You are currently viewing ಗೂಡ್ಸ್ ವಾಹನ ಪಲ್ಟಿ 23 ಶಾಲಾ ವಿಧ್ಯಾರ್ಥಿಗಳಿಗೆ ಗಾಯ. ಮಕ್ಕಳ ಜೀವದ ಜೊತೆ ಚಲ್ಲಾಟ ಸರಿಯೇ..?

ಗೂಡ್ಸ್ ವಾಹನ ಪಲ್ಟಿ 23 ಶಾಲಾ ವಿಧ್ಯಾರ್ಥಿಗಳಿಗೆ ಗಾಯ. ಮಕ್ಕಳ ಜೀವದ ಜೊತೆ ಚಲ್ಲಾಟ ಸರಿಯೇ..?

ವಿಜಯನಗರ.. ಕ್ರೀಡಾಕೂಟಕ್ಕೆ ಮಕ್ಕಳನ್ನ ಕರೆದೊಯ್ಯುತಿದ್ದ ಗೂಡ್ಸ್ ವಾಹನ ಪಲ್ಟಿಯಾದ ಪರಿಣಾಮ 23 ಮಕ್ಕಳಿಗೆ ಗಾಯಗಳಾದ ಘಟನೆ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಇಟಿಗಿ ಗ್ರಾಮದ ಬಳಿ ಇಂದು ನಡೆದಿದೆ. ತಾಲೂಕಿನ ಮುಸುಕಿನ ಕಲ್ಲಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ವಿಧ್ಯಾರ್ಥಿಗಳನ್ನ ಉತ್ತಂಗಿ ಗ್ರಾಮದಲ್ಲಿ ನಡೆಯುತಿದ್ದ ಕ್ರೀಡಾ ಕೂಟಕ್ಕೆ ಗೂಡ್ಸ್ ವಾಹನದಲ್ಲಿ ಕರೆದೊಯ್ಯಲಾಗುತಿತ್ತು.

ಎಂ.ಕಲ್ಲಹಳ್ಳಿ ಗ್ರಾಮದಿಂದ ನಾಲ್ಕೈದು ಕಿಲೋಮಿಟರ್ ದೂರ ವಾಹನ ಹೋಗುತಿದ್ದಂತೆ ಮಳೆ ಪ್ರಮಾಣ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ವಾಹನ ರಸ್ತೆ ಬದಿಯಲ್ಲಿ ಚಲಿಸುತಿದ್ದಂತೆ ಗೂಡ್ಸ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಏಕಾ ಏಕಿ ಪಲ್ಟಿಯಾಗಿದೆ‌. ಇದರ ಪರಿಣಾಮ ಗೂಡ್ಸ್ ವಾಹನದಲ್ಲಿ ಇದ್ದ 23ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ, ಸ್ಥಳದಲ್ಲಿ ಇದ್ದ ಕೆಲವು ಸ್ಥಳೀಯರು ಮಕ್ಕಳನ್ನ ಹೂವಿನ ಹಡಗಲಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ, ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಮುಸುಕಿನ ಕಲ್ಲಹಳ್ಳಿ ಶಾಲೆ ಮುಖ್ಯ ಶಿಕ್ಷಕ ಐ ಬಸಪ್ಪ ಮತ್ತು ಇಲ್ಲಿನ ಶಿಕ್ಷಣ ಇಲಾಖೆಯ ನಿರ್ಲಕ್ಷವೇ ಘಟನೆಗೆ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.

ತಮ್ಮ ಮಕ್ಕಳನ್ನ ಆದರೆ ಹೀಗೆ ಗೂಡ್ಸ್ ವಾಹನದಲ್ಲಿ ಕ್ರೀಡಾಕೂಟಕ್ಕೆ ಕರೆದೊಯ್ದುತ್ತಾರ ಎಂದು ಪ್ರಶ್ನಿಸಿದ್ದಾರೆ. ಗೂಡ್ಸ್ ವಾಹನದಲ್ಲಿ ಜನರ ಪ್ರಯಾಣ ನಿಷೇದ ಇದ್ದರು ಶಿಕ್ಷಕರು ಮಕ್ಕಳನ್ನ ಗೂಡ್ಸ್ ವಾಹನದಲ್ಲಿ ಮಕ್ಕಳನ್ನ ಕರೆದೊಯ್ದು ಮಕ್ಕಳ ಜೀವದ ಜೊತೆ ಚಲ್ಲಾಟ ಆಡಿದ್ದಾರೆ, ಇಂತಾ ಶಿಕ್ಷಕರ ವಿರುದ್ದ ಮತ್ತು ಶಾಲಾ ಮುಖ್ಯ ಗುರುಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಮಕ್ಕಳ ಅದೃಷ್ಟ ಕೈ ಕೊಟ್ಟಿದ್ದರೆ ದೊಡ್ಡ ದುರಂತವೇ ಸಂಭವಿಸುತಿತ್ತು.

ಮಕ್ಕಳ ದೈಹಿಕ ಶಕ್ತಿಯನ್ನ ವೃದ್ದಿಸುವ ದೃಷ್ಠಿಯಿಂದ ಹಮ್ಮಿಕೊಳ್ಳುವ ಇಂತಾ ಕ್ರೀಡಾಕೂಟಕ್ಕೆ ಕರೆದೊಯ್ದು ಮಕ್ಕಳನ್ನ ಶಾಸ್ವತ ಅಂಗವಿಲರನ್ನಾಗಿ ಮಾಡುತಿದ್ದರು ಶಿಕ್ಷಕರು ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಸಂಭಂದ ಪಟ್ಟ ಅಧಿಕಾರಿಗಳು ಮತ್ತು ಸರ್ಕಾರ ಈರೀತಿಯ ದುರಂತ ಮತ್ತೊಮ್ಮೆ ನಡೆಯದಂತೆ ಯೋಜನೆ ರೂಪಿಸಬೇಕು, ಕ್ರೀಡಾಕೂಟಕ್ಕೆ ಮಕ್ಕಳನ್ನ ಕರೆಯ್ಯುವ ಸಂಭಂದ ಪ್ರಯಾಣಿಕರ ವಾಹನ ಬಳಕೆ ಖಡ್ಡಾಯಗೊಳಿಸಬೇಕು. ಇದನ್ನ ಕಡೆಗಣಿಸಿದ ಅಧಿಕಾರಿಗಳ ವಿರುದ್ದ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕಿದೆ.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.