ವಿಜ್ಞಾನ ತಂತ್ರಜ್ಞಾನ ಎಷ್ಠೇ ಮುಂದುವರೆದಿದ್ರೂ ಬಡವನ ಬದುಕು ಮಾತ್ರ ಇಂದಿಗೂ ಬದಲಾಗಿಯೇ ಇಲ್ಲ, ಆದರೆ ಇತ್ತೀಚೆಗೆ ಹಣ ಇದ್ದವರು ಹೊಸ ಆಧೋನಿಕ ಯಂತ್ರಗಳ ಖರೀದಿಸಿ ತಮ್ಮ ಕೆಲಸದ ಹೊರೆಗಳನ್ನ ಕಡಿಮೆಮಾಡಿಕೊಂಡ್ರೆ ಇತ್ತ ಬಡ ಜನರು ಮಾತ್ರ ಕತ್ತೆಯ ರೀತಿಯಲ್ಲಿ ಭಾರವನ್ನ ಹೊರಲೇಬೇಕು ಎಳೆಯಲೆಬೇಕಾದ ಪರಿಸ್ಥಿತಿಯನ್ನ ನಾವು ನೀವು ಎಲ್ಲೆಡೆ ಕಾಣುತ್ತೇವೆ.
ಆದರೆ ಇಲ್ಲೊಬ್ಬ ಬಡಪಾಯಿ ಸೈಕಲ್ ರಿಕ್ಷಾ ಚಾಲಕ ತನ್ನಲ್ಲಿರುವ ಪುಡಿಗಾಸನ್ನ ಕೂಡಿಟ್ಟು ತನ್ನ ಹಳೆಯ ಸೈಕಲ್ ರಿಕ್ಷಾಗೆ ಆಧೋನಿಕ ಟಚ್ ಕೊಟ್ಟು ತನ್ನ ಭಾರವನ್ನ ಕಡಿಮೆಮಾಡಿಕೊಂಡಿದ್ದಾನೆ. ಈ ವ್ಯಕ್ತಿಯ ಹೆಸರು ಬಸವರಾಜ್ ಎಂದು.ಅರವತ್ತರ ಆಸುಪಾಸಿನ ಈ ವ್ಯಕ್ತಿ ಆರಾಮವಾಗಿ ಈ ರೀತಿ ಸೈಕಲ್ ರಿಕ್ಷಾವನ್ನ ಚಲಾಯಿಸಿ ಜೀವನ ಸಾಗಿಸುತಿದ್ದಾನೆ, ಕಾರಣ ಈತನ್ನಲ್ಲಿರುವ ಛಲ ಮತ್ತು ಬುದ್ದಿವಂತಿಕೆ.
ಹೌದು ಹೊಸಪೇಟೆ ನಗರದ ಬಳ್ಳಾರಿ ರೋಡ್ ನಿವಾಸಿಯಾಗಿರುವ ಈ ಬಸವರಾಜ್ ಕಳೆದ ನಾಲ್ಕು ದಶಕಗಳಿಂದ ರಿಕ್ಷಾ ಚಲಾಯಿಸಿಕೊಂಡೇ ಬದುಕು ಸಾಗಿಸುತಿದ್ದಾನೆ, ಆದರೆ ಇತ್ತೀಚೆಗೆ ವಯಸ್ಸಾಗುತಿದ್ದಂತೆ ಇವರ ಶಕ್ತಿ ಕಡಿಮೆಯಾಗಿ ಹೇಗಪ್ಪ ಈ ಸೈಕಲ್ ರಿಕ್ಷಾ ತುಳಿದು ದುಡಿಯಬೇಕೆಂದು ಯೋಚನೆಯಾಗಿತ್ತು, ಈ ಮದ್ಯ ಬಸವರಾಜ್ ಅವರಿಗೆ ಕಂಡಿದ್ದೇ ಹಳೆ ಮೊಟರ್ ಸೈಕಲ್ ಇಂಜಿನ್.
