You are currently viewing ತುಂಗಭದ್ರ ಜಲಾಶಯ ಭರ್ಥಿ, ನದಿಗೆ ನೀರು, ಹಂಪಿಯ ಸ್ಮಾರಗಳು ಮುಳುಗಡೆ,ಕಂಪ್ಲಿ ಗಂಗಾವತಿ ಸಂಪರ್ಕ ಕಡಿತ.

ತುಂಗಭದ್ರ ಜಲಾಶಯ ಭರ್ಥಿ, ನದಿಗೆ ನೀರು, ಹಂಪಿಯ ಸ್ಮಾರಗಳು ಮುಳುಗಡೆ,ಕಂಪ್ಲಿ ಗಂಗಾವತಿ ಸಂಪರ್ಕ ಕಡಿತ.

ವಿಜಯನಗರ….ಮಲೆನಾಡಿನಲ್ಲಿ ನಿರಂತಾರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಹೊಸಪೇಟೆ ಬಳಿಯಿರುವ ತುಂಗಭದ್ರ ಜಲಾಶಯಕ್ಕೆ ಭಾರಿ ಪ್ರಮಾಣದ ಒಳ ಹರಿವು ಹೆಚ್ಚಾಗಿದೆ, ಇದೀಗ ಜಲಾಶಯ ಭರ್ಥಿಯಾಗಿದ್ದು ಜಲಾಶಯದಿಂದ ನದಿಗೆ ನೀರನ್ನ ಹರಿ ಬಿಡಲಾಗಿದೆ, ಜಲಾಶಯದ ಒಟ್ಟು ನೀರು ಸಂಗ್ರಹ ಸಾಮರ್ಥ್ಯ 1633 ಅಡಿಗಳಷ್ಟಾಗಿದ್ದು ಇದೀಗ 1632 ಅಡಿಗೆ ನೀರಿನ ಮಟ್ಟ ತಲುಪಿದೆ, ಅದಲ್ಲದೆ 1ಲಕ್ಷ 23 ಸಾವಿರ ಕ್ಯೂಸೆಕ್ಸ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಹಾಗಾಗಿ ನಿನ್ನೆ ಡ್ಯಾಂ ನ 30 ಕ್ರಷ್ಟ್ ಗೇಟ್ ಮುಕಾಂತ್ರ 1 ಲಕ್ಷ 15 ಸಾವಿರ ಕ್ಯೂಸೆಕ್ಸ್ ನೀರನ್ನ ನದಿಗೆ ಹರಿ ಬಿಡಲಾಗಿದೆ, 105:788 ಟಿ.ಎಂ.ಸಿ ನೀರು ಸಂಗ್ರಹಣ ಸಾಮರ್ಥ್ಯದ ಜಲಾಶಯದಲ್ಲಿ 100 ಟಿ.ಎಂ.ಸಿ ನೀರು ಸಂಗ್ರಹವಾಗಿದೆ.

ಇನ್ನು ಹೀಗೆ ಜಲಾಶದಿಂದ ಹರಿಯುವ ನೀರಿಗೆ ತುಂಗಭದ್ರ ಆಡಳಿತ ಮಂಡಳಿ ಕಲರ್ ಪುಲ್ ಟಚ್ ನೀಡಿವ ಮುಕಾಂತ್ರ ಪ್ರವಾಸಿಗರನ್ನ ಆಕರ್ಸಿಸಲು ಮುಂದಾಗಿದೆ, ಜಲಾಶಯಕ್ಕೆ 33 ಕ್ರಸ್ಟಗೇಟ್ಗಳಿದ್ದು ಪ್ರತಿಯೂಂದು ಕ್ರಷ್ಟ್ ಗೇಟ್ಗೆ ಬಣ್ಣ ಬಣ್ಣದ ದೀಪಗಳನ್ನ ಅಳವಡಿಸುವ ಮುಕಾಂತ್ರ ಕೃತಕ ಕಾಮನ ಬಿಲ್ಲನ್ನ ನಿರ್ಮಾಣಮಾಡಿದ್ದಾರೆ, ಹಾಗಾಗಿ ಜಲಾಶಯವನ್ನ ಹಗಲು ಹೊತ್ತಿನಲ್ಲಿ ನೊಡುವುದಕ್ಕಿಂತ ರಾತ್ರಿಯ ಬಣ್ಣ ಬಣ್ಣದ ಬೆಳಕಿನಲ್ಲಿ ಹರಿಯುವ ನೀರನ್ನ ನೋಡುವುದೇ ಚಂದ ಎನ್ನುವಂತೆಮಾಡಿದ್ದಾರೆ, ಸದ್ಯಕ್ಕೆ ತುಂಗಭದ್ರ ಜಲಾಶಯ ಪ್ರವಾಸಿಗರ ಆಕರ್ಷಣೀಯ ತಾಣವಾಗಿದೆ.

ಇತ್ತ ಜಲಾಶಯದಿಂದ ತುಂಗಭದ್ರ ನದಿಗೆ ನೀರನ್ನ ಹರಿ ಬಿಟ್ಟ ಹಿನ್ನೆಲೆಯಲ್ಲಿ ನದಿ ಪಾತ್ರದ ವಿಶ್ವ ವಿಖ್ಯಾತ ಹಂಪಿಯ ಕೆಲವು ಸ್ಮಾರಕಗಳು ಮುಳುಗಡೆಯಾಗಿದೆ. ಕೋದಂಡ ರಾಮಸ್ವಾಮಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಒನಕೆ ಕಿಂಡಿ ಮಾರ್ಗ ಸಂಪೂರ್ಣ ಬಂದಾಗಿದ್ದು ಚಕ್ರತೀರ್ಥದಲ್ಲಿರುವ ಕೋಟಿಲಿಂಗ, ಲಕ್ಷ್ಮೀ ದೇವಸ್ಥಾನ ಪುರಂದರ ಮಂಠಪ ಸೇರಿದಂತೆ ಇನ್ನೂ ಹಲವು ಸ್ಮಾರಕಗಳು ಮುಳುಗಡೆಯಾಗಿದೆ. ಹಾಗಾಗಿ ಹಂಪಿಯ ಕೆಲವು ಸ್ಮಾರಕಗಳಿಗೆ ಪ್ರವೇಶ ಇಲ್ಲದಂತಾಗಿದೆ. ಅದರ ಜೊತೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ಮತ್ತು ಗಂಗಾವತಿ ಸಂಪರ್ಕ ಸೇತುವೆ ಮುಳುಗಡೆಯಾಗಿದ್ದು ರಸ್ತೆ ಸಂಚಾರ ಬಂದಾಗಿದೆ. ಹಾಗೆ ಕಂಪ್ಲಿಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಕೂಡ ನೀರು ನುಗ್ಗಿದೆ. ಜಲಾಶಯದ ಹಿನ್ನೀರಿನ ಗುಂಡಾ ಅರಣ್ಯದಲ್ಲಿನ ಪಾರ್ಕ ಗೆ ಅಲೆಗಳು ಅಪ್ಪಳಿಸುತಿದ್ದು ಪ್ರವಾಸಿಗರನ್ನ ತನ್ನತ್ತ ಸೆಳೆಯುತ್ತಿದೆ.

ವರದಿ…ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