You are currently viewing ನೊಂದು ಬೆಂದು ಬಂದವರಿಗೆ ಜಯದ ಹಾದಿ ತೋರಿಸುವಲ್ಲಿ ಇವರದು ಎತ್ತಿದ ಕೈ.

ನೊಂದು ಬೆಂದು ಬಂದವರಿಗೆ ಜಯದ ಹಾದಿ ತೋರಿಸುವಲ್ಲಿ ಇವರದು ಎತ್ತಿದ ಕೈ.

ವಿಜಯನಗರ….ಇತ್ತೀಚೆಗೆ ದೃಷ್ಯ ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುವ ಅದೆಷ್ಟೊ ಸಂಪಾದಕರು ಮತ್ತು ವರದಿಗಾರರು ಸೇರಿದಂತೆ ಕೆಲವು ನಿರೂಪಕರು ಕೂಡ ಪರ ವಿರೋಧದ ಚರ್ಚೆಗೆ ಗ್ರಾಸವಾಗುತಿದ್ದಾರೆ. ಕೆಲವರಂತೂ ಪತ್ರಿಕಾ ಧರ್ಮವನ್ನ ಪಾಲಿಸದೆ ಒಂದು ಪಕ್ಷದ ಕಾರ್ಯಕರ್ತರಂತೆ ನಡೆದುಕೊಂಡ್ರೆ, ಇನ್ನೂ ಕೆಲವರು ತಮ್ಮ ವೃತ್ತಿ ಧರ್ಮವನ್ನ ಬದಿಗಿಟ್ಟು ಧರ್ಮ ಧರ್ಮಗಳ ಮದ್ಯ ಬೆಂಕಿ ಇಡುವ ಅದೆಷ್ಟೊ ಕಾಯಕ ಬ್ರಷ್ಟರನ್ನ ಈ ಹಿಂದೆಯೂ ನೋಡಿದ್ದೇವೆ, ಈಗಲೂ ನೋಡುತಿದ್ದೇವೆ. ಆದರೆ ಈ ಎಲ್ಲಾ ಆರೋಪಗಳಿಗೆ ಅಪವಾದ ಎನ್ನುವಂತ ವ್ಯಕ್ತಿ ಎಂದರೆ, ಅದು ಜಯಪ್ರಕಾಶ ಶೆಟ್ಟಿಯವರು ಮಾತ್ರ.

ಖಾಸಗಿ ಚಾನೆಲ್ ಮೂಲಕ ತಮ್ಮದೇ ಶೈಲಿಯಲ್ಲಿ ಕಾರ್ಯ ನಿರ್ವಹಿಸುವ ಇವರು, ಎಂತದ್ದೇ ಸಂದರ್ಭದಲ್ಲಿ ತಮ್ಮ ವೃತ್ತಿಧರ್ಮವನ್ನ ಚಾಚೂತಪ್ಪದೆ ಪಾಲನೆಮಾಡಿದವರು. ಮೂರು ಸುದ್ದಿಗಳ ಮಹಾ ಸ್ಪೋಟದ ಮೂಲಕ ಜನ ಸಾಮಾನ್ಯರಿಗೆ ಹತ್ತಿರವಾದ ಜೆ.ಪಿ.ಯವರು, ರಾಜ್ಯದ ಮೂಲೆ ಮೂಲೆಯಿಂದ ಬಂದ ಸಮಸ್ಯೆಯ ಸುದ್ದಿಗಳಿಗೆ ಜೀವ ತುಂಬಿ ಅನ್ಯಾಯಕ್ಕೊಳಗಾದ ವರ್ಗಕ್ಕೆ ಆ ಕ್ಷಣಕ್ಕೆ ಪರಿಹಾರ ಕೊಡಿಸಿದ ಏಕೈಕ ಪತ್ರಕರ್ತ
ಜಯಪ್ರಕಾಶ್ ಶೆಟ್ಟಿಯವರು ಎಂದರೆ ತಪ್ಪಾಗಲಾರದು.

