You are currently viewing ಸಚಿವ ಆನಂದ್ ಸಿಂಗ್ ಸೇರಿದಂತೆ ನಾಲ್ವರ ವಿರುದ್ದ ಬಿತ್ತು ಗುನ್ನಾ…

ಸಚಿವ ಆನಂದ್ ಸಿಂಗ್ ಸೇರಿದಂತೆ ನಾಲ್ವರ ವಿರುದ್ದ ಬಿತ್ತು ಗುನ್ನಾ…

ವಿಜಯನಗರ… (ಹೊಸಪೇಟೆ) ಜೀವ ಬೆದರಿಕೆ ಆರೋಪದ ಹಿನ್ನೆಲೆ ಸಚಿವ ಆನಂದ್ ಸಿಂಗ್ ಸೇರಿದಂತೆ ನಾಲ್ವರ ವಿರುದ್ದ ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಪ್.ಐ.ಆರ್. ದಾಖಲಾಗಿದೆ.

1)ಸಚಿವ ಆನಂದ್ ಸಿಂಗ್ ಹೊಸಪೇಟೆ.

2)ಮರಿಯಪ್ಪ.

3)ಎನ್.ಕೆ.ಹನುಮಂತಪ್ಪ.

4)ಹುಲುಗಪ್ಪ ಎಂಬುವವರ ಮೇಲೆ ದೂರು ದಾಖಲಾಗಿದೆ. 

ಸಚಿವ ಆನಂದ್ ಸಿಂಗ್ ಮತ್ತು ಅವರ ಇಪ್ಪತ್ತೈದಕ್ಕು ಹೆಚ್ಚು ಬೆಂಬಲಿಗರು ನಮ್ಮ ಮನೆಗೆ ಬಂದು ನಮ್ಮ ಕುಟುಂಬವನ್ನ ಜೀವಂತವಾಗಿ ಸುಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ ಹಂಪಿ ರಸ್ತೆಯ ನಿವಾಸಿ ಡಿ.ಪೋಲಪ್ಪ ಕುಟುಂಬ ವಿಜಯನಗರ ಎಸ್ಪಿ ಕಛೇರಿಯ ಮುಂದೆ ಮನೆ ಮಂದಿಯಲ್ಲ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಎತ್ನಿಸಿದ್ದರು. ಸ್ಥಳದಲ್ಲೇ ಇದ್ದ ಪೊಲೀಸ್ ಸಿಬ್ಬಂದಿಗಳು ಆತ್ಮಹತ್ಯೆ ತಡೆದು ಕೂಡಲೆ ಮೈಮೇಲೆ ನೀರು ಸುರಿದು, ಅಲ್ಲಿಂದ ಹೊಸಪೇಟೆ ಸರ್ಕಾರಿ ನೂರು ಹಾಸಿಗೆ ಆಸ್ಪತ್ರೆಗೆ ದಾಖಲಿಸಿದ್ದರು. 

ಪ್ರಕರಣಕ್ಕೆ ಸಂಭಂದಿಸಿದಂತೆ ಆಸ್ಪತ್ರೆಗೆ ಹೋಗಿ ಡಿ.ಪೋಲಪ್ಪ ಮತ್ತು ಕುಟುಂಭಸ್ಥರಿಂದ ದೂರು ಪಡೆದಿರುವ ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಶ್ರೀನಿವಾಸ್ ಮೇಟಿಯವರು ದೂರಿನ ಆದಾರದ ಮೇಲೆ 504.506. ರೆ/ವಿ.34 ಐ.ಪಿ.ಸಿ. ಮತ್ತು 3(2)  (5A) ಎಸ್ಸಿ.ಎಸ್ಟಿ. ಆಕ್ಟ್.1989  ಅಡಿಯಲ್ಲಿ ದೂರು ದಾಖಲು ಮಾಡಲಾಗಿದೆ.  ಇನ್ನು ಅದೇ ರೀತಿಯಾಗಿ ಎಸ್ಪಿ ಕಛೇರಿಯ ಮುಂದೆ ಆತ್ಮಹತ್ಯೆಗೆ ಎತ್ನಿಸಿದ ಡಿ.ಪೋಲಪ್ಪ ಸೇರಿದಂತೆ ಆರು ಜನ ಕುಟುಂಬದ ಸದಸ್ಯರ ವಿರುದ್ದ ಕೂಡ 309 ರೆವಿ149 ಸೆಕ್ಷನ ಅಡಿಯಲ್ಲಿ  ಪ್ರಕರಣ ದಾಖಲು ಮಾಡಲಾಗಿದೆ. ಸದ್ಯಕ್ಕೆ ಎರಡು ಪ್ರಕರಣಕ್ಕೆ ಸಂಭಂದಿಸಿದಂತೆ ತನಿಖೆ ಕೈಗೊಂಡಿರುವ ವಿಜಯನಗರ ಪೊಲೀಸರು ಆರೋಪಿತರನ್ನ ಬಂದಿಸುತ್ತಾರೆ ಅಥವಾ ಈ ಪ್ರಕರಣ ಕೇವಲ ಎಪ್.ಐ.ಆರ್.ಗೆ ಮಾತ್ರ ಸೀಮಿತವಾಗುತ್ತಾ ಕಾದು ನೋಡಬೇಕಿದೆ.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.