You are currently viewing ವಿಶ್ವ ವಿಖ್ಯಾತ ಹಂಪಿಯ ಸ್ಮಾರಕ ಸೌಂದರ್ಯ ಹೆಚ್ವಿಸಿದ ತುಂಗಭದ್ರೆ.

ವಿಶ್ವ ವಿಖ್ಯಾತ ಹಂಪಿಯ ಸ್ಮಾರಕ ಸೌಂದರ್ಯ ಹೆಚ್ವಿಸಿದ ತುಂಗಭದ್ರೆ.

ವಿಜಯನಗರ….ಮಲೆನಾಡಿನಲ್ಲಿ ನಿರಂತಾರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಹೊಸಪೇಟೆ ಬಳಿಯಿರುವ ತುಂಗಭದ್ರ ಜಲಾಶಯಕ್ಕೆ ಭಾರಿ ಪ್ರಮಾಣದ ಒಳ ಹರಿವು ಹೆಚ್ಚಾಗಿದೆ, ಕಳೆದ ಮೂರು ದಿನಗಳ ಹಿಂದೆ ಜಲಾಶಯ ಭರ್ಥಿಯಾಗಿದ್ದು ಜಲಾಶಯದಿಂದ ನದಿಗೆ ನೀರನ್ನ ಹರಿ ಬಿಡಲಾಗಿದೆ, ಇದರಿಂದ ಜಲಾಶಯದ ಕೆಳಬಾಗದಲ್ಲಿರುವ ನದಿ ಪಾತ್ರದ ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ.

ಅದರಲ್ಲೂ ವಿಶ್ವ ವಿಖ್ಯಾತ ಹಂಪಿಯ ಕೆಲವು ಸ್ಮಾರಕಗಳು ಜಲಾವೃತವಾಗಿವೆ, ಕೋಟಿಲಿಂಗ, ಪುರಂದರ ಮಂಟಪ, ಸಂಪೂರ್ಣ ಮುಲುಗಡೆ ಆಗಿದ್ರೆ, ಕೋದಂಡ ರಾಮಸ್ವಾಮಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಒನಕೆ ಕಿಂಡಿ ಮಾರ್ಗ ಸಂಪೂರ್ಣ ಮುಚ್ಚಿ ಹೋಗಿದ್ದು, ಬದಲಿ ಮಾರ್ಗದ ಮೂಲಕ ಪ್ರವಾಸಿಗರು ಸಂಚಾರ ಆರಂಬಿಸಿದ್ದಾರೆ.

ಅದೇ ರೀತಿ ಸುಗ್ರೀವ ಗುಹೆ ಮುಂಬಾಗದ ಸೀತೆ ಸೆರಗಿನ ಮೇಲೆ ನೀರು ಹರಿಯುತಿದ್ದು, ಈ ದೃಷ್ಯ ಕಣ್ತುಂಬಿಕೊಳ್ಳುವುದಕ್ಕೆ ಪ್ರವಾಸಿಗರು ಮುಗಿಬೀಳುತಿದ್ದಾರೆ, ಒಂದಂತೂ ನಿಜ ಇದೀಗ ವಿಶ್ವ ವಿಖ್ಯಾತ ಹಂಪಿಗೆ ಹೊಸ ಜೀವ ಕಳೆ ಬಂದಿರುವುದು ಮಾತ್ರ ಸತ್ಯ.  ಹಂಪಿಯಲ್ಲಿ ಈ ಸಂದರ್ಭದಲ್ಲಿ ಕಾಣ ಸಿಗುವ ದೃಷ್ಯ ಇನ್ನಿತರೆ ದಿನಗಳಲ್ಲಿ ಕಾಣಲು ಸಾಧ್ಯವಿಲ್ಲ. ಅದರಲ್ಲೂ ಕೊದಂಡರಾಮಸ್ವಾಮಿ ದೇವಸ್ಥಾನದ ಮುಂದಿನ ಬಾಗದ ಚಕ್ರತೀರ್ಥದ ಅಕ್ಕ ಪಕ್ಕದ ಕಲ್ಲು ಗುಡ್ಡಗಳು ಅರ್ದಬಾಗದಷ್ಟು ಮುಳುಗಡೆ ಆದಂತೆ ಬಾಸವಾಗುತಿದ್ರೆ, ಬೇರೆ ದಿನಗಳಲ್ಲಿ ಈ ಪ್ರದೇಶದ ನೂರಾರು ಅಡಿಗಳಷ್ಟು ಆಳ ಕಾಲಿ ಕಾಲಿಯಾಗಿ ಕಾಣುತ್ತೆ, ಅದರೆ ಅದೇ ಸ್ಥಳ ಇದೀಗ ತುಂಬಿ ಹರಿಯುತಿದ್ದು, ಚಕ್ರತೀರ್ಥ ಎಂದು ಈ ಸ್ಥಳಕ್ಕೆ ಹೆಸರಿಟ್ಟ ಹಿನ್ನೆಲೆ ಏನೆಂದು ಇಂದು ಮಾತ್ರ ಗೊತ್ತಾಗುತ್ತೆ. 