2000ನೇ ಇವಸಿಯ ಆಸುಪಾಸಿನಲ್ಲಿ‌ ಪತ್ರಿಕಾ ವೃತ್ತಿ ಆರಂಬಿಸಿದ ಜೆ.ಪಿ.ಯವರು ಜನ ಸಾಮಾನ್ಯರಿಗೆ ಹತ್ತಿರವಾಗಿದ್ದು ಸಮಯ ಸುದ್ದಿ ವಾಹಿನಿಯ ಮೂಲಕ. ಬಿಗ್ 3 ಕಾರ್ಯಕ್ರಮದ ಮೂಲಕ ಸುದ್ದಿಗಳ ಬೆನ್ನಟ್ಟುವ ಪದ್ದತಿ ಜಾರಿಗೆ ತಂದ ಇವರು, ನಿರ್ಲಕ್ಷದ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗದ ನೀರಿಳಿಸಿದ ಅದೆಷ್ಟೊ ಉದಾಹಾರಣೆಗಳನ್ನ ಕಂಡಿದ್ದೇವೆ. ಇನ್ನು ಮಾನವೀಯ ಮೌಲ್ಯಗಳನ್ನ ಸಾರುವ ವರದಿಗೆ ಅವರು ಜೀವ ತುಂಬಿದ ಪರಿಯಂತೂ ನೋಡುಗರ ಕಣ್ಣಾಲೆಗಳು ತುಂಬುವಂತೆ ಮಾಡುತ್ತದೆ. ಇವರು ಸುದ್ದಿ ಪ್ರಸಾರಮಾಡುತಿದ್ದಂತೆ ದಾನಿಗಳ ನೆರವಿನ ಮಹಾಪೂರವೇ ಹರಿದು ಬರುತ್ತದೆ.

ಅದು ಟಿ.ವಿ.ಚಾನೆಲ್ ಮೂಲಕವಾದರು ಸೈ, ಅವರ ವೈಯಕ್ತಿಕ ಸಾಮಾಜಿಕ ಜಾಲತಾಣಗಳಾದರೂ ಸೈ. ಒಟ್ಟಿನಲ್ಲಿ ಯಾವುದೋ ಒಂದು ನೊಂದ ಜೀವಿಗೆ ಜೆ.ಪಿ.ಯವರು ನ್ಯಾಯ ಕೊಡಿಸಲು ಮುಂದಾಗಿದ್ದಾರೆ ಎಂದರೆ ಸಾವಿರ ಕೈಗಳು ಜೆ.ಪಿ.ಯವರಗೆ ಬೆಂಬಲವಾಗಿ ನಿಲ್ಲುವುದು ಇಂದಿಗೂ ನಡೆಯುತ್ತದೆ. ಅದಕ್ಕೆ ಉದಾಹರಣೆ ಎಂದರೆ. ರಾಯಚೂರಿನ ಓರ್ವ ಬಡ ವಿಧ್ಯಾರ್ಥಿಗೆ ಅವರು‌ ನೆರವಾಗಿದ್ದ ಪರಿ.

ಹೌದು ಮಾನವಿ ತಾಲೂಕಿನ ಉದ್ಬಾಳು ಎನ್ನುವ ಗ್ರಾಮದ ಲಿಂಗರಾಜು ಎನ್ನುವ ಬಡ ವಿಧ್ಯಾರ್ಥಿ ವೈದ್ಯಕೀಯ ಶಿಕ್ಷಣ ಪಡೆಯುವ ಹಂಬಲವನ್ನ ಹೊಂದಿದ್ದ. ಈ ವಿಧ್ಯಾರ್ಥಿಯ ಅಳಲು ಅದೇಗೊ ಜಯಪ್ರಕಾಶ್ ಶೆಟ್ಟಿ ಅವರ ಗಮನಕ್ಕೆ ತಲುಪಿತು. ಆ ಕ್ಷಣಕ್ಕೆ ಆತನ ಎಲ್ಲಾ ಕಷ್ಟಗಳನ್ನ ದೂರ ಮಾಡುವ ಕಾಯಕಕ್ಕೆ ಜೆ.ಪಿ‌.ಕೈ ಹಾಕಿದರು. ತಮ್ಮ ಪೇಸ್ ಬುಕ್ ಮೂಲಕ ವಿಧ್ಯಾರ್ಥಿಯ ಕನಸನ್ನ ನಾಡಿನ ಜನತೆಗೆ ತೋರಿಸಿದ ಜೆ.ಪಿ.ಯವರು ಲಿಂಗರಾಜು ಅವರ ಕನಸು ನನಸುಮಾಡಲು ನೆರವು ಬೇಡಿದರು, ಆ ಕ್ಷಣಕ್ಕೆ ಒಂದಲ್ಲ ಎರಡು ಹತ್ತಾರು‌ ನೆರವಿನ ಸಹಾಸ್ತಗಳು ಲಿಂಗರಾಜು ಶಿಕ್ಷಣಕ್ಕೆ ಸಹಾಯಮಾಡಲು‌ ಮುಂದೆ ಬಂದರು.

