You are currently viewing ಚಿನ್ನದ ಸರ ತೋರಿಸಿ ಢಕಾಯಿತಿಮಾಡಿದವರು ಅಂದರ್.

ಚಿನ್ನದ ಸರ ತೋರಿಸಿ ಢಕಾಯಿತಿಮಾಡಿದವರು ಅಂದರ್.

ವಿಜಯನಗರ (ಹೊಸಪೇಟೆ) ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಚಾಲಕರನ್ನು ಬೆದರಿಸಿ ಹಣ ದೋಚಿದ ಡಕಾಯಿತರನ್ನ ಬಂದಿಸುವಲ್ಲಿ ಮರಿಯಮ್ಮನಹಳ್ಳಿ ಪಟ್ಟಣದ ಪೊಲೀಸರು ಯಶಸ್ವಿಯಾಗಿದ್ದಾರೆ,

ಚಿನ್ನದ ಆಸೆ ತೋರಿಸಿ ಹಣ ದೋಚುತ್ತಿದ್ದ ಡಕಾಯಿತರ ಪೈಕಿ ಭತ್ತನ ಹಳ್ಳಿ ಗ್ರಾಮದ ಕಾವಾಡಿ ರಮೇಶ್(35) ಮತ್ತು ಶಿವಪುರ ತಾಂಡದ ಕೊರಚರ ಮಂಜುನಾಥ(38) ಎಂಬ ಇಬ್ಬರು ಆರೋಪಿಗಳನ್ನ ಬಂಧಿಸಿದ್ದು, ಬಂದಿತರಿಂದ 12 ಸಾವಿರ ನಗದು ವಶಪಡಿಸಿಕೊಂಡು,ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 

ಪಟ್ಟಣದ ಬಳಿಯ ರಾಷ್ಟ್ರೀಯ ಹೆದ್ದಾರಿ 50ರ ರಸ್ತೆ ಬದಿಯಲ್ಲಿ ಇರುವ ಚೌದ್ರಿಡಾಭದ ಬಳಿಯಲ್ಲಿ, ಆಂಧ್ರಪ್ರದೇಶದ ಪಾಲ್ಯಂ ಗ್ರಾಮದ ಬ್ರಹ್ನರಾಜು ಮತ್ತು ಆತನ ಸ್ನೇಹಿತನಿಗೆ ಆರೋಪಿಗಳು ಚಿನ್ನದ ಸರದ ಸೇತೋರಿಸಿ ಕಡಿಮೆ ಬೆಲೆಗೆ ಮಾರಾಟಮಾಡುವುದಾಗಿ ಆಸೆ ಹುಟ್ಟಿಸಿದ್ದಾರೆ, 

ದೂರು ದಾರ ಬ್ರಹ್ಮರಾಜು ಮತ್ತು ಆತನ ಸ್ನೇಹಿತನ ಚಿನ್ನ ಖರೀದಿಸಲು ಹಣ ತೆಗೆಯುತಿದ್ದಂತೆ, ಹಣ ನೋಡಿದ ದರೊಡೆಕೋರರು ಇಬ್ಬರ ಮೇಲೆ ಹಲ್ಲೆ ನಡೆಸಿ, ನಂತರ ಚಾಕು ತೋರಿಸಿ ಹಣ ಕಸಿದುಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ.

ಹಲ್ಲೆಗೆ ಒಳಗಾದ ಬ್ರಹ್ಮರಾಜು ಮತ್ತು ಆತನ ಸ್ನೇಹಿತ ಮರಿಯಮ್ಮನಹಳ್ಳಿ ಪಟ್ಟಣ ಪೊಲೀಸ್ ಠಾಣೆಗೆ ದೂರು ಕೊಟ್ಟು ಡಕಾಯಿತರ ಪತ್ತೆಗೆ ಮನವಿ ಮಾಡಿಕೊಂಡಿದ್ದಾರೆ. ಪ್ರಕರಣವನ್ನ ಕೈಗೆತ್ತಿಕೊಂಡ ಹಗರಿಬೊಮ್ಮನಹಳ್ಳಿ ಸಿ.ಪಿ.ಐ.ಮಂಜಣ್ಣ, ಹಾಗೂ ಕೊಟ್ಟರು ಸಿ.ಪಿ.ಐ.ಸೋಮಶೇಖರ ಕೆಂಚಾರೆಡ್ಡಿ ಮತ್ತು ಮರಿಯಮ್ಮನಹಳ್ಳಿ ಪಟ್ಟಣದ ಠಾಣೆಯ ಪಿ.ಎಸ್.ಐ ಮೀನಾಕ್ಷಿ, ಹನುಮಂತಪ್ಪ ಒಳಗೊಂಡ ತನಿಖಾ ತಂಡ ಆರೋಪಿಗಳನ್ನ ಬಂದಿಸುವಲ್ಲಿ ಯಶಸ್ವಿಯಾಗಿದೆ. 

ಸಿಬ್ಬಂದಿಗಳಾದ ಪ್ರವೀಣ, ಹೆಗ್ಗಪ್ಪ, ಪ್ರಕಾಶ, ದೇವೇಂದ್ರ, ನಂದೀಶ, ವಿಶ್ವನಾಥ ತನಿಖಾ ತಂಡದಲ್ಲಿದ್ದರು. ಪ್ರಕರಣವನ್ನ ಬೇದಿಸಿದ ತಂಡಕ್ಕೆ ವಿಜಯನಗರ ಎಸ್ಪಿ ಅರುಣ್ ಕುಮಾರ್ ಕೆ. ಅಭಿನಂದನೆ ಸಲ್ಲಿಸಿದ್ದಾರೆ.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.

.