You are currently viewing ಕಾಲೇಜು ಮೆಟ್ಟಿಲು ಹತ್ತಬೇಕಿದ್ದ ಕಾಲುಗಳು ಜೈಲು ದಾರಿ ಹಿಡಿದವು ಯಾಕೆ..?

ಕಾಲೇಜು ಮೆಟ್ಟಿಲು ಹತ್ತಬೇಕಿದ್ದ ಕಾಲುಗಳು ಜೈಲು ದಾರಿ ಹಿಡಿದವು ಯಾಕೆ..?

ವಿಜಯನಗರ…ಇತ್ತೀಚೆಗೆ ವಿಜಯನಗರ ಜಿಲ್ಲೆಯಲ್ಲಿ ನಕಲಿ ಬಂಗಾರದ ಹಾವಳಿ ಹೆಚ್ಚಾಗಿದೆ‌. ಕಳೆದ ಕೆಲವು ತಿಂಗಳ ಹಿಂದೆ ಹರಪನಹಳ್ಳಿ ತಾಲೂಕಿನಲ್ಲಿ ನಕಲಿ ಬಂಗಾರ ಮಾರಾಟಮಾಡಿ ಮೋಸಮಾಡಿದ್ದವರು ಪೊಲೀಸರ ಕೈಯಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಆ ಸುದ್ದಿ ಜನಗಳಿಂದ ಮರೆಮಾಚುವ ಮುಂಚೆಯೇ ನಕಲಿ ಬಂಗಾರ ತಯಾರಿಸಿ ವಂಚನೆಮಾಡಲು ಮುಂದಾಗಿದ್ದ ಅಕ್ಕಸಾಲಿಗರು ಕೂಡ ಪೊಲೀಸರ ಅಥಿತಿಯಾಗಿದ್ದು ಎಲ್ಲರಿಗೂ ಗೊತ್ತೇ ಇದೆ.

ಇದೀಗ ಇಂತಾ ನಕಲಿ ಚಿನ್ನ ಮಾರಾಟಮಾಡುವ ವಂಚನೆ ಪ್ರಕರಣದಲ್ಲಿ ಕಾಲೇಜು ವಿಧ್ಯಾರ್ಥಿಯೊಬ್ಬ ಬಂದಿಯಾಗಿರುವ ಸುದ್ದಿ ಬೆಳಕಿಗೆ ಬಂದಿದೆ. ಹೌದು ಸುದೀಪ್ ಎನ್ನುವ 19ರ ಪ್ರಾಯದ ಪಿ.ಯು.ಸಿ.ವಿಧ್ಯಾರ್ಥಿ ಮೊನ್ನೆ, ಅಂದರೆ ಇದೇ ತಿಂಗಳು ಏಳನೆ ತಾರೀಕಿನಂದು ಮರಿಯಮ್ಮನಹಳ್ಳಿ ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ. ಹೌದು ಹಿತ್ತಾಳೆ ಮಿಶ್ರಿತ ನಾಣ್ಯಗಳನ್ನ ಚಿನ್ನ ಎಂದು ನಂಬಿಸಿ ಮಾರಾಟಮಾಡಲು ಹೋಗಿ ಸಿಕ್ಕಿ ಹಾಕಿಕೊಂಡಿರುವ ಈ ಸುದೀಪ್ ಜೈಲಿನ ಕಂಬಿಯ ಹಿಂದೆ ಸರಿದಿದ್ದಾನೆ.

ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪ್ರದೇಶವೊಂದರಲ್ಲಿ ನಕಲಿ ಚಿನ್ನವನ್ನ ಅಸಲಿ ಚಿನ್ನ ಎಂದು ನಂಬಿಸಿದ ಹೊಸಪೇಟೆ ತಾಲೂಕಿನ ಗರಗ ಗ್ರಾಮದ ಸುದೀಪ್ ಮತ್ತು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಚಿಕ್ಕ ಕುರುಬರ ಹಳ್ಳಿಯ ನಿವಾಸಿಯಾಗಿರುವ ಮತ್ತೊಬ್ಬ ಸುದೀಪ್  ಮರಿಯಮ್ಮನಹಳ್ಳಿ ಪೊಲೀಸರಿಗೆ ಸೆರೆ ಸಿಕ್ಕಿದ್ದಾರೆ.

ಮರಿಯಮ್ಮನಹಳ್ಳಿ ಪಿ.ಎಸ್.ಐ.ಹನುಮಂತಪ್ಪ ತಳವಾರ ಅವರು ಗಸ್ತಿನಲ್ಲಿದ್ದಾಗ ಮರಿಯಮ್ಮನಹಳ್ಳಿ ಸರ್ಕಲ್ ಬಳಿ ಈ ಇಬ್ಬರು ಆಪಾದಿತರು ನಕಲಿ ಚಿನ್ನ ಮಾರಾಟಮಾಡುವ ವಿಷಯ ತಿಳಿದು ಈ ಇಬ್ಬರನ್ನ ಬಂದಿಸಿ ವಿಚಾರಣೆಗೆ ಒಳಪಡಿಸಿದ್ದಾರೆ, ಈ ಸಂದರ್ಭದಲ್ಲಿ ಇವರ ಬಳಿ 300 ಗ್ರಾಂನಷ್ಟು ನಕಲಿ ಚಿನ್ನದ ನಾಣ್ಯಗಳು ಸಿಕ್ಕಿವೆ.  ಆನಂತರ ಇವರ ಬಳಿ ಇದ್ದ ಎರಡು ಮೊಟರ್ ಬೈಕ್ ಮತ್ತು ಎರಡು ಮೊಬೈಲ್ ಪೊನಗಳನ್ನ ವಶಕ್ಕೆ ಪಡೆದು ಇವರಿಬ್ಬರ ವಿರುದ್ದ ವಂಚನೆ ಪ್ರಕರಣ ದಾಖಲಿಸಿದ್ದಾರೆ.

ಇತ್ತೀಚೆಗೆ ಇದೇ ನಕಲಿ ಚಿನ್ನ ಪ್ರಕರಣದಲ್ಲಿ ಗುಡೇಕೋಟೆ ಪೊಲೀಸರು ಬಂದಿಸಿದ ಆರೋಪಿಗಳಲ್ಲಿ ಮೂರ ರಿಂದ ನಾಲ್ಕು ಜನ ಆರೋಪಿಗಳು 18 ರಿಂದ 24ವರ್ಷ ವಯಸ್ಸಿನೊಳಗಿದ್ದರು. ಇದೀಗ ಇಂದಿನ ಪ್ರಕರಣದಲ್ಲಿ ಸಿಕ್ಕಿರುವ ಈ ಇಬ್ಬರು ಆರೋಪಿಗಳು ಕೂಡ ಇದೇ ವಯಸ್ಸಿನವರಾಗಿರುವುದು ದುರಂತದ ವಿಚಾರ.
ಓದಿ ವಿಧ್ಯಾವಂತರಾಗಿ ಒಂದೊಳ್ಳೆಯ ಕೆಲಸಮಾಡಬೇಕಾಗಿದ್ದ ಯುವ ಜನತೆ ಇಂತಾ ವಂಚನೆ ಕೆಲಸಕ್ಕೆ ಇಳಿಯುತ್ತಿರುವುದು ದುರಂತದ ವಿಚಾರವೆ ಸರಿ.

ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.