ಲಿಂಗರಾಜು ಅವರಿಗೆ ನೆರವು ನೀಡಲು ಯಾರು ಸೂಕ್ತ ವ್ಯಕ್ತಿ ಎಂದು ತೀರ್ಮಾನಿಸಿದ ಜೆ.ಪಿ. ಪರಿಶ್ರಮ ನೀಟ್ ಆಕಾಡೆಮಿಯ ಮುಖ್ಯಸ್ಥ ಪ್ರದೀಪ್ ಈಶ್ವರ ಅವರಿಂದ ಲಿಂಗರಾಜು ಅವರ ಕಷ್ಟಗಳುನ್ನ ದೂರ ಮಾಡುವ ಕೆಲಸಕ್ಕೆ ಮುಂದಾದರು. ವೈಧ್ಯಕೀಯ ಶಿಕ್ಷಣ ಬಡ ಮಕ್ಕಳಿಗೆ ಗಗನ ಕುಸುಮ ಎನ್ನುವ ಅಪವಾದವನ್ನ ತಳ್ಳಿಹಾಕುವಂತೆ ಮಾಡಿದ ಜೆ.ಪಿಯವರ ಪರಿಶ್ರಮಕ್ಕೆ ಇದೀಗ ಫಲ ಸಿಕ್ಕಿದೆ.

ನೀಟ್ ಆಕಾಡೆಮಿ ಯಿಂದ ಒಂದು ವರ್ಷ ಕೋಚಿಂಗ್ ಪಡೆದ ವಿಧ್ಯಾರ್ಥಿಗೆ ಇದೀಗ ರಾಯಚೂರಿನ ವೈಧ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಎಂ.ಬಿ.ಬಿ.ಎಸ್.ಓದಲು ಸೀಟು ಸಿಕ್ಕಿದೆ. ಅಷ್ಟೇ ಅಲ್ಲದೆ ಕೋಚಿಂಗ್ ಕೊಟ್ಟ ಪರಿಶ್ರಮ ಆಕಾಡೆಮಿಯೇ ಓಂದು ವರ್ಷದ ಕಾಲೇಜು ಫೀಜನ್ನ ಸಹ ಅಂದರೆ ಸರಿ ಸುಮಾರು ಅರವತ್ತು ಸಾವಿರ ಹಣವನ್ನ ಕಟ್ಟುವ‌ ಮೂಲಕ ಬಡ ವಿಧ್ಯಾರ್ಥಿ ಆಕಾಶಕ್ಕೆ ಏಣಿ ಹಾಕುವ ಕನಸನ್ನ ನನಸುಮಾಡಿದ್ದಾರೆ.

ಇಷ್ಟೆಲ್ಲ ನೆರವು ಸಿಕ್ಕಿದು ಟಿ.ವಿ.ಮದ್ಯಮದಲ್ಲಿ ಪ್ರಸಾರವಾದ ಸುದ್ದಿಯಿಂದ ಅಲ್ಲ, ಕೇವಲ ಸಾಮಾಜಿಕ ಜಾಲತಾಣದಲ್ಲಿ ಜೆ.ಪಿ.ಯವರು ನೆರವು ಕೋರಿದ್ದಕ್ಕೆ. ಇಂತಾ ಅದೆಷ್ಟೊ ನೆರವಿನ ಕೆಲಸಗಳನ್ನ ಜೆ.ಪಿ.ಮಾಡಿರುವ ಉದಾಹರಣೆಗಳು ನಮ್ಮ ಕಣ್ಣಮುಂದಿವೆ.
ಹಾಗಾಗಿ ನಮ್ಮ ಯುವ ಪತ್ರಕರ್ತರು ಜೆ.ಪಿ.ಯವರ ಹಾದಿಯಲ್ಲಿ‌ ನಡೆದಿದ್ದೇ ಆದರೆ ಅಪಹಾಸ್ಯಕ್ಕೆ ಈಡಾಗಿರುವ ಪತ್ರಿಕಾರಂಗ ಮರಳಿ ತನ್ನ ಗೌರವ ಸಂಪಾದನೆ ಮಾಡುವುದರಲ್ಲಿ ಸಂದೇಹವೇ ಇಲ್ಲ.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.