You are currently viewing ಮೀಸೆ ಚಿಗುರುವ ಮುನ್ನ ಮನೆ ಕಳ್ಳತನಕ್ಕೆ ಇಳಿದು ಕೈಗೆ ಕೊಳ ತೊಡಿಸಿಕೊಂಡರು.

ಮೀಸೆ ಚಿಗುರುವ ಮುನ್ನ ಮನೆ ಕಳ್ಳತನಕ್ಕೆ ಇಳಿದು ಕೈಗೆ ಕೊಳ ತೊಡಿಸಿಕೊಂಡರು.

ವಿಜಯನಗರ…ನಾಲ್ವರು ಮನೆಗಳ್ಳರನ್ನ ಬಂದಿಸುವಲ್ಲಿ ಕೊಟ್ಟೂರು ಪೊಲೀಸರು ಯಶಸ್ವಿಯಾಗಿದ್ದಾರೆ.1)ಪೋತರಾಜ ತಂದೆ ಬಾಲರಾಜ 30ವರ್ಷ ವಯಸ್ಸು ಕುಪ್ಪಿನಕೇರಿ ಗ್ರಾಮ. 2)ವಿಶ್ವನಾಥ ತಂದೆ ಮೃತ್ಯೂಂಜಯ 23 ವರ್ಷ ವಯಸ್ಸು ಕೊಟ್ಟೂರು ಪಟ್ಟಣ 3)ಜಾಕೀರ್ ಸಾಬ್ ತಂದೆ ಸುಬಾನ್ ಸಾಬ್ 24ವರ್ಷ ಕೊಟ್ಟೂರು ಪಟ್ಟಣ 4)ಸುದರ್ಶನ್ ತಂದೆ ತಿಪ್ಪೇಸ್ವಾಮಿ. 24ವರ್ಷ ವಯಸ್ಸು ಕೊಟ್ಟೂರು ಪಟ್ಟಣ. ಬಂದಿತ ಆರೋಪಿಗಳಾಗಿದ್ದಾರೆ. ಬಂದಿತರಿಂದ 140ಗ್ರಾಂ ಬಂಗಾರ, 200ಗ್ರಾಂ ಬೆಳ್ಳಿ ಆಭರಣ ಸೇರಿದಂತೆ  ಒಂದು ಲಕ್ಷ  ನಗದು ಹಣವನ್ನ ಸಹ ವಶಕ್ಕೆ ಪಡೆದಿದ್ದಾರೆ. ಬಂದಿತರಿಂದ ಒಟ್ಟು 6ಲಕ್ಷ 84ಸಾವಿರದ 200 ರೂಪಾಯಿ ಮೌಲ್ಯದ ನಗ ನಾಣ್ಯ ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಗಳ ಕೈಗೆ ಕೊಳ ತೊಡಿಸಿ ಜೈಲಿಗೆ ಅಟ್ಟಿದ್ದಾರೆ,

ಇಂದು ಬೆಳಗ್ಗೆ ಕೊಟ್ಟೂರು ಪಟ್ಟಣದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸಂಚರಿಸುತಿದ್ದನ್ನ ಕಂಡ ಪೊಲೀಸರು ನಾಲ್ವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಈ ಹಿಂದೆ ನಡೆದ ಎರಡು ಮನೆಗಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಕೊಟ್ಟೂರು ಸಿಪಿಐ.ಸೋಮಶೇಖರ ಕೆಂಚಾರೆಡ್ಡಿ ನೇತೃತ್ವದಲ್ಲಿ ನಡೆದ ಈ ತನಿಖೆಯನ್ನ ಕೂಡ್ಲಿಗಿ ಪಿ.ಎಸ್.ಐ. ಮಾಲಿಕ್ ಸಾಹೇಬ್ ಕಲಾರಿ. ಕೊಟ್ಟೂರು ಪಿ.ಎಸ್.ಐ.ವಿಜಯಕೃಷ್ಣ, ಎ.ಎಸ್.ಐ.ರುದ್ರಮುನಿ, ಬಂಡೆ ರಾಘವೇಂದ್ರ,ತಿಪ್ಪೇಸ್ವಾಮಿ,ಚಂದ್ರಮೌಳಿ,ಬಸವರಾಜ, ಎನ್.ಎಂ.ಸ್ವಾಮಿ,ಮಂಜುನಾಥ,ರೇವಣರಾಧ್ಯ, ಶಂಕರಗೌಡ,ಜಗದೀಶ, ವಿರೇಶ್ ತನಿಖಾ ತಂಡದಲ್ಲಿದ್ದರು.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.