ವಿಜಯನಗರ…ಹೌದು ವಿಶ್ವ ವಿಖ್ಯಾತ ಹಂಪಿಯಲ್ಲಿನ ಸ್ಮಾರಕಗಳನ್ನ ಇನ್ನು ಮುಂದೆ ಅಂಬಾರಿಯಲ್ಲಿ ಕುಳಿತು ವೀಕ್ಷಣೆಮಾಡಬಹುದು.ಹಾಗೆಂದು ಕೂಡಲೆ ಮೈಸೂರಿನ ಅಂಬಾರಿಯಲ್ಲ. ಬದಲಾಗಿ ಅಂಬಾರಿಯಂತ ಬಸ್ಸನ್ನ ಸಿದ್ದಪಡಿಸಿರುವ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಈಗ ಹಂಪಿಯಲ್ಲಿ ಪರಿಚಯಿಸುತ್ತಿದೆ.
ಹೀಗೆ ಪ್ರಾರಂಬಿಸಿರುವ ಅಂಬಾರಿ ಬಸ್, ತುಂಗಭದ್ರಾ ಜಲಾಶಯ, ಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್ ಸೇರಿದಂತೆ ಹಂಪಿ ಸ್ಮಾರಕಗಳ ವೀಕ್ಷಣೆಗೆ ಪ್ರವಾಸಿಗರನ್ನ ಹೊತ್ತೊಯ್ಯಲಿದೆ.ಈ ಬಸ್ ಸಂಚರಿಸುವಾಗ ವಿದ್ಯುತ್ ತಂತಿ ಹಾಗು ಮರಗಿಡಗಳು ಅಡ್ಡಿಯಾಗಲಿವೆಯೇ ಎಂಬುದನ್ನು ಪರಿಸೀಲಿಸುವ ಸಂಭಂದ ಗುರುವಾರ ಪ್ರಾಯೋಗಿಕವಾಗಿ ಅಂಬಾರಿ ಬಸ್ ಓಡಿಸಲಾಯಿತು.
ಈ ಬಸ್ ನಲ್ಲಿ ಪ್ರಾಧಿಕಾರದ ಆಯುಕ್ತ ಸಿದ್ದರಾಮೇಶ್ವರ, ಆರ್ ಎಫ್ ಒ ವಿನಯ್, ಜೆಸ್ಕಾಂ ಅಧಿಕಾರಿ ಉಮೇಶ್, ಆರ್ ಟಿ ಒ ಇನ್ಸ್ ಪೆಕ್ಟರ್ ಸಂದೀಪ್ ಮತ್ತಿತರರು ಸಂಚರಿಸಿದರು.ಹೀಗೆ ಪ್ರಾರಂಭವಾಗುವ ಈ ಅಂಬಾರಿ ಬಸ್ ಪ್ರವಾಸಿಗರನ್ನ ಎಲ್ಲಿಂದ ಪಿಕಪ್, ಡ್ರಾಪ್ ಮಾಡಬೇಕು ಎಂದು ತೀರ್ಮಾನಿಸಿಲ್ಲ, ಇದರ ಜೊತೆ ಈ ಬಸ್ಸಲ್ಲಿ ಪ್ರಯಾಣಿಸುವ ಪ್ರತಿಯೊಬ್ಬ ಪ್ರವಾಸಿಗನಿಗೆ ಇಂತಿಷ್ಟು ಧರ ಎಂದು ಇನ್ನೂ ನಿಗದಿಮಾಡಿಲ್ಲ.
ವರದಿ..ಸುಬಾನಿ ಪಿಂಜಾರ ಹಂಪಿ ಮಿರರ್ ವಿಜಯನಗರ.