You are currently viewing ತುಂಗಭದ್ರ ಜಲಾಶಯ ಭರ್ಥಿಗೆ  ಕ್ಷಣಗಣನೆ, ಯಾವುದೇ ಸಂದರ್ಭದಲ್ಲಿ ಭಾರಿ ಪ್ರಮಾಣದ ನೀರು ನದಿಗೆ ಹರಿಬಿಡುವ ಎಚ್ಚರಿಕೆ.

ತುಂಗಭದ್ರ ಜಲಾಶಯ ಭರ್ಥಿಗೆ  ಕ್ಷಣಗಣನೆ, ಯಾವುದೇ ಸಂದರ್ಭದಲ್ಲಿ ಭಾರಿ ಪ್ರಮಾಣದ ನೀರು ನದಿಗೆ ಹರಿಬಿಡುವ ಎಚ್ಚರಿಕೆ.

ವಿಜಯನಗರ… ಮಲೆನಾಡಿನಲ್ಲಿ ಮಳೆ ಅಬ್ಬರ ಹೆಚ್ಚಾದ ಪರಿಣಾಮ ವಿಜಯನಗರ ಜಿಲ್ಲೆಯ ತುಂಗಭದ್ರ ಜಲಾಶಯಕ್ಕೆ ಬಾರಿ ಪ್ರಮಾಣದ ನೀರು ಹರಿದು ಬರುತ್ತಿದೆ‌. ಇಂದು ಸಂಜೆ ಅಥವಾ ನಾಳೆ ಜಲಾಶಯ ಭರ್ಥಿಯಾಗುವ ಮುನ್ಸೂಚನೆ ಇರುವ ಕಾರಣಕ್ಕೆ ಜಲಾಶಯದಿಂದ ನದಿಗೆ ಯಾವುದೇ ಸಂದರ್ಭದಲ್ಲಿ ನೀರನ್ನ ಹರಿಬಿಡುವ ಸಾಧ್ಯತೆ ಇದೆ ಎಂದು ತುಂಗಭದ್ರ ಬೋರ್ಡ್ ಎಚ್ಚರಿಕೆ ಸಂದೇಶವನ್ನ ರವಾನಿಸಿದೆ.

ಜಲಾಶಯದ ಕೆಳಬಾಗದಲ್ಲಿರುವ  ವಿಜಯನಗರ ಮತ್ತು ಬಳ್ಳಾರಿ ಹಾಗೂ ಕೊಪ್ಪಳ, ರಾಯಚೂರು ಹಾಗೂ ಕರ್ನೂಲು ಜಿಲ್ಲೆಗಳ ಜಿಲ್ಲಾಡಳಿತಕ್ಕೆ ಟಿ.ಬಿ.ಬೋರ್ಡ್ ಮನವರಿಕೆಮಾಡಿದೆ. ಸದ್ಯಕ್ಕೆ ತುಂಗಭದ್ರ ಜಲಾಶಯದಲ್ಲಿ 75 ಟಿ.ಎಂ.ಸಿ.ಯಷ್ಟು ನೀರು ಸಂಗ್ರಹವಾಗಿದ್ದು, ಒಂದು ಲಕ್ಷ  ಕ್ಯೂಸೆಕ್ಸ್  ನಷ್ಟು ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಹಾಗಾಗಿ ಜಲಾಶಯದ ನೀರಿನ ಮಟ್ಟ ಗಂಟೆ ಗಂಟೆಗೆ ಹೆಚ್ಚಳವಾಗುತ್ತಿದೆ. ಇಷ್ಟೇ ಪ್ರಮಾಣದ ಒಳ ಹರಿವು ಮುಂದುವರೆದರೆ ನಾಳೆ ಬೆಳಗ್ಗೆ ಅಥವಾ ಸಂಜೆ ಜಲಾಶಯದಿಂದ ಬಾರಿ ಪ್ರಮಾಣದ ನೀರನ್ನ ನದಿಗೆ ಹರಿಬಿಡುವ ಮೂಲಕ ಜಲಾಶಯದ ನೀರಿನ ಮಟ್ಟವನ್ನ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ತುಂಗಭದ್ರ ಜಲಾಶಯ ಆಡಳಿತ ಮಂಡಳಿಗೆ ಇದೆ.

ಈ ಕಾರಣಕ್ಕೆ ತುರ್ತಾಗಿ ಎಚ್ಚರಿಕೆ ಸಂದೇಶ ರವಾನಿ ಮಾಡಿ ಪ್ರವಾಹ ಎದುರಿಸಲು ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಲು ಜಲಾಶಯದ ನದಿ ಪಾತ್ರದ ಜಿಲ್ಲಾಡಳಿತಗಳಿಗೆ ಟಿ.ಬಿ.ಬೋರ್ಡ್ ಮುನ್ಸೂಚನೆ ನೀಡಿದೆ. ತುಂಗಭದ್ರ ಜಲಾಶಯದ ಗರಿಷ್ಠ ನೀರಿನ ಮಟ್ಟ 1633 ಅಡಿಗಳಿದ್ದು ಇಂದು 1632 ಅಡಿಗಳಿಗೆ ಬಂದು ತಲುಪಿದೆ. ಅದೇರೀತಿ 105.788 ಟಿ.ಎಂ.ಸಿ‌. ನೀರು ಸಂಗ್ರಹಣ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಇದೀಗ 75 ಟಿ.ಎಂ.ಸಿ. ನೀರು ಸಂಗ್ರಣೆಯಾಗಿದೆ. ಈ ಕಾರಣದಿಂದ ಜಲಾಶಯದಿಂದ ನದಿಗೆ ಯಾವುದೇ ಕ್ಷಣದಲ್ಲೂ ನೀರನ್ನ ಹರಿಬಿಡುವ ಸಾಧ್ಯತೆ ಇದೆ.

ಜಲಾಶಯದಿಂದ ಒಂದು ಲಕ್ಷ ಕ್ಯೂಸೆಕ್ಸ್ ನೀರು ಹರಿಬಿಟ್ಟರೆ ವಿಶ್ವ ವಿಖ್ಯಾತ ಹಂಪಿಯ ನದಿ ದಡದಲ್ಲಿರುವ ಕೆಲವು ಸ್ಮಾರಕಗಳು ಮುಳುಗಡೆ ಆಗುವ ಸಾಧ್ಯತೆ ಇದೆ. ಅದೇರೀತಿ ಕಂಪ್ಲಿ ಗಂಗಾವತಿ ಸಂಪರ್ಕ ಸೇತುವೆ ಮುಳುಗಡೆಯಾಗಿ ರಸ್ತೆ ಸಂಚಾರ ಬಂದಾಗಬಹುದು ಅದೇರೀತಿ ಕೋಟೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಕೂಡ ನೀರು ನುಗ್ಗುವ ಸಾಧ್ಯತೆ ಇದೆ. ಈ ಕಾರಣಕ್ಕೆ ಈ ಬಾಗದಲ್ಲಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವುದು ವಿಜಯನಗರ ಮತ್ತು ಬಳ್ಳಾರಿ ಜಿಲ್ಲಾಡಳಿತಕ್ಕೆ ಅವಶ್ಯಕವಾಗಿದೆ.

ವರದಿ..ಸುಬಾನಿ ಪಿಂಜಾರ ಹಂಪಿ‌ ಮಿರರ್ ವಿಜಯನಗರ.