You are currently viewing ಎಣ್ಣಿ ಹೊಡೆದ ಏಟಿನಲ್ಲಿ ಮಾಡಿಕೊಂಡ ಎಡವಟ್ಟಿಗೆ  ಎಸ್.ಬಿ.ಕಾನ್ಸಟೇಬಲ್ ಗೆ ಏನು ಶಿಕ್ಷೆ ಗೊತ್ತಾ…?

ಎಣ್ಣಿ ಹೊಡೆದ ಏಟಿನಲ್ಲಿ ಮಾಡಿಕೊಂಡ ಎಡವಟ್ಟಿಗೆ  ಎಸ್.ಬಿ.ಕಾನ್ಸಟೇಬಲ್ ಗೆ ಏನು ಶಿಕ್ಷೆ ಗೊತ್ತಾ…?

ವಿಜಯನಗರ…ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದ ಬಳಿಯ ಡಾಬ ಮಾಲೀಕನ ಮೇಲೆ ಹಲ್ಲೆಮಾಡಿದ್ದ ಎಸ್.ಬಿ. ಕಾನ್ಸಟೇಬಲ್ ಕಲ್ಲೇಶ್ ಗೌಡನನ್ನ ಅಮಾನತ್ತು ಮಾಡಿ ವಿಜಯನಗರ ಎಸ್ಪಿ ಅರುಣ್ ಕುಮಾರ್ ಅವರು ಆದೇಶ ಹೊರಸಿಡಿದ್ದಾರೆ.    ಮೈಲಾರ ಗ್ರಾಮದ ಹೊರ ವಲಯದ ಗುತ್ತಲ ಕ್ರಾಸ್ ಬಳಿ ಇರುವ ಹಸಿರು ಮನೆ ಡಾಬ ಮಾಲೀಕ ಗುರುರಾಜ್ ಹಲ್ಲೆಗೆ ಒಳಗಾಗಿರುವ ವ್ಯಕ್ತಿಯಾಗಿದ್ದು.

ದಿನಾಂಕ 18/07/2022 ರಂದು ಸಂಜೆ ಸುಮಾರಿಗೆ ಹಸಿರು ಮನೆ ಡಾಬದ ಪಕ್ಕದಲ್ಲಿರುವ ಮತ್ತೊಂದು ಹೊಟೆಲ್‌ನಲ್ಲಿ ಕುಳಿತ ಪಿ.ಸಿ.ಕಲ್ಲೇಶ ಗೌಡ  ಸ್ನೇಹಿತರೊಂದಿಗೆ ಪಾರ್ಟಿ ಮಾಡುತಿದ್ದರಂತೆ, ಅದೇ ಸಂದರ್ಭದಲ್ಲಿ ಹಸಿರು ಮನೆ ಡಾಬ ಮಾಲೀಕ ಆ ಸ್ಥಳಕ್ಕೆ ಹೋಗುತಿದ್ದಂತೆ ಪಿ.ಸಿ.ಕಲ್ಲೇಶ್ ಗೌಡ, ಡಾಬ ಮಾಲೀಕ ಗುರುರಾಜನಿಗೆ ಎರಡು ಬಾಟಲಿ ಎಣ್ಣೆ ತಂದು ಕೊಡುವಂತೆ ಒತ್ತಾಯಿಸಿದ್ದಾರೆ, ಪಿಸಿ. ಕಲ್ಲೇಶ ಗೌಡನ ಮಾತಿಗೆ ಗುರುರಾಜ ಒಪ್ಪದ ಹಿನ್ನಲೆಯಲ್ಲಿ ಅವಾಚ್ಚ ಶಬ್ದಗಳಿಂದ ಏಕಾ ಏಕಿ ನಿಂದನೆ ಮಾಡಿದ್ದಾರಂತೆ ಕಲ್ಲೇಶ್ ಗೌಡ, ಸಾಲದಕ್ಕೆ ಡಾಬದಲ್ಲಿ ಇದು ವರೆಗೆ ಊಟಮಾಡಿ ಸಾಲಮಾಡಿದ್ದ ಐದು ಸಾವಿರ ರೂಪಾಯಿ ಹಣ ಕೊಡದೆ ನಾನು ಪೊಲೀಸ್ ಇದ್ದೇನೆ ಹೆಚ್ಚು ಕಡಿಮೆ ಮಾಡಿದರೆ ನಿನ್ನೆ ವಿರುದ್ದ ಕೇಸ್ ಹಾಕುತ್ತೇನೆ ಎಂದು ಹೆದರಿಸುತ್ತಿದ್ದರಂತೆ.