ಹೌದು ಗುಜರಿ ಅಂಗಡಿಯಲ್ಲಿ ಕಡಿಮೆ ಬೆಲೆಗೆ ಒಂದು ಮೊಟರ್ ಸೈಕಲ್ ಇಂಜಿನ್ ಖರೀದಿಸಿ ತನ್ನ ಪರಿಚಯಸ್ಥ ವೆಂಕಟೇಶ್ ಎಂಬ ಬೈಕ್ ಮೆಕಾನಿಕ್ ಬಳಿ ಹೋಗಿ ತನ್ನ ಈ ಸೈಕಲ್ ರಿಕ್ಷಾಗೆ ಅಳವಡಿಸಿಕೊಂದ್ದಾನೆ, ಹಾಗಾಗಿ ಈ ಸೈಕಲ್ ರಿಕ್ಷಾ ಈಗ ಹೊಸಪೇಟೆಯ ದುಡಿಯುವ ವರ್ಗದ ಜನ ಸಾಮಾನ್ಯರ ಆಕರ್ಶಣೀಯ ಕೇಂದ್ರ ಬಿಂದು.
ನಗರದ ವಿ.ಆರ್.ಎಲ್. ಸಂಸ್ಥೆಯ ಕೋರಿಯರ್ ಪಾರ್ಸೆಲ್ ಸರ್ವೀಸ್ ನಲ್ಲಿ ಕೆಲಸಮಾಡುವ ಈ ಬಸವರಾಜ್ ಪ್ರತಿದಿನ ನಗರದಲ್ಲಿ ಕಿಲೋಮಿಟರ್ ಗಟ್ಟಲೆ ಸೈಕಲ್ ತುಳಿದು ಸರ್ವೀಸ್ ಕೊಡಬೇಕು, ಅದರಲ್ಲೂ ದಿಬ್ಬ ತಗ್ಗುಗಳು ಬಂದರೆ ಜೀವನವೇ ಸಾಕೆನಿಸಿಬಿಡುವಷ್ಟು ಕಸ್ಟವಾಗುತಿತ್ತು ಈ ಹಿಂದೆ, ಅದು ನಿಜ ಕೂಡ ಹೌದು.
ಆದರೆ ಈ ರಿಕ್ಷಾ ಬೈಕ್ ಸಿದ್ದಪಡಿಸಿದಾಗಿನಿಂದ ಯಾವುದೇ ತೊಂದರೆ ಇಲ್ಲದೆ ಕೆಲಸಮಾಡಿಕೊಂಡು ಸಂಜೆಯಾಗುತಿದ್ದಂತೆ ಆರಾಮವಾಗಿ ದುಡಿದ ಆದಾಯವನ್ನ ಮನೆಗೆ ತೆಗೆದುಕೊಂಡು ಹೋಗುತಿದ್ದಾನೆ, ಪ್ರತಿದಿನ ಒಂದು ನೂರು ರೂಪಾಯಿಯನ್ನ ಕರ್ಚುಮಾಡಿ ಪೆಟ್ರೋಲ್ ಹಾಕಿದ್ರೆ, ಐದು ನೂರರಿಂದಾರು ಆರುನೂರು ರೂಪಾಯಿ ಸಂಪಾದಿಸಿಕೊಂಡು ಮನೆಗೆ ಆರಾಮವಾಗಿ ಜೋಗುತಿದ್ದಾರೆ. ಅದಲ್ಲದೆ ಈ ಹಿಂದೆ ಕಡಿಮೆ ಕೆಸಮಾಡುತಿದ್ದ ಬಸವರಾಜ್ ಈಗ ಎಲ್ಲರಿಗಿಂತ ಹೆಚ್ಚಿಗೆಯೇ ಕೆಸಮಾಡಿಕೊಂಡು ಮನೆಗೆ ಹೋಗುತಿದ್ದಾನೆ, ಇದು ಹೊಸಪೇಟೆ ಜನ ಸಾಮಾನ್ಯರ ಹುಬ್ಬೇರಿಸುವಂತೆಮಾಡಿದೆ.
ವರದಿ:…..
ಸುಬಾನಿ ಪಿಂಜಾರ ವಿಜಯನಗರ.