You are currently viewing ರೌಡಿಗಳ ತಳ ಬುಡ ತಪಾಸಣೆಗೆ ಇಳಿದ  ವಿಜಯನಗರದ ಸೈಲೆಂಟ್ ಸಿಂಗಂ.

ರೌಡಿಗಳ ತಳ ಬುಡ ತಪಾಸಣೆಗೆ ಇಳಿದ  ವಿಜಯನಗರದ ಸೈಲೆಂಟ್ ಸಿಂಗಂ.

ವಿಜಯನಗರ..ಸುಮಾರು 900 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನ ಏಕಕಾಲಕ್ಕೆ ವರ್ಗಾವಣೆಗೊಳಿಸಿ ಸುದ್ದಿಯಾಗಿದ್ದ ವಿಜಯನಗರದ ಎಸ್ಪಿ ಸೈಲೆಂಟ್ ಸಿಂಗಂ ಎಂದೇ ಹೆಸರಾಗಿರುವ ಡಾಕ್ಟರ್ ಅರುಣ್ ಕುಮಾರ್ ಕೆ. ಇಂದು ರೌಡಿಗಳ ಜೀವ ಜಾಲಾಡಿದ್ದಾರೆ. ಹೊಸಪೇಟೆ ತಾಲೂಕಿನ ರೌಡಿ ಶೀಟರ್ ಗಳ ಪರೇಡ್ ನಡೆಸಿದ ಎಸ್ಪಿ ಅರುಣ್.ಕೆ.

ನಗರದ ಪಟ್ಟಣ ಪೊಲೀಸ್ ಠಾಣೆಯ ಆವರಣದಲ್ಲಿ ಪರೇಡ್ ನಡೆಸಿ ಗಂಭೀರ ಪ್ರಕರಣಗಳಲ್ಲಿ ಬಾಗಿಯಾಗಿದ್ದ ರೌಡಿಗಳ ಕುಕ್ಕೃತ್ಯಕ್ಕೆ ಖಡಿವಾಣ ಹಾಕುವ ಯೋಜನೆ ರೂಪಿಸಲು ಮುಂದಾಗಿದ್ದಾರೆ. ಈ ಸಂಭಂದ ಹೊಸಪೇಟೆ ತಾಲೂಕಿನ 206 ಜನ ರೌಡಿ ಸೀಟರ್ ಗಳನ್ನ ಗುರುತಿಸಿದ್ದ ಎಸ್ಪಿ, ನಗರದ ಪಟ್ಟಣ ಪೊಲೀಸ್ ಠಾಣೆಯ ಆವರಣದಲ್ಲಿ ಇಂದು ಸೇರಲು ಸೂಚಿಸಿದ್ದರು. ಆದರೆ ಎಸ್ಪಿ ಸೂಚನೆಯ ಇದ್ದರೂ 100 ಜನ ರೌಡಿ ಶೀಟರ್ ಗಳು ಗೈರಾಗಿದ್ದರು.

ಹಾಗಾಗಿ ಗೈರಾಗಿರುವ ರೌಡಿಗಳ ಮನೆ ಬಾಗಿಲಿಗೆ ಹೋಗಿ ಎತ್ತಿ ಹಾಕಿಕೊಂಡು ಬಂದು ವಿಚಾರಣೆ ನಡೆಸುವುದಾಗಿ ಎಚ್ಚರಿಕೆ ಹೊರಡಿಸಿದ್ದಾರೆ.ನಂತರ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಎಸ್ಪಿ,  ಕಮ್ಯೂನಲ್ ಗೂಂಡಾಗಳಿಗೆ ಖಡಕ್ ವಾರ್ನ್ ಮಾಡಿದ್ದೇವೆ, ಅದರ ಜೊತೆ ರೆಗ್ಯೂಲರ್ ಗುಂಡಾಗಳಿಗೆ ಕೂಡ ಎಚ್ಚರಿಕೆ ಕೊಡಲಾಗಿದೆ. ಇನ್ನು ಸರಗಳ್ಳರು ಮತ್ತು ರಾಬರಿ ಪ್ರಕರಣಗಳಲ್ಲಿ ಬಾಗಿಯಾಗಿರುವವರನ್ನ ಪ್ರತ್ಯೇಕ ಕರೆಸಿ ಎಚ್ಚರಿಕೆ ಕೊಡಲಾಗುತ್ತೆ ಎಂದು ಮಾಹಿತಿ ನೀಡಿದರು, ಇನ್ನು  ಕುಖ್ಯಾತ ರೌಡಿಗಳ ಗಡಿಪಾರು ವಿಚಾರವಾಗಿ ಮಾತನಾಡಿದ ಎಸ್ಪಿ ರೌಡಿಶೀಟರ್ ಗಳನ್ನ ಗಡಿಪಾರು ಮಾಡುವ ನಿರ್ಧಾರ ಮಾಡಿಲ್ಲ, ಆದ್ರೆ ಔಟ್ ಡೋರ್ ಮಾಡೋದಕ್ಕೆ ಸಿಬ್ಬಂದಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಒಂದು ವೇಳೆ ಮುಂದೆ ಇಲ್ ಲೀಗಲ್ ಆ್ಯಕ್ಟೀವಿಟೀಸ್ ಕಂಡು ಬಂದ್ರೆ ಕಠಿಣ ಕ್ರಮ ಫಿಕ್ಸ್ ಎಂದು ಎಚ್ಚರಿಕೆ ಸಂದೇಶವನ್ನ ಸಮಾಜ ಘಾತುಕರಿಗೆ ಈ ಮೂಲಕ ರವಾನಿಸಿದ್ದಾರೆ ಎಸ್ಪಿ. ವಿಜಯನಗರ ಜಿಲ್ಲಾ ಕೇಂದ್ರ ಆದ ನಂತರ ಎಸ್ಪಿ ನಡೆಸಿದ ಮೊದಲ ರೌಡಿ ಶೀಟರ್ ಗಳ ಪರೇಡ್ ಇದಾಗಿದ್ದು, ಕುಖ್ಯಾತರ ಮುಖಗಳು ಬಯಲಾಗಿವೆ.

ವೀಡಿಯೋ ನೋಡಲು ಈ ಕೆಳಗಿನ ಲಿಂಕ್ ಒತ್ತಿರಿ.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.