ಇದಕ್ಕೆ ಡಾಬ ಮಾಲೀಕ ಪ್ರತಿರೋಧ ವ್ಯಕ್ತಪಡಿಸಿದ ಮೇಲೆ ನಡು ರಸ್ತೆಯಲ್ಲೇ ಗುರುರಾಜನ ಮೇಲೆ ಹಲ್ಲೆಮಾಡಿ ದೌರ್ಜನ್ಯ ಎಸಗಿದ್ದಾರೆ ಎಂದು ನೊಂದ ವ್ಯೆಕ್ತಿ ಗುರುರಾಜ್ ಅವರ ಪತ್ನಿ ರಾಧಮ್ಮ ಹೂವಿನಹಡಗಲಿ ಸಿ.ಪಿ.ಐ ಕಛೇರಿಗೆ ದೂರು ಸಲ್ಲಿಸಿದ್ದರು. ಇನ್ನು ಕಲ್ಲೇಶ್ ಗೌಡ ಮತ್ತು ಗುರುರಾಜ್ ನುಡುವೆ ನಡೆದ ಈ ಗಲಾಟೆಯ ವೀಡಿಯೊ ವೈರಲ್ ಆಗಿ ವಿಜಯನಗರ ಎಸ್ಪಿ ಡಾಕ್ಟರ್ ಅರುಣ್ ಕುಮಾರ್ ಅವರಿಗೆ ತಲುಪಿತ್ತು. ವೀಡಿಯೋ ಪರಿಸೀಲನೆ ಮಾಡಿದ ಎಸ್ಪಿ ಘಟನೆಯ ಕುರಿತು ತನಿಖೆ ನಡೆಸಿ ವರದಿ ಕೊಡುವಂತೆ ಹಿರೇಹಡಗಲಿ ಪಿ.ಎಸ್.ಐ ಅವರಿಗೆ  ಸೂಚಿಸಿದ್ದರು.

