.
ವಿಜಯನಗರ. ವೀಕೆಂಡ್ ಲಾಕ್ಡೌನ್, ಕರ್ಫ್ಯೂ ನಿಂದ ಬೆಚ್ಚಿ ಬಿದ್ದು ಹಂಪಿಯಿಂದ ದೂರ ಉಳಿದಿದ್ದ ಭಕ್ತರು ಪ್ರವಾಸಿಗರು ಇದೀಗ ಮತ್ತೆ ಹಂಪಿಯತ್ತ ನಿಧಾನವಾಗಿ ಮುಖ ಮಾಡುತಿದ್ದಾರೆ.
ಹೌದು ನಿನ್ನೆಯ ವರೆಗೆ ಹಂಪಿಯಲ್ಲಿ ಜಾರಿಯಿದ್ದ ವೀಕೆಂಡ್ ಲಾಕ್ಡೌನ್ ಮತ್ತು ಕರ್ಫ್ಯೂ ಇಂದಿಗೆ ಕೊನೆಗೊಂಡಿದೆ. ಈ ಹಿನ್ನೆಲೆಯಲ್ಲಿ ಹಂಪಿಯ ಎಲ್ಲಾ ದೇವಸ್ಥಾನಗಳು ಬಾಗಿಲು ತೆಗೆದಿವೆ. ದಕ್ಷಿಣ ಕಾಶಿ ಎಂದೇ ಪ್ರಸಿದ್ದಿ ಪಡೆದಿರುವ ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಇಂದು ಬೆಳಗಿನಿಂದಲೇ ಪೂಜಾ ಕಾರ್ಯಗಳು ಪ್ರಾರಂಭವಾಗಿದೆ.
ಆದರೆ ಬೆರಳೆಣಿಕೆಯಷ್ಟು ಭಕ್ತರು ಮಾತ್ರ ದೇವಸ್ಥಾನಕ್ಕೆ ಬೇಟಿ ನೀಡಿ ಪೂಜಾ ಕಾರ್ಯದಲ್ಲಿ ಬಾಗಿಯಾಗಿದ್ದಾರೆ. ಹುಣ್ಣಿಮೆ ಎರಡು ದಿನ ಮುಂಚಿತ ಮತ್ತು ನಂತರದ ಎರಡು ದಿನಗಳು ಹಂಪಿ ಗಿಜಿಗುಡುತಿತ್ತು. ಆದರೆ ಕೊರೊನ ಹಟ್ಟಹಾಸದಿಂದ ಎದುರಾಗಿದ್ದ ಲಾಕ್ಡೌನ್ ಗೆ ಬಿಕೋ ಎನ್ನುತ್ತಿದೆ. ಬಹುತೇಕ ಜನಸಾಮಾನ್ಯರು ಇನ್ನೂ ಲಾಕ್ಡೌನ್ ಭಯದಿಂದ ಹೊರ ಬರದ ಹಿನ್ನೆಲೆಯಲ್ಲಿ ಹಂಪಿ ಕಾಲಿಕಾಲಿಯಾಗಿ ಬಣಗುಡುತ್ತಿದೆ.
ವಿಡಿಯೊ ನೋಡುವ ಇಷ್ಟವಿದ್ದರೆ ಈ ಕೆಳಗಿನ ಲಿಂಕ್ ಒತ್ತಿ.
ವರದಿ..ಸುಬಾನಿ ಪಿಂಜಾರ.ವಿಜಯನಗರ.