You are currently viewing ಕೈ ಪಕ್ಷಕ್ಕೇ ಭವಿಷ್ಯ ಇಲ್ಲ, ಇ‌ನ್ನು ಅಲ್ಲಿಗೆ ಹೋದವರಿಗೇನು ಭವಿಷ್ಯ ಸಿಗುತ್ತೆ, ಆನಂದ್ ಸಿಂಗ್, ವ್ಯಂಗ್ಯ.

ಕೈ ಪಕ್ಷಕ್ಕೇ ಭವಿಷ್ಯ ಇಲ್ಲ, ಇ‌ನ್ನು ಅಲ್ಲಿಗೆ ಹೋದವರಿಗೇನು ಭವಿಷ್ಯ ಸಿಗುತ್ತೆ, ಆನಂದ್ ಸಿಂಗ್, ವ್ಯಂಗ್ಯ.

ವಿಜಯನಗರ…ಕಾಂಗ್ರೆಸ್ ಪಕ್ಷಕ್ಕೆ ಹೋದ್ರೆ ಅವರ ಭವಿಷ್ಯ ಕತ್ತಲೆಗೆ ಹೋದಂತೆ,ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವ ಕಳೆದುಕೊಂಡಿದೆ,ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ಯಾವ ರೀತಿಯಲ್ಲಿ ಇದೆ ಎಂದು ಇಡೀ ದೇಶದ ಜನತೆಗೆ ಗೊತ್ತಿದೆ ಎಂದು ಸಚಿವ ಆನಂದ್ ಸಿಂಗ್ ನಿನ್ನೆ ಕಾಂಗ್ರೆಸ್ ಪಕ್ಷದ ವಿರುದ್ದ ಹರಿಹಾಯ್ದಿದ್ದರೆ. ಹೊಸಪೇಟೆ ನಗರದ ಟಿ.ಎಸ್.ಪಿ.ಎಲ್ ಹಳೇಯ ಕಟ್ಟಡವನ್ನ ನವೀಕರಣಗೊಳಿಸಿ‌ ಜಿಲ್ಲಾಧಿಕಾರಿಗಳ ಕಚೇರಿಯನ್ನಾಗಿ ಪರಿವರ್ತಿಸಲಾಗಿತ್ತು, ಇದೇ ಕಟ್ಟಡವನ್ನ ಜಿಲ್ಲಾಧಿಕಾರಿಗಳ ಕಚೇರಿಯನ್ನಾಗಿ ಉದ್ಘಾಟಿಸಿ ನಂತರ ಮಾತನಾಡಿದ ಸಚಿವ ಆನಂದ್ ಸಿಂಗ್ ರಾಜ್ಯರಾಜಕಾರಣದ ಆಗುಹೋಗುಗಳ ಬಗ್ಗೆ ಮಾದ್ಯಮದ ಮುಂದೆ ಹೇಳಿಕೊಂಡರು.ಅವರು ಇವರು ನನ್ನ ಸಂಪರ್ಕದಲ್ಲಿದ್ದಾರೆ ಎಂದು ದೊಡ್ಡ ದೊಡ್ಡ ನಾಯಕರು ಯಾವ ಲೆಕ್ಕಚಾರದ ಮೇಲೆ ಹೀಗೆ ಹೇಳ್ತಾರೋ ಗೊತ್ತಿಲ್ಲ. ಅಂತಾ ದೊಡ್ಡ ನಾಯಕರ ಬಗ್ಗೆ  ನಾನು ಟೀಕೆ ಮಾಡುವುದಿಲ್ಲ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಅವರ ಮಾತಿಗೆ ಟಾಂಗ್ ಕೊಟ್ಟಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಹೋಗಿ ಯಾರು ತಮ್ಮ ಭವಿಷ್ಯವನ್ನು ಕತ್ತಲೆಗೆ ದೋಡ್ತಾರೆ ಹೇಳಿ ನೋಡೋಣ,ಬಿಜೆಪಿ ಪಕ್ಷ ಮುಂದೇನೂ ಬರ್ತದೆ, ಸುಮಾರು ವರ್ಷಗಳ ಕಾಲ ದೇಶದಲ್ಲಿ ಬಿಜೆಪಿ ಪಕ್ಷ ಆಳ್ವಿಕೆ ನಡೆಸುತ್ತದೆ, 2023 ರ ವಿಧನಾಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದು ಪಕ್ಕಾ ಎಂದು ಭವಿಷ್ಯ ನುಡಿದಿದ್ದಾರೆ ಸಚಿವ ಸಿಂಗ್. ನಂತರ ಜಿಲ್ಲಾ ಉಸ್ತುವಾರಿಗೆ ಸಂಭಂದಿಸಿದಂತೆ ಮಾತನಾಡಿದ ಆನಂದ್ ಸಿಂಗ್ ನನಗೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಿಕ್ಕಿದ್ದು ಖುಷಿಯಾಗಿದೆ, ನನ್ನ ಸ್ನೇಹಿತ ಶ್ರೀರಾಮುಲುಗೆ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಿಕ್ಕಿದ್ದು ಕೂಡ ಅಷ್ಟೇ ಖುಷಿ ತಂದಿದೆ. ಶ್ರೀರಾಮುಲು 16 ವರ್ಷಗಳ ಕಾಲ ತಪಸ್ಸುಮಾಡಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಪಡೆದಿದ್ದಾರೆ.

