You are currently viewing ಹಗಲಲ್ಲಾ ಎಳೆ ನೀರು ಕೊಚ್ಚುತಿದ್ದ ಈ ಕೈ, ಹಗಲಲ್ಲೇ ಮನೆ ಬೀಗ ಮುರಿದು ಕಂಬಿ ಎಣಿಸುವುದಕ್ಕೆ ಪ್ರಾರಂಬಿಸಿತು.

ಹಗಲಲ್ಲಾ ಎಳೆ ನೀರು ಕೊಚ್ಚುತಿದ್ದ ಈ ಕೈ, ಹಗಲಲ್ಲೇ ಮನೆ ಬೀಗ ಮುರಿದು ಕಂಬಿ ಎಣಿಸುವುದಕ್ಕೆ ಪ್ರಾರಂಬಿಸಿತು.

ವಿಜಯನಗರ…ಓರ್ವ ಮನೆಗಳ್ಳನನ್ನ ಬಂದಿಸುವಲ್ಲಿ ಹೊಸಪೇಟೆ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕಾಶ್ ಜಿ. ಬಂದಿತ ಆರೋಪಿಯಾಗಿದ್ದು, ಹೊಸಪೇಟೆ ತಾಲೂಕಿನ ಬೆನಕಾಪುರ ಗ್ರಾಮದ ನಿವಾಸಿಯಾಗಿದ್ದ ಈ ಮನೆಗಳ್ಳ, ಹೊಸಪೇಟೆಯ ಅರವಿಂದ್ ನಗರದ  ಶೇಕ್ ಎಂಬುವವರ ಮನೆಯ ಬೀಗ ಮುರಿದು ಮನೆಯಲ್ಲಿದ್ದ 140ಗ್ರಾಂ ಚಿನ್ನಾಭರಣ ಮತ್ತು 65ಸಾವಿರ ಹಣವನ್ನ ದೋಚಿ ಪರಾರಿಯಾಗಿದ್ದ, ಈ ಸಂಭಂದ ಶೇಕ್ ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕಳ್ಳನ ಪತ್ತೆಗೆ ಮನವಿ ಮಾಡಿಕೊಂಡಿದ್ದರು.

ಪ್ರಕರಣವನ್ನ ಕೈಗೆತ್ತಿಕೊಂಡ ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಶ್ರೀನಿವಾಸ್ ಮೇಟಿ ಮತ್ತು ತಂಡ ಎಂ.ಪಿ. ಪ್ರಕಾಶ್ ನಗರದ ಬಳಿಯ ಸುಂಕ್ಲಮ್ಮ ದೇವಸ್ಥಾನದ ಬಳಿಯಲ್ಲಿ ಅನುಮಾಸ್ಪದವಾಗಿ ಸಂಚರಿಸುತಿದ್ದ ಈ ಪ್ರಕಾಶನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆಯ ಮೇಲೆ ಇದೇ ತಿಂಗಳು ನಾಲ್ಕನೆ ತಾರೀಕಿನಂದು ಅರವಿಂದ ನಗರದ ಮನೆಯನ್ನ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಇದಾದ ಬಳಿಕ ಬಂದಿತನಿಂದ 5ಲಕ್ಷ 14 ಸಾವಿರ ಮೌಲ್ಯದ ಒಟ್ಟು 128.6 ಗ್ರಾಂ ಚಿನ್ನಾಭರಣ ಮತ್ತು 45ಸಾವಿರ ಹಣವನ್ನ ಸಹ ವಶಕ್ಕೆ ಪಡೆದು ಇನ್ನೂ ಹೆಚ್ಚಿನ ಪ್ರಕರಣದಲ್ಲಿ ಆರೋಪಿ ಭಾಗಿಯಾಗಿರಬಹುದಾ ಎಂದು ವಿಚಾರಣೆ ನಡೆಸಿದ್ದಾರೆ.

ಹೊಸಪೇಟೆ ಡಿ.ವೈ.ಎಸ್ಪಿ ವಿಶ್ವನಾಥ ರಾವ್ ಕುಲಕರ್ಣಿ ಮಾರ್ಗದರ್ಶನದಲ್ಲಿ ನಡೆದ ಈ ತನಿಖೆಯ ಹೊಣೆಯನ್ನ ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಶ್ರೀನಿವಾಸ್ ಮೇಟಿಯವರು ಹೊತ್ತಿದ್ದರು. ಈ ತನಿಖಾ ತಂಡದಲ್ಲಿ  ರಾಘವೇಂದ್ರ, ಮಂಜುನಾಥ ಮೇಟಿ. ಕೊಟ್ರೇಶ್ ಏಳಂಜಿ, ಕೊಟ್ರೇಶ್,ಜಿ, ಅಡಿವೆಪ್ಪ ಬಂಡಿಮೇಗಳ ನಾಗರಾಜ,ಕೆ.ಸುಭಾಸ್, ಚಾಲಕ ನಾಗರಾಜ್ ಜಿ. ತನಿಖಾ ತಂಡದಲ್ಲಿದ್ದು. ಈ ತಂಡಕ್ಕೆ ವಿಜಯನಗರ ಎಸ್ಪಿ ಡಾಕ್ಟರ್ ಅರುಣ್ ಕುಮಾರ್. ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.