮೃತನ ಶವಕ್ಕೆ ಹುಡುಕಾಟ ನಡೆಸಿದ್ದರು.

ಮರಿಯಮ್ಮನಹಳ್ಳಿ ಪೊಲೀಸರು ಮತ್ತು ಸ್ಥಳೀಯರು ನಿರಂತರ ಹುಡುಕಾಟ ನಡೆಸಿ ಮೃತ ರೈತನ ಶವವನ್ನ ಪತ್ತೆ ಹಚ್ಚಿದ್ದಾರೆ, ಇದಾದ ಬಳಿಕ ಮೃತ ರೈತನ ಸಂಭಂದಿಕರು ಮತ್ತು ಜಿ. ನಾಗಲಾಪುರ ಗ್ರಾಮಸ್ಥರು ಹಳ್ಳಕ್ಕೆ ಸೇತುವೆ ನಿರ್ಮಿಸುವಂತೆ ಒತ್ತಾಯಿಸಿ, ಗ್ರಾಮಪಂಚಾಯ್ತಿ ಮುಂದೆ ಮೃತ ರೈತನ ಶವ ಇಟ್ಟು ಪ್ರತಿಭಟನೆಗೆ ಮುಂದಾಗಿದ್ದಾರೆ. ಸ್ಥಳಕ್ಕೆ ಸ್ಥಳಕ್ಕೆ ಸಂಭಂದಪಟ್ಟ ಅಧಿಕಾರಿಗಳು ಬೇಟಿ ನೀಡಿ ಭರವಸೆ ಕೊಡುವವರೆಗೆ ಶವ ಅಂತ್ಯ ಸಂಸ್ಕಾರಮಾಡದಂತೆ ಪಟ್ಟು ಹಿಡಿದು ಪ್ರತಿಭಟನೆ ಮುಂದುವರೆಸಿದ್ದಾರೆ, ಅದಲ್ಲದೆ ಮೃತ ರೈತನಿಗೆ ಸೂಕ್ತ ಪರಿಹಾರ ನೀಡುವ ಮೂಲಕ ಮೃತ ರೈತನ ಕುಟುಂಭಕ್ಕೆ ನೆರವಾಗುವಂತೆ ಕೂಡ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವರದಿ..ಸುಬಾನಿ ಪಿಂಜಾರ ಹಂಪಿ‌ ಮಿರರ್ ವಿಜಯನಗರ.