ಇನ್ನು ಈ ಎಲ್ಲಾ ಬೆಳವಣಿಗೆಯ ಹಿಂದಿನ ದಿನ ನಾವಿಬ್ಬರು ವಿಕೇಂಡ್ ನಲ್ಲಿ ಸೇರಿದ್ದು ಕಾಕತಾಳಿಯ ಅಷ್ಟೆ, ಅದು ವೈರಲ್ ಆಗಿದೆ ವೀಕೆಂಡ್ ಎಂದು ಕಳೆದ ವಾರ ಹಂಪಿ ಬಳಿಯ ತುಂಗಭದ್ರ ನದಿಯಲ್ಲಿ ತೆಪ್ಪದಲ್ಲಿ ಶ್ರೀರಾಮುಲು ಮತ್ತು ಅವರೊಂದಿಗೆ ಇದ್ದ ಪೊಟೊ ವೈರಲ್ ಆಗಿದ್ದಕ್ಕೆ ಸಿಂಗ್ ಸ್ಪಷ್ಟನೆ ನೀಡಿದರು. ಇನ್ನು ಜಿಲ್ಲಾ ಉಸ್ತುವಾರಿ ಬದಲಾವಣೆ ವಿಚಾರಕ್ಕೆ ಸಂಭಂದಿಸಿದಂತೆ ಮಾತನಾಡಿದ ಅವರು. ಯಾವ ಮಂತ್ರಿಗಳಿಗೂ ತವರು ಜಿಲ್ಲೆಯಲ್ಲಿ ಉಸ್ತುವಾರಿ ಕೊಟ್ಟಿಲ್ಲ, ಆ ತಾಂತ್ರಿಕತೆಯ ಆಧಾರದ ಮೇಲೆಯೇ ಶ್ರೀ ರಾಮುಲು ಅವರಿಗೆ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಿಕ್ಕಿದೆ. ಅವರ ಸ್ವಂತ ಊರು‌ ಬಳ್ಳಾರಿ ಆದರೂ ಚಿತ್ರದುರ್ಗ ಜಿಲ್ಲೆಯ ಮೊಣಕಾಲ್ಮೂರು ಅವರ ವಿಧಾನಸಭ ಕ್ಷೇತ್ರ, ಹಾಗಾಗಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಅವರಿಗೆ ಸಿಕ್ಕಿದೆ ಎಂದು ಮಾತನಾಡಿದರು. ಇನ್ನು ಹೊಸಪೇಟೆ ನಗರಸಭೆಯಲ್ಲಿ ಬಿಜೆಪಿ ಪಕ್ಷ ಅಧಿಕಾರ ಹಿಡಿದ ವಿಚಾರಕ್ಕೆ ಸಂಭಂದಿಸಿದಂತೆ ಮಾತನಾಡಿದ ಸಿಂಗ್. ಕಾಂಗ್ರೆಸ್ ಪಕ್ಷ ಹೊಸಪೇಟೆಯಲ್ಲಿ ಇದೆ ಎಂದಿದ್ರೆ ನಗರಸಭೆ ರಚನೆ ಮಾಡಬೇಕಿತ್ತಲ್ಲ. ನಾವು ಸ್ವತ‌ಂತ್ರ ಅಭ್ಯರ್ಥಿಗಳ ಬೆಂಬಲ ಪಡೆದು ಅಧಿಕಾರ ಪಡೆದಿದ್ದೇವೆ,ಯಾವ ಸದಸ್ಯರನ್ನೂ ನಾವು ಹೈಜಾಕ್ ಮಾಡಿಲ್ಲ, ಎಲ್ಲರೂ ಹೊಸಪೇಟೆ ನಗರದಲ್ಲೇ ಇದ್ದರು, ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ವರದಿ..ಸುಬಾನಿ ಪಿಂಜಾರ ವಿಜಯನಗರ.