You are currently viewing ಹೆತ್ತ ಮಗನ ಕಣ್ಣಿಗೆ ಮೆಣಸಿನ ಕಾರದ ಪಡಿ ತುಂಬಿ ಶಿಕ್ಷಿಸಿದ ತಾಯಿ.

ಹೆತ್ತ ಮಗನ ಕಣ್ಣಿಗೆ ಮೆಣಸಿನ ಕಾರದ ಪಡಿ ತುಂಬಿ ಶಿಕ್ಷಿಸಿದ ತಾಯಿ.

ಹೈದ್ರಾಬಾದ್…ತೆಲಂಗಾಣದ ಮಹಿಳೆಯೊಬ್ಬರು ತನ್ನ ಹದಿ ಹರೆಯದ ಮಗನ ಕಣ್ಣಿಗೆ ಕಾರದ ಮೆಣಸಿನ ಪುಡಿಯನ್ನು ಎರಚಿ ಹಿಂಸಿಸಿದ ವಿಡಿಯೋ ಒಂದು ವೈರಲ್ ಆಗಿದೆ. ತಾಯಿ ಈರೀತಿಯಾಗಿ ವಿಕೃತಿ ಮೆರೆಯಲು ಕಾರಣ ಮಾದಕ ವೆಸನಿಯಾಗಿರುವ ತನ್ನ ಮಗನನ್ನು ವೆಸನದಿಂದ ದೂರ ಮಾಡಲು ಮಾಡಿದ ಪರಿ ಇದು.

ಈ ಹಿಂದೆ ತಾಯಿ ಮಾಡಿದ ಎಲ್ಲಾ ಪ್ರಯತ್ನಗಳು ವ್ಯರ್ಥವಾದ ಬಳಿಕ ತನ್ನ ಹದಿನೈದು ವರ್ಷದ ಮಗನನ್ನು ಕಂಬಕ್ಕೆ ಕಟ್ಟಿಹಾಕಿ ಈರೀತಿಯ ಶಿಕ್ಷೆಯನ್ನ ನೀಡಿದ್ದಾರೆ. ಮಾದ್ಯಮಗಳ ವರದಿ ಪ್ರಕಾರ ಸೂರ್ಯಪೇಟ್ ಜಿಲ್ಲೆಯ ರಮಣಮ್ಮ ಎಂಬ ಮಹಿಳೆ ದಿನಗೂಲಿ ಕಾರ್ಮಿಕರಾಗಿದ್ದು. ಆಕೆಯ ಪತಿ ಆಟೋ ರಿಕ್ಷಾ  ಚಾಲಕನಾಗಿದ್ದಾನೆ, ಹೀಗಿದ್ದರು ಅವರ ಮಗನನ್ನ ಕಷ್ಟಪಟ್ಟು ಶಾಲೆಗೆ ಕಳುಹಿಸಿದರೆ, ಅದನ್ನು ಬಿಟ್ಟನು ಗಾಂಜಾಕ್ಕೆ ವ್ಯಸನಿಯಾದ್ದ.

ಇದರಿಂದ ಬೇಸತ್ತ ತಾಯಿ ಹಲವು ಬಾರಿ ಎಚ್ಚರಿಕೆ ಕೊಟ್ಟು ಮಗನನ್ನ ಸರಿ ದಾರಿಗೆ ತರುವ ಪ್ರಯತ್ನಗಳನ್ನ ಮಾಡಿದ್ದರು, ಅದಲ್ಲದೆ 10 ದಿನಗಳಿಂದ ಮನೆಯಿಂದ ನಾಪತ್ತೆಯಾಗಿ ಮಾದಕ ದ್ರವ್ಯ ಸೇವಿಸಿ ಮತ್ತೆ ಮರಳಿ ಮನೆಗೆ ಬಂದಾಗ ಬೇಸತ್ತ ತಾಯಿ, ಮಗನನ್ನ ಕಂಬಕ್ಕೆ ಕಟ್ಟಿ ಹಾಕಿ ಕಣ್ಣಿಗೆ ಮೆಣಸಿನ ಪುಡಿ ಎರಚಿ ಗಾಂಜಾ ಸೇವನೆ ಕೈ ಬಿಡುವವರೆಗೆ ಶಿಕ್ಷೆ ನೀಡುವುದಾಗಿ ಎಚ್ಚರಿಸಿದ್ದಾಳೆ. ಈ ವಿಡಿಯೋವನ್ನು ಮನೆಯ ನೆರೆ ಹೊರೆಯವರು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದು ತಾಯಿ ದಂಡಿಸಿದ ಕ್ರಮವನ್ನ ಸಾಮಾಜಿಕ ಜಾ. ಆದರೆ ಇದನ್ನ ಗಮನಿಸಿದ ಸ್ಥಳೀಯ ಪೊಲೀಸರು ತಾಯಿ ರಮಣಮ್ಮ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ವೀಡಿಯೊ ವೈರಲ್ ಆಗುತಿದ್ದಂತೆ ತೆಲಂಗಾಣ ಪ್ರದೇಶದ ಬಹುತೇಕ ಕಡೆಗಳಲ್ಲಿ ಗಾಂಜಾ ಸಪ್ಲೈಮಾಡುತಿದ್ದ ಹೊಟೆಲ್ ಪಬ್ ಗಳ ಮೇಲೆ ಪೊಲೀಸರು ದಾಳಿ ನಡೆಸುತ್ತಿದ್ದಾರೆ.

ವರದಿ ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.