ಇನ್ನು ಪಿ.ಸಿ.ಕಲ್ಲೇಶ್ ಗೌಡ ದುಂಡಾವರ್ತನೆಯ ವೀಡಿಯೊ ನಮ್ಮ ಹಂಪಿ ಮಿರರ್ ಗೂ ಲಭ್ಯವಾದ ಹಿನ್ನೆಲೆಯಲ್ಲಿ ಸುದ್ದಿ ಪ್ರಸಾರಮಾಡಿ ಎಸ್ಪಿಯವರ ಗಮನ ಸೆಳೆಯುವಲ್ಲೂ ಯಶಸ್ವಿಯಾಗಿತ್ತು. ಆ ಸಂದರ್ಭದಲ್ಲಿ ನಮ್ಮ ಹಂಪಿ ಮಿರರ್ ಗೆ ಪ್ರತಿಕೃಯಿಸಿದ ಎಸ್ಪಿ ಸಾಹೇಬರು,ತನಿಖೆಯ ವರದಿ ಬಂದ ನಂತರ ನಿರ್ಧಾಕ್ಷಿಣ್ಯ ಕ್ರಮ ಜರುಗಿಸುವ ಭರವಸೆಯನ್ನ ಎಸ್ಪಿ ನೀಡಿದ್ದರು, ಅದರಂತೆಯೇ ಇಂದು ತನಿಖಾ ವರದಿ ಎಸ್ಪಿ ಅರುಣ್ ಕುಮಾರ್ ಅವರ ಕೈ ತಲುಪಿದ್ದು ಹಿರೇಹಡಗಲಿ ಪಿ.ಎಸ್.ಐ.ವರದಿ ಆಧಾರದ ಮೇಲೆ ಕಲ್ಲೇಶ್ ಗೌಡ ಅವರನ್ನ ಅಮಾನತ್ತುಮಾಡಿ ಆದೇಶ ಹೊರಡಿಸಿದ್ದಾರೆ, ಅದರ ಜೊತೆ ನೊಂದ ವ್ಯಕ್ತಿಯಿಂದ ದೂರು ಪಡೆದು ಕಲ್ಲೇಶ್ ಗೌಡನ ವಿರುದ್ದ ಆತ ಕೆಲಸಮಾಡುತಿದ್ದ ಹಿರೇಹಡಗಲಿ ಪೊಲೀಸ್ ಠಾಣೆಯಲ್ಲೇ ದೂರು ದಾಖಲಿಸಲು ಸೂಚಿಸಿದ್ದಾರೆ.

ಸದ್ಯಕ್ಕೆ ಆರು ತಿಂಗಳು ಅಮಾನತ್ತಾಗಿರುವ ಪಿ.ಸಿ.ಕಲ್ಲೇಶ್ ಗೌಡ ಅವರು ಹಿರೇಹಡಗಲಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲೇ ಇದ್ದು ಪ್ರತಿ ದಿನ ಹಿರೇಹಡಗಲಿ ಠಾಣೆಯ ಅಮಾನತ್ತು ರಿಜಿಸ್ಟರ್ ಗೆ ಸಹಿ ಮಾಡಬೇಕಾಗಿದೆ. ಅಮಾನತ್ತಾಗಿರುವ ಕಲ್ಲೇಶ್ ಗೌಡ ಪರ್ಯಾಯವಾಗಿ ಯಾವುದೇ ಕೆಲಸ ಅಥವಾ ವ್ಯಾಪಾರ ಮಾಡಿದರೂ ಅದು ಅಪರಾದವಾಗಲಿದೆ ಎಂದು ಎಸ್ಪಿಯವರ ಅಮಾನತ್ತು ಆದೇಶದಲ್ಲಿ ಉಲ್ಲೇಕವಾಗಿದೆ. ನಮ್ಮ ಸುದ್ದಿಗೆ ಸ್ಪಂದಿಸಿದ  ವಿಜಯನಗರದ ಎಸ್ಪಿ ಅರುಣ್ ಕುಮಾರ್. ಕೆ ಅವರಿಗೆ ನಾವು ಅಭಿನಂದನೆ ಸಲ್ಲಿಸುತ್ತೇವೆ.ತಪ್ಪು ಯಾರೇ ಮಾಡಿದರು ತಪ್ಪೇ, ತಪ್ಪಿತಸ್ಥರನ್ನ ರಕ್ಷಣೆಮಾಡುವುದಿಲ್ಲ  ಅಂತವರ ವಿರುದ್ದ ಕಟ್ಟು ನಿಟ್ಟಿನ ಕ್ರಮ ಜರುಗಿಸುವ ಮೂಲಕ ನೊಂದ ಜನರ ಪರ ನಿಲ್ಲುತ್ತೆ ಪೊಲೀಸ್ ಇಲಾಖೆ ಎಂದು ಜನ ಸಾಮಾನ್ಯರಿಗೆ ಸಂದೇಶ ರವಾನಿ ಮಾಡಿದ್ದಾರೆ ಎಸ್ಪಿ ಅರುಣ್ ಕುಮಾರ್ ಅವರು,.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ..