You are currently viewing ಗಂಗಾಧರನ ಕೊಲೆ ಪ್ರಕರಣ: ಅಕ್ರಮ ಸಂಭಂದ ಕಲ್ಪಿಸಿ ಮಾತನಾಡಿದ್ದೇ ನೆತ್ತರು ಹರಿಯುವುದಕ್ಕೆ ಕಾರಣವಾಯಿತು.

ಗಂಗಾಧರನ ಕೊಲೆ ಪ್ರಕರಣ: ಅಕ್ರಮ ಸಂಭಂದ ಕಲ್ಪಿಸಿ ಮಾತನಾಡಿದ್ದೇ ನೆತ್ತರು ಹರಿಯುವುದಕ್ಕೆ ಕಾರಣವಾಯಿತು.

ವಿಜಯನಗರ…ಕೊಲೆ ನಡೆದು 24ಗಂಟೆಗಳ ಒಳಗಾಗಿ ಆರೋಪಿಗಳ ಹೆಡೆಮುರಿ ಕಟ್ಟುವ ಮೂಲಕ ನಗರದ ಜನತೆಯ ನೆಮ್ಮದಿ ಕಾಪಾಡುವ ಕೆಲಸಮಾಡಿದ್ದಾರೆ ವಿಜಯನಗರ ಜಿಲ್ಲಾ ಪೊಲೀಸರು.ಹೌದು ನಿನ್ನೆ ಸಂಜೆ ಐದು ಮುವತ್ತರಿಂದ ಆರು ಗಂಟೆಯ ಸುಮಾರಿಗೆ ಹೊಸಪೇಟೆ ನಗರದ ಜನತೆಯನ್ನ ಬೆಚ್ಚಿ ಬೀಳಿಸಿದ್ದ ಬಾರ್ ಕೊಲೆ ಪ್ರಕರಣವನ್ನ ಹೊಸಪೇಟೆ ಪಟ್ಟಣ ಪೊಲೀಸರು ಬೇದಿಸಿದ್ದಾರೆ.

1)ನೆಲ್ಲಕುದುರೆ ಯರಿಸ್ವಾಮಿ ಮತ್ತೊಬ್ಬ 2)ಮಧುಸೂಧನ ಬಂದಿತ ಆರೋಪಿಗಳಾಗಿದ್ದು,ಕೊಲೆಗೆ ಕಾರಣ ಮದುಸೂಧನ್ ಮತ್ತು ಯರಿಸ್ವಾಮಿ ಹೆಂಡತಿಯ ನಡುವೆ ಸಂಭಂದ ಕಟ್ಟಿ ಮಾತನಾಡಿದ್ದೇ ಗಂಗಾಧರನ ಕೊಲೆಗೆ ಪ್ರಮುಖ ಕಾರಣ ಎನ್ನಲಾಗಿದೆ. ತನ್ನ ಹೆಂಡತಿಯ ಬಗ್ಗೆ ಗಂಗಾಧರ ಹಗುರವಾಗಿ ಮಾತನಾಡಿದ್ದ ಎನ್ನುವ ಕಾರಣಕ್ಕೆ ಎದೆಗೆ ಚೂರಿ ಹಿರಿದುಕೊಲೆಮಾಡಿದ್ದ ಯರಿಸ್ವಾಮಿ ಎಂದು ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾಕ್ಟರ್ ಅರುಣ್ ಕೆ.ಸ್ಪಷ್ಟಪಡಿಸಿದ್ದಾರೆ. ಇನ್ನು ಕೊಲೆಯಾದ ಗಂಗಾಧರ ಮತ್ತು ಕೊಲೆಮಾಡಿದ ಈ ಯರಿಸ್ವಾಮಿ ಮತ್ತು ಮಧುಸೂದ ಹೊರಗಿನವರೇನಲ್ಲ, ಹತ್ತಿರದ ಸಂಭಂದಿಗಳೇ ಆಗಿದ್ದಾರೆ, ಕೊಲೆಯಾದ ಗಂಗಾಧರ ಧರ್ಮಸಾಗರ ಗ್ರಾಮದವರಾದರೆ, ಮಧುಸೂಧನ್ ಮತ್ತು ಯರಿಸ್ವಾಮಿ ಪಕ್ಕದ ಪಾಪಿನಾಯಕನಹಳ್ಳಿ ಗ್ರಾಮದ ನಿವಾಸಿಯಾಗಿದ್ದಾರೆ.

ಗೋವಾದ ಕೆಸಿನೊ ಎಜೆಂಟಾಗಿದ್ದ ಗಂಗಾಧರ ನಿನ್ನೆ ಸ್ನೇಹಿತರೊಂದಿಗೆ ಎಣ್ಣೆ ಹೊಡೆಯಲು ಹೊಸಪೇಟೆ ನಗರದ ಬಳ್ಳಾರಿ ರಸ್ತೆಯಲ್ಲಿರುವ ಯಶ್ ಬಾರ್ ಗೆ ಹೋಗಿದ್ದ ಈ ಸಂದರ್ಭದಲ್ಲಿ ಬಂದಿತ ಆರೋಪಿಗಳು ಬಾರ್ ಗೆ ತೆರಳಿ ಗಂಗಾಧರ ಜೊತೆಗೆ ಮಾತಿಗೆ ಇಳಿದು ಚಾಕುವಿನಿಂದ ಎದೆ ಬಾಗಕ್ಕೆ ಚುಚ್ಚಿ ಅಲ್ಲಿಂದ ಪರಾರಿಯಾಗಿದ್ದರು, ಘಟನೆಯ ವಿಡಿಯೊ ಬಾರಲ್ಲಿ ಇದ್ದ ಸಿ.ಸಿ.ಟಿ.ವಿ.ಕ್ಯಾಮರದಲ್ಲಿ ಸೆರೆಯಾಗಿತ್ತು, ವಿಡಿಯೊ ಇಟ್ಟುಕೊಂಡು ತನಿಖೆ ಪ್ರಾರಂಬಿಸಿದ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಶ್ರೀನಿವಾಸ್ ರಾವ್ ನೇತೃತ್ವದ ತನಿಖಾ ತಂಡ ಘಟನೆ ನಡೆದು 24ಗಂಟೆಗಳ ಒಳಗಾಗಿ ಆರೋಪಿಗಳನ್ನ ಪತ್ತೆಹಚ್ಚಿ ಆರೋಪಿಗಳಿಗೆ ಕೈಕೊಳ ತೊಡಿಸಿದ್ದಾರೆ.

ಈ ಸಂಭಂದ ಇಂದು ಪತ್ರಿಕಾಗೋಷ್ಠಿ ನಡೆಸಿದ ವಿಜಯನಗರ ಎಸ್ಪಿ ಡಾಕ್ಟರ್ ಅರುಣ್ ಕೆ.ಅವರು  ಮಾದ್ಯಮಗಳಿಗೆ ವಿಷಯ ಸ್ಪಷ್ಟಪಡಿಸಿದ್ದಾರೆ. ಇನ್ನು ವಿಷೇಶವಾಗಿ ಪ್ರಕರಣವನ್ನ ಬಲುಬೇಗ ಬೇದಿಸಿದ ಎ.ಎಸ್.ಐ.ಕೋದಂಡಪಾಣಿ. ಮತ್ತು ಕಾನ್ಸಟೇಬಲ್ ಗಾಳೆಪ್ಪ ತಿಮ್ಮಪ್ಪ ಅವರ ಕಾರ್ಯ ವೈಖರಿಯನ್ನ ವಿಜಯನಗರ ಎಸ್ಪಿ.ಡಾಕ್ಟರ್ ಅರುಣ್ ಕೆ. ಅವರು ಮೆಚ್ಚಿ ಶ್ಲಾಘಿಸಿದ್ದಾರೆ.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.