ತುಂಗಭದ್ರಾ ಜಲಾಶಯ ಸಂಪೂರ್ಣ ಭರ್ಥಿಯಾಗಿ ಜಲಾಶಯದಿಂದ ಒಂದುವರೆ ಲಕ್ಷ ಕ್ಯೂಸೆಕ್ಸ್ ನೀರು ನದಿಗೆ ಹರಿ ಬಿಟ್ಟ ಈ ಸಂದರ್ಭದಲ್ಲಿ ಕೋದಂಡರಾಮಸ್ವಾಮಿ ದೇವಸ್ಥಾನದ ಈ ಬಾಗದಲ್ಲಿ ತುಂಗಭದ್ರೆಯ ನೀರು ಚಕ್ರಾಕಾರದಲ್ಲಿ ತಿರುಗುತ್ತಾ ಮುಂದೆ ಹೋಗುತ್ತೆ, ಹಾಗಾಗಿ ಈ ಬಾಗಕ್ಕೆ ಚಕ್ರತೀರ್ಥ ಎನ್ನುವ ಹೆಸರು ಬಂತೆಂದು ಇತಿಹಾಸ ಹೇಳುತ್ತೆ. ಆ ದೃಷ್ಯ ಈಗ ನೋಡಲು ಕಾಣ ಸಿಗುತ್ತೆ. ಒಟ್ಟಿನಲ್ಲಿ ತುಂಗಭದ್ರ ಜಲಾಶಯದಿಂದ ಬಾರಿ ಪ್ರಮಾಣದ ನೀರು ನದಿಗೆ ಹರಿಬಿಟ್ಟಾಗ ಕೆಲವು ಸ್ಮಾರಕಗಳು‌ ಮುಳುಗಡೆ ಆದರೂ, ಆ ಸೊಬಗನ್ನ ಕಣ್ತುಂಬಿಕೊಳ್ಳಲು ಪ್ರವಾಸಿಗರು ಹಂಪಿಗೆ ಬೇಟಿ ನೀಡುವುದು ಹೆಚ್ಚಾಗಿ ಕಂಡುಬರುತ್ತೆ, ಹೀಗೆ ಹಂಪಿಗೆ ಬೇಟಿ ನೀಡಿದ ಪ್ರವಾಸಿಗರು ಇಲ್ಲಿನ ಭದ್ರತಾ ಸಿಬ್ಬಂದಿಗಳು ಮತ್ತು ಪೊಲೀಸ್ ಇಲಾಖೆಯ ನಿಯಮಗಳನ್ನ ಪಾಲನೆ ಮಾಡಿದರೆ ಸೂಕ್ತ, ಇಲ್ಲವಾದರೆ ಅಪಾಯವನ್ನ ಮೈ ಮೇಲೆ ಎಳೆದುಕೊಂಡಂತೆ.

ಜಲಾಶಯದ ಒಟ್ಟು ನೀರು ಸಂಗ್ರಹ ಸಾಮರ್ಥ್ಯ 1633 ಅಡಿಗಳಷ್ಟಾಗಿದ್ದು ಇದೀಗ 1630 ಅಡಿಗೆ ನೀರಿನ ಮಟ್ಟ ತಲುಪಿದೆ, ಅದಲ್ಲದೆ ಒಂದು ಲಕ್ಷ ಹದಿನೈದು ಸಾವಿರ್ ಕ್ಯೂಸೆಕ್ಸ್ ನೀರು ಜಲಾಶಯಕ್ಕೆ ಇನ್ನೂ ಹರಿದು ಬರುತ್ತಿದೆ. ಹಾಗಾಗಿ ಡ್ಯಾಂ ನ 30 ಕ್ರಷ್ಟ್ ಗೇಟ್ ಮುಕಾಂತ್ರ ಒಂದು ಲಕ್ಷ  50 ಸಾವಿರ ಕ್ಯೂಸೆಕ್ಸ್ ನೀರನ್ನ ನದಿಗೆ ಹರಿ ಬಿಡಲಾಗಿದೆ, 105:788 ಟಿ.ಎಂ.ಸಿ ನೀರು ಸಂಗ್ರಹಣ ಸಾಮರ್ಥ್ಯದ ಜಲಾಶಯದಲ್ಲಿ 100 ಟಿ.ಎಂ.ಸಿ ನೀರು ಸಂಗ್ರಹವಾಗಿದ್ದು ಇದೇ ನೀರಿನ ಮಟ್ಟವನ್ನ ಕಾಯ್ದುಕೊಳ್ಳುವ ಅನಿವಾರ್ಯತೆ ತುಂಗಭದ್ರ ಆಡಳಿತ ಮಂಡಳಿಗೆ ಇದೆ.  ಸದ್ಯಕ್ಕೆ ವಿಜಯನಗರ ಜಿಲ್ಲೆ ತುಂಗಭದ್ರ ಜಲಾಶಯ ಪ್ರವಾಸಿಗರ ಆಕರ್ಷಣೀಯ ತಾಣವಾಗಿದ್ದು ವಿಶ್ವ ವಿಖ್ಯಾತ ಹಂಪಿ ಮತ್ತು ತುಂಗಭದ್ರ ಜಲಾಶಯ ಹಾಗೂ ಮುನಿರಾಬಾದ ಬಳಿಯ ಹಿನ್ನೀರು ಮತ್ತು ಗುಂಡಾ ಅರಣ್ಯದ ಬಳಿಯಲ್ಲಿರುವ ಹಿನ್ನೀರಿಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.